ಹುಣಸೂರು: ಹಾಡು ಹಗಲೇ ಮನೆ ಮುಂದೆ ಚಿರತೆ ಪ್ರತ್ಯಕ್ಷ; ಜನರಲ್ಲಿಆತಂಕ
Team Udayavani, Oct 5, 2022, 10:18 PM IST
ಹುಣಸೂರು: ಮನೆ ಮುಂದೆಯೇ ಹಗಲು, ರಾತ್ರಿ ವೇಳೆ ಭಾರೀ ಗಾತ್ರದ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಬೀತಗೊಳಿಸಿರುವ ಘಟನೆ ತಾಲೂಕಿನ ಹಳೇವಾರಂಚಿ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹಳೆವಾರಂಚಿ ಗ್ರಾಮದ ರವಿಯವರ ಮನೆ ಹತ್ತಿರದಲ್ಲೇ ಮಂಗಳವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿದ್ದು, ರವಿಯವರ ಪತ್ನಿ ಕವಿತಾ ಮನೆ ಮುಂದಿನ ಜಮೀನಿಗೆ ತೆರಳಿದ ವೇಳೆ ಚಿರತೆ ಕಂಡು ಗಾಬರಿಯಿಂದ ಕೂಗಿ ಓಡಿ ಬಂದು ಮನೆ ಸೇರಿಕೊಂಡು ಅಪಾಯದಿಂದ ಪಾರಾಗಿದ್ದಾರೆ.
ಈ ನಡುವೆ ಗ್ರಾಮಸ್ಥರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದರಾದರೂ ಪರಾರಿಯಾಗಿತ್ತು. ಮತ್ತೆ ರಾತ್ರಿ ಮನೆಯವರು ಮಗುವಿನ ಜೊತೆ ಹೊರಗೆ ಬಂದಿದ್ದಾರೆ. ಆಗ ತೆಂಗಿನ ಮರದ ಬಳಿ ಮತ್ತೆ ಕತ್ತಲಲ್ಲಿ ಚಿರತೆ ಕಂಡು ಮನೆಯೊಳಕ್ಕೆ ಓಡಿಹೋಗಿ ಮೊಬೈಲ್ ಮೂಲಕ ಚಿರತೆ ಚಿತ್ರವನ್ನು ಸೆರೆ ಹಿಡಿದಿದ್ದಾರೆ.
ಇದೀಗ ಗ್ರಾಮದಲ್ಲಿ ಆತಂಕ ಮನೆಮಾಡಿದ್ದು, ಓಡಾಡಲು ಹೆದರುತ್ತಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆಯನ್ನು ಶೀಘ್ರವೇ ಸರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೆರೆ ಹಿಡಿಯಲು ಕ್ರಮ
ಈಗಾಗಲೆ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿರುವುದರಿಂದ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಲಾಗುವುದು. ಜನರು ಎಚ್ಚರಿಕೆಯಿಂದ ಓಡಾಡಬೇಕೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್ ಎಫ್ ಓ ನಂದಕುಮಾರ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.