ಕರ್ನಾಟಕ ಲಾಕ್ ಡೌನ್ : ಮನೆ ಕೆಲಸದಲ್ಲಿ ಪತ್ನಿಗೆ ಸಹಾಯ ಮಾಡುವ ಮೂಲಕ ಮಾದರಿಯಾದ ಶಾಸಕರು
Team Udayavani, Mar 27, 2020, 4:48 PM IST
ಹುಣಸೂರು: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗರೂಕತಾ ಕ್ರಮವಾಗಿ ರಾಷ್ಟ್ರಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಣೆಯಾಗಿರುವ ಕಾರಣ ಜನರೆಲ್ಲರೂ ಮನೆ ಅಗತ್ಯ ಕೆಲಸಗಳಿಗ ಹೊರತುಪಡಿಸಿ ಮನೆಯಿಂದ ಹೊರಬರುವಂತಿಲ್ಲ. ಇದಕ್ಕೆ ರಾಜಕಾರಣಿಗಳೂ ಹೊರತಾಗಿಲ್ಲ. ಅದರಲ್ಲೂ ಶಾಸಕರೆಂದರೆ ಅವರಿಗೆ ಬಿಡುವೇ ಸಿಗುವುದು ಅಪರೂಪ. ಪ್ರತೀದಿನ ಬೆಳಿಗ್ಗೆ ಮನೆಯಿಂದ ಹೊರಟರೆ ತಮ್ಮ ರಾಜಕೀಯ ಕೆಲಸಕಾರ್ಯಗಳನ್ನು ಮುಗಿಸಿ ಮನೆ ಸೇರುವ ಹೊತ್ತಿಗೆ ರಾತ್ರಿಯಾಗಿರುತ್ತದೆ.
ಆದರೆ ಇದೀಗ ರಾಜಕಾರಣಿ, ಪ್ರಜೆ, ಸಿನಿ ತಾರೆ ಎಂಬ ಬೇಧವಿಲ್ಲದೆ ಎಲ್ಲರನ್ನೂ ಮನೆಯಲ್ಲಿ ಬಂಧಿಸಿಟ್ಟಿದೆ ಕಣ್ಣಿಗೆ ಕಾಣದ ಒಂದು ವೈರಸ್!
ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಅವರು ತಮ್ಮ ಮನೆಯಲ್ಲಿ ಪಾತ್ರಗಳನ್ನು ಸ್ವಚ್ಛಗೊಳಿಸುವ ಮೂಲಕ ಪತ್ನಿ ಸುಪ್ರಿಯಾ ಅವರಿಗೆ ಅಡುಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿರುವ ವಿಡಿಯೋ ಇದು. ಮನೆಯಲ್ಲಿ ಕುಳಿತು ಏನಪ್ಪಾ ಮಾಡುವುದು ಎಂದು ಮಂಡೆಬಿಸಿ ಮಾಡಿಕೊಂಡಿರುವ ಪತಿರಾಯರೆಲ್ಲರಿಗೂ ಶಾಸಕರ ಈ ಕಾರ್ಯ ಮಾದರಿಯಾಗಲಿ ಎಂಬ ಉದ್ದೇಶ ನಮ್ಮದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.