![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 3, 2022, 8:17 PM IST
ಹುಣಸೂರು : ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ 7 ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆಸಲು ವಿಫಲ ಯತ್ನ ನಡೆಸಿದ ವ್ಯಕ್ತಿಯನ್ನು ಗ್ರಾಮಸ್ಥರೇ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿ ಚಲ್ಲಹಳ್ಳಿ ಗ್ರಾಮದ ತಿಪ್ಪೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದ್ದು, ಪಕ್ಕದ ಹೊಸಪುರ ಗ್ರಾಮದ ಮಧ್ಯ ವಯಸ್ಕ ಕಾಳನಾಯ್ಕ ಅತ್ಯಾಚಾರವೆಸಲು ಯತ್ನಿಸಿದ ಕಾಮುಕನಾಗಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಟಮಟ ಮಧ್ಯಾಹ್ನದ ವೇಳೆ ಮನೆಯ ಮುಂದೆ ಒಂಟಿಯಾಗಿ ಆಟವಾಡುತ್ತಿದ್ದ ಮಗುವನ್ನು ಚಾಕೊಲೇಟ್ ಕೊಡಿಸುತ್ತೇನೆಂದು ಪುಸಲಾಯಿಸಿ, ಊರಹೊರಗಿನ ಜಮೀನಿನಲ್ಲಿ ಹಾಕಿದ್ದ ಹುಲ್ಲಿನ ಮೆದೆಯ ಬಳಿ ಕರೆದೊಯ್ದು ಅತ್ಯಾಚಾರ ನಡೆಸಲು ಯತ್ನಿಸಿದ ವೇಳೆ ಮಗು ಆರೋಪಿಯ ಕೈಕಚ್ಚಿ ತಪ್ಪಿಸಿಕೊಂಡು ಓಡಿಹೋಗಿ ಅಜ್ಜಿಯ ಬಳಿ ಹೇಳಿದೆ. ಕೂಡಲೇ ಅಜ್ಜಿ ಊರವರಿಗೆ ತಿಳಿಸಿದಾಗ, ಆರೋಪಿ ನಾಡಪ್ಪನಹಳ್ಳಿಯ ಕೆರೆಯಬಳಿ ಸಾಗುತ್ತಿದ್ದ ವೇಳೆ ಹಿಡಿದು ಊರಿಗೆ ಕರೆತಂದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ ಹಣ್ಣು ಗಾಯಿ ನೀರುಗಾಯಿ ಮಾಡಿದ್ದಾರೆ. ನಂತರ ಬಿಳಿಕೆರೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಳೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಪತ್ರಿಕೆಗೆ ತಿಳಿಸಿದರು.
ಇದನ್ನೂ ಓದಿ : ಒಲಂಪಿಕ್ ಕ್ರೀಡೆಯಲ್ಲಿ ಭಾಗಿಯಾಗಿ ಚಿನ್ನ ಗೆದ್ದು ಬನ್ನಿ.. :ಕ್ರೀಡಾಪಟುಗಳಿಗೆ ಅಮಿತ್ ಶಾ ಕರೆ
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.