ಹುಣಸೂರು: ವರುಣನ ರುದ್ರ ನರ್ತನ, ನಲುಗಿದ ಬೆಳೆಗಳು-ಮುಳುಗಿದ ಮನೆಗಳು


Team Udayavani, Oct 17, 2022, 8:11 AM IST

ಹುಣಸೂರು: ವರುಣನ ರುದ್ರ ನರ್ತನ, ನಲುಗಿದ ಬೆಳೆಗಳು-ಮುಳುಗಿದ ಮನೆಗಳು

ಹುಣಸೂರು: ಹುಣಸೂರು ತಾಲೂಕಿನಾದ್ಯಂತ ಮುಂದುವರೆದ ಮಳೆಯ ರೌದ್ರನರ್ತನ, ಕೆರೆ-ಕಟ್ಟೆಗಳು ಕೋಡಿ ಬಿದ್ದು ಕೊಚ್ಚಿ ಹೋದ ಬೆಳೆಗಳು, ಜಮೀನು,ತೋಟಕ್ಕೆ ನುಗ್ಗಿದ ಪ್ರವಾಹದ ನೀರು, ಕೊಚ್ಚಿಹೋದ ಸಾಮಗ್ರಿಗಳು, ನಗರದ ವಿವಿಧ ಬಡಾವಣೆಗಳ 200ಕ್ಕೂ ಹೆಚ್ಚಿ ಮನೆಗಳು ಜಲಾವೃತ, ರಾತ್ರಿ ಇಡೀ ಜಾಗರಣೆ ಮಾಡಿದ ನಿವಾಸಿಗಳು.

ಕಳೆದೊಂದು ವಾರದಿಂದ ನಿತ್ಯ ರಾತ್ರಿ ಸುರಿಯುತ್ತಿದ್ದ ಮಳೆ ನಗರದಲ್ಲಿ ಸಾಕಷ್ಟು ಹಾನಿಮಾಡಿತ್ತು, ಶನಿವಾರ ರಾತ್ರಿ 10ರ ವೇಳೆಗೆ ಆರಂಭವಾದ ಮಳೆ ಮದ್ಯರಾತ್ರಿ ಗುಡುಗು, ಸಿಡಿಲಿನೊಂದಿಗೆ ಒಂದೇ ಸಮನೆ ಸುರಿಯತೊಡಗಿದ್ದರಿಂದ ನಗರದ ಮಳ್ಳಮ್ಮನಕಟ್ಟೆ ಕೆಳಭಾಗದ ಮಂಜುನಾಥ, ಸಾಕೇತ, ನ್ಯೂ ಮಾರುತಿ ಬಡಾವಣೆಯಲ್ಲಿ ಎಂದಿನಂತೆ ಮಳೆ ನೀರು ನುಗ್ಗಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ರಾತ್ರಿಯಿಡೀ ಮನೆಗಳವರು ನೀರನ್ನು ಹೊರ ಹಾಕಿದರು ಬೆಳಗ್ಗೆ ನಂತರ ನೀರಿನ ಹರಿವು ಕಡಿಮೆಯಾಯಿತು.

ವೃದ್ದರು, ಮಕ್ಕಳನ್ನು ರಕ್ಷಿಸಿದ ನಿವಾಸಿಗಳು:

ಮದ್ಯರಾತ್ರಿವೇಳೆಗೆ ಹೌಸಿಂಗ್ ಬೋಡ್ ಮೇಲಿನ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನ ಕಟ್ಟೆ ತುಂಬಿ ಗುರುಗಳ ಕಟ್ಟೆಗೆ ಸಾಕಷ್ಟು ನೀರು ಹರಿದು ಬಂದಿದ್ದರಿಂದ ಕಟ್ಟೆಯಿಂದ ಒಮ್ಮೆಲೆ ಬಾರೀ ಪ್ರಮಾಣ ನೀರು ಜೊತೆಗೆ ಕಟ್ಟೆಲ್ಲಿ ಬೆಳೆದಿದ್ದ ಅಂತರಗಂಗೆ ನೀರಿನೊಂದಿಗೆ ಹರಿದು ಬಂದು ಹೌಸಿಂಗ್ ಬೋರ್ಡ್ ಕಾಲೋನಿಯ ಚರಂಡಿಗಳಲ್ಲಿ ತುಂಬಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯಲಾರದೆ ಇ.ಡಬ್ಲ್ಯೂ.ಎಸ್, ಎಲ್.ಐ.ಜಿ.ಮನೆಗಳತ್ತ ಒಮ್ಮೆಲೆ ನೀರು ನಿಗ್ಗಿದ್ದರಿಂದ ಮನೆಯೊಳಗಿದ್ದವರಿಗೆ ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಾಗಲೇ ಎದೆ ಮಟ್ಟದ ನೀರು ತುಂಬಿಕೊಂಡಿತ್ತು, ವೃದ್ದರು, ಬಾಣಂತಿಯರು, ಕಾಯಿಲೆ ಯುಳ್ಳುವರನ್ನು ಬಡಾವಣೆ ನಿವಾದಿಗಳು ಮನೆ ಬಾಗಿಲು ಒಡೆದು ಹೊರಕ್ಕೆ ಕರೆತಂದರು, ಅಷ್ಟರಲ್ಲಾಗಲೆ ಮನೆಯೊಳಗಿದ್ದ ದವಸ ಧಾನ್ಯ, ಪಾತ್ರೆ, ಟಿ.ವಿ, ಶಾಲಾ ಪುಸ್ತಕಗಳು ಮತ್ತಿತರ ಬೆಲೆ ಬಾಳುವ ಸಾಮಗ್ರಿಗಳು ಸಹ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ದೊಡ್ಡ ಮೋರಿಯಲ್ಲಿ ಸಿಲುಕಿಕೊಂಡಿತ್ತು, ನೀರಿನ ವೇಗಕ್ಕೆ ಮನೆ ಕಾಂಪೌಂಡ್ ಬಿದ್ದು ಹೋಗಿ ಚರಂಡಿ ಬಂದ್ ಆಗಿದ್ದರಿಂದ ಮೇಲ್ಬಾಗದ ಮನೆಗಳಿಗೂ ನೀರು ತುಂಬಿಕೊಂಡು ಪರದಾಡಿದರು. ಹನಗೋಡು ಕ್ರಾಸ್ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಭಾನುವಾರ ಮದ್ಯಾಹ್ನದ ವರೆಗೆ ಸಂಚಾರ ಬಂದ್ ಆಗಿತ್ತು ಒಮ್ಮೆಲೆ ಮಳೆ ನೀರು ನುಗ್ಗಿದ್ದರಿಂದ ಹೌಸಿಂಗ್ ಬೋರ್ಡ್ ಕಾಲೋನಿಯ ಅನೇಕ ಮನೆಗಳ, ಶೈಕ್ಷಣಿಕ ದಾಖಲಾತಿಗಳು ನಾಶವಾಗಿದೆ.

10 ಟ್ರಾಕ್ಟರ್ ಅಂತರಗಂಗೆ :
ಮುಂಜಾನೆಯೇ ನಗರಸಭೆ ಅಧ್ಯಕ್ಷೆ ಗೀತಾ, ಸದಸ್ಯರಾದ ಸ್ವಾಮಿಗೌಡ, ಅನುಷಾ, ದೇವನಾಯ್ಕ ರವರುಗಳ ನೇತೃತ್ವದಲ್ಲಿ ಪೌರಕಾರ್ಮಿಕರು ಗುರುಗಳಕಟ್ಟೆಯಿಂದ ಪ್ರವಾಹದ ನೀರಿನೊಂದಿಗೆ ಹರಿದು ಬಂದು ಹೌಸಿಂಗ್‌ಬೋರ್ಡ್ನ ಚರಂಡಿಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು ಹತ್ತು ಟ್ರಾಕ್ಟರ್‌ನಷ್ಟು ಅಂತರಗಂಗೆ ಗಿಡಗಳನ್ನು ತೆರವುಗೊಳಿಸಿದ ನಂತರವಷ್ಟೆ ನೀರು ಹರಿದು ಬಡಾವಣೆಗಳವರು ನಿಟ್ಟುಸಿರು ಬಿಟ್ಟರು.

ಒತ್ತುವರಿ ತೆರವಾಗಲಿ ನಿವಾಸಿಗಳ ಮನವಿ:
ವಳ್ಳಿಯಮ್ಮನಕಟ್ಟೆ ಹಾಗೂ ಗುರುಗಳ ಕಟ್ಟೆ ಸುತ್ತಮುತ್ತ ಒತ್ತುವರಿ ಮಾಡಿಕೊಂಡಿದ್ದರಿಂದಾಗಿ ನೀರು ಬಡಾವಣೆಗಳತ್ತ ನುಗ್ಗುತ್ತಿದ್ದು, ಒತ್ತುವರಿಯನ್ನು ತೆರವುಗೊಳಿಸುವಂತೆ ಹಾಗೂ ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಿಕೊಡಲು ನಿವಾಸಿಗಳು ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಡಾ. ಬಗಾಧಿಗೌತಮ್‌ರಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಸೂಚನೆ:
ಮಳೆ ಹಾನಿಗೊಳಗಾಗಿರುವ ಸಾಕೇತ, ಮಂಜುನಾಥ, ನ್ಯೂ ಮಾರುತಿ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ಗುರಗಳಕಟ್ಟೆ, ವಳ್ಳಮ್ಮನಕಟ್ಟೆ ಪ್ರದೇಶಕ್ಕೆ ಶಾಸಕ ಮಂಜುನಾಥ್ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಬಗಾಧಿಗೌತಮ್ ಅಕ್ರಮ ಬಡಾವಣೆ ನಿರ್ಮಾಣವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ, ಬಡಾವಣೆ ನಿರ್ಮಾತೃಗಳ ವಿರುದ್ದ ಕ್ರಮ ಕೈಗೊಂಡಿಲ್ಲವೇಕೆಂದು ಹುಡಾ ಸದಸ್ಯಕಾರ್ಯದರ್ಶಿ ಶ್ರೀಧರ್‌ರನ್ನು ಪ್ರಶ್ನಿಸಿ, ವಳ್ಳಮ್ಮನಕಟ್ಟೆಯಿಂದ ಸರಾಗವಾಗಿ ನೀರು ಹರಿದು ಹೋಗಲು ಅಗತ್ಯವಿರುವೆಡೆ ಚರಂಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕು, ಡೆವಲಪರ್ಸ್ಗಳು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್, ಪೌರಾಯುಕ್ತರಿಗೆ ಸೂಚಿಸಿ, ನಿವೇಶನ ಮಾಲಿಕರ ಮನವೊಲಿಸಿ, ಚರಂಡಿ ನಿರ್ಮಿಸಲು ಬೇಕಿರುವ ನಿವೇಶನವನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿಗೆ ಸೂಚಿಸಿದರು.

ಇದನ್ನೂ ಓದಿ : ಪಾಕ್ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ: ಕಳೆದ ಮೂರು ದಿನದಲ್ಲಿ ನಡೆದ ಎರಡನೇ ಘಟನೆ

ಸಂತ್ರಸ್ತರ ಪ್ರತಿಭಟನೆ: ತಾಲೂಕಿನ ಕಟ್ಟೆಮಳಲವಾಡಿಯ ಶಿಲುಬೆಗೆರೆ ನೀರು ನಂದಿ ಸರ್ಕಲ್ ಬಳಿಯ ಮನೆಗಳಿಗೆ ನುಗ್ಗಿದ್ದು, ಅಲ್ಲಿಯೂ ಸಾಕಷ್ಟು ಹಾನಿಯಾಗಿದೆ, ಇನ್ನು ಯಶೋಧರಪುರ ಕೆರೆ ಕೋಡಿ ಬಿದ್ದು ಹರಿದಿದ್ದರಿಂದ ನಿಲುವಾಗಿಲು ಗ್ರಾಮದ ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿತ್ತಲ್ಲದೆ ನಿಲುವಾಗಿಲು ಕ್ರಾಸ್‌ನ ತೋಟದ ಮೂಲಕ ಲಕ್ಷ್ಮಣತೀರ್ಥ ನದಿಗೆ ಬಾರೀ ಪ್ರಮಾಣ ನೀರು ಭಾನುವಾರ ಸಂಜೆ ವರೆಗೂ ಹರಿದಿತ್ತು. ಪ್ರತಿವರ್ಷದ ಮಳೆಗೆ ನಿಲುವಾಗಿಲಿನಲ್ಲಿ ಅವಾಂತರ ಸೃಷ್ಟಿಯಾಗುವುದರಿಂದ ಸಂತ್ರಸ್ತರು ಹನಗೋಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಶಾಸಕ ಮಂಜುನಾಥ್ ತಹಸೀಲ್ದಾರೊಡಗೂಡಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು. ತುರ್ತಾಗಿ ಅಗತ್ಯ ಕಾಮಗಾರಿ ನಡೆಸುವಂತೆ ಲೋಕೋಪಯೋಗಿ ಹಾಗೂ ಗ್ರಾ.ಪಂ.ನವರಿಗೆ ಸೂಚಿಸಿದರು.

ಈ ವೇಳೆ ಉಪ ವಿಭಾಗಾಧಿಕಾರಿ ವರ್ಣಿತ್‌ನೇಗಿ, ತಹಸೀಲ್ದಾರ್ ಲೆಪ್ಟಿನೆಂಟ್ ಡಾ.ಅಶೋಕ್, ಆರ್.ಐ. ನಂದೀಶ್, ಸರ್ವೆಯರ್ ಚಿಕ್ಕಸ್ವಾಮಿ, ನಗರಸಭೆ
ಅಧ್ಯಕ್ಷೆ ಗೀತಾ, ಸದಸ್ಯೆ ರಾಧಾ, ರಮೇಶ, ಕೋಳಿಮಂಜು, ಪೌರಾಯುಕ್ತೆ ರೂಪಾ, ಎಇಇ ಶರ್ಮಿಳಾ, ಮುಖಂಡರಾದ ರಾಘು, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.