ಹುಣಸೂರು : ಹೈ ಟೆಕ್ ಗ್ರಂಥಾಲಯದ ಸುತ್ತ ಬೆಳೆದು ನಿಂತ ಪಾರ್ಥೇನಿಯಂ ಗಿಡ, ಹಾವುಗಳ ಸಂಚಾರ
Team Udayavani, Jun 1, 2022, 4:14 PM IST
ಹುಣಸೂರು : ತಾಲೂಕಿನ ಬಿಳಿಕೆರೆ ಗ್ರಾಮದ ಹೈಟೆಕ್ ಗ್ರಂಥಾಲಯದ ಸುತ್ತ ಪಾರ್ಥೇನಿಯಂ ಗಿಡ ಬೆಳೆದು ಇಲ್ಲಿ ಓದಲು ಬರುವವರಿಗೆ ಕಿರಿಕಿರಿ ಉಂಟಾದರೆ ಇನ್ನೊಂದೆಡೆ ಹಾವುಗಳ ಆವಾಸಸ್ಥಾನವೂ ಆಗಿದೆ.
ತಾಲೂಕಿನ ಪ್ರಥಮ ಡಿಜಿಟಲ್ ಗ್ರಂಥಾಲಯವನ್ನು ಗ್ರಾಮ ಪಂಚಾಯ್ತಿ ವತಿಯಿಂದ 10.30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿ ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿತ್ತಾದರೂ. ಇತ್ತೀಚೆಗೆ ಗ್ರಂಥಾಲಯದ ಸುತ್ತ ಮುತ್ತ ಹಾಗೂ ಮುಂಭಾಗದ ಪಾಕ್೯ನಲ್ಲಿ ಆಳೆತ್ತರದ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದ್ದು ಪಾರ್ಕ್ ಒಳಗೆ ಯಾರೂ ಹೋಗದ ಸ್ಥಿತಿ ನಿರ್ಮಾಣಗೊಂಡಿದೆ. ಈ ಕುರಿತು ಇಲ್ಲಿನ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಶೌಚಾಲಯವಿದ್ದರೂ ಆವರಣದಲ್ಲಿ ಬೆಳೆದು ನಿಂತಿರುವ ಪಾರ್ಥೇನಿಯಂ ಗಿಡಗಂಟಿಗಳಲ್ಲಿ ರಾಶಿಯಲ್ಲಿ ಹಾವುಗಳು ಓಡಾಡುತ್ತಿದ್ದು, ಶೌಚಾಲಯಕ್ಕೂ ತೆರಳದಂತಾಗಿದ್ದು. ಇಲ್ಲಿಗೆ ಬರುವ ಕೆಲವರು ಗ್ರಂಥಾಲಯದ ಕಾಂಪೌಂಡನ್ನೇ ಬಯಲು ಶೌಚಾಲಯವಾಗಿಸಿ ಕೊಂಡಿದ್ದರಿಂದಾಗಿ ದುರ್ವಾಸನೆ ಬೀರುತ್ತಿದೆ.
ಇದನ್ನೂ ಓದಿ : ಬದುಕಲು ಅವಕಾಶ ಕೊಡಿ: ಕಾಶ್ಮೀರಿ ಪಂಡಿತರು ಕಣಿವೆ ಪ್ರದೇಶ ತೊರೆಯದಂತೆ ದಿಗ್ಬಂಧನ
ಗ್ರಂಥಾಲಯದಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರೀರ್ಜಾಜ್ ಮಾಡಿಸದೆ 3 ತಿಂಗಳು ಕಳೆದಿದೆ. ಪದವಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬೇಕಾದ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು, ಕುಡಿಯುವ ನೀರಿನ ಸೌಲಭ್ಯ ಇದ್ದರೂ ಆವರಣದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಪಾರ್ಥೇನಿಯಂನಿಂದಾಗಿ ಗ್ರಂಥಾಲಯದಿಂದ ವಿದ್ಯಾರ್ಥಿಗಳನ್ನು ವಿಮುಖರಾಗುವಂತೆ ಮಾಡಿದ್ದು. ಇಲ್ಲಿನ ಗ್ರಾ.ಪಂ.ಪಿಡಿಓರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನಾದರೂ ಪಾರ್ಥೇನಿಯಂ ತೆರವಿಗೆ ಮುಂದಾಗುವಂತೆ ವಿದ್ಯಾರ್ಥಿಗಳು ಗ್ರಾಮ ಪಂಚಾಯ್ತಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು.
ಸ್ಪಂದಿಸದಿದ್ದಲ್ಲಿ ಗ್ರಾ.ಪಂ.ಕಚೇರಿ ಎದುರು ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.