ಫೆಕ್ಸ್ ಅಳವಡಿಕೆಗೆ ಕಡಿವಾಣ, ನಾಯಿ-ಹಂದಿ ಹಾವಳಿ ನಿಯಂತ್ರಣವಾಗಲಿ : ಸಮೀನಾ ಪರ್ವಿನ್


Team Udayavani, Apr 27, 2022, 8:48 PM IST

ಫೆಕ್ಸ್ ಅಳವಡಿಕೆಗೆ ಕಡಿವಾಣ, ನಾಯಿ-ಹಂದಿ ಹಾವಳಿ ನಿಯಂತ್ರಣವಾಗಲಿ : ಸಮೀನಾ ಪರ್ವಿನ್

ಹುಣಸೂರು : ಹುಣಸೂರು ನಗರಸಭಾ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಫೆಕ್ಸ್ ಅಳವಡಿಕೆಗೆ ಕಡಿವಾಣ, ಆದರೆ ಅನಿವಾ ರ್ಯ ಸಂದರ್ಭಗಳಲ್ಲಿ ಮಾತ್ರ ಕೆಲ ಆಯ್ದ ವೃತ್ತಗಳಲ್ಲಿ ಬಟ್ಟೆಯ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ಕಳಪೆ ಕಾಮಗಾರಿಗೆ ಬಿಲ್ ತಡೆಹಿಡಿಯಿರಿ, ನಗರಸಭೆ ವತಿಯಿಂದ ಖಾತಾ ಅದಾಲತ್ ನಡೆಸಿ, ಹಂದಿ-ನಾಯಿ ಕಾಟ ತಪ್ಪಿಸಿ, ನಗರಸಭೆ ಅಧೀನದ ಥಿಯೇಟರ್ ಮರು ಹರಾಜಿಗೆ ಕ್ರಮವಾಗಲಿ.

ಹೀಗೆ ಪ್ರತಿಬಾರಿಯಂತೆ ಈ ಬಾರಿಯೂ ಹಳೆಯ ವಿಷಯಗಳೇ ಪ್ರಸ್ತಾಪವಾದರೂ, ಫೆಕ್ಸ್ ಅಳವಡಿಕೆಗೆ ಕಡಿವಾಣ, ಬೀದಿ ನಾಯಿ-ಹಂದಿಗಳ ಹಾವಳಿ ನಿಯಂತ್ರಣಗೊಳಿಸಲು ನಿರ್ಣಯಿಸಿದರು.

ಗುರುವಾರ ನಗರಸಭಾಧ್ಯಕ್ಷೆ ಸಮೀನಾಪರ್ವಿನ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸತೀಶ್‌ಕುಮಾರ್ ನಗರದ ಸೌಂದರ್ಯ, ಪರಿಸರ ಹಾಳು ಮಾಡುತ್ತಿರುವ ಫ್ಲೆಕ್ಸ್ಗಳ ಹಾವಳಿ ಹೆಚ್ಚಿದೆ. ಎಲ್ಲ ಪಕ್ಷಗಳವರು, ಹಲವು ಮುಖಂಡರು ಎಲ್ಲೆಂದರಲ್ಲಿ ಇಷ್ಟ ಬಂದ ಹಾಗೆ ಫ್ಲೆಕ್ಸ್ ಅಳವಡಿಸುತ್ತಾರೆ. ವಾರವಾದರೂ ತೆರವುಗೊಳಿಸಲ್ಲಾ, ಹೀಗಾಗಿ ಸಂಪೂರ್ಣ ನಿಷೇಧಿಸಬೇಕೆಂದು ಒತ್ತಾಯಕ್ಕೆ, ಎಲ್ಲಾ ಪಕ್ಷಗಳ ಸದಸ್ಯರು ಫ್ಲೆಕ್ಸ್ಗಳ ನಿಷೇದಕ್ಕೆ ಸಂಪೂರ್ಣ ಬೆಂಬಲಿಸಿದರು. ಈ ವೇಳೆ ಪೌರಾಯುಕ್ತ ರವಿಕುಮಾರ್ ಸರಕಾರ 2016ರಲ್ಲೇ ಪ್ಲಾಸ್ಟಿಕ್, ಫ್ಲೆಕ್ಸ್ಗಗಳ ನಿಷೇಧಿಸಿದೆ. ವಿದ್ಯುತ್‌ಕಂಬಗಳಿಗೆ ಅಳವಡಿಸುವಂತಿಲ್ಲಾ, ಪ್ಲಾಸ್ಟಿಕ್‌ ಫ್ಲೆಕ್ಸ್ ಗಳನ್ನು ಬಳಸುವಂತಿಲ್ಲಾ, ಉಲ್ಲಂಘಿಸಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಆದರೆ ಕೆಲ ಅನಿವಾರ್ಯ ಸಂದರ್ಭಗಳಲ್ಲಿ ನಗರಸಭೆ ನಿಗಧಿಗೊಳಿಸುವ ಸ್ಥಳಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಬಟ್ಟೆ ಫೆಕ್ಸ್ ಗಳ ಅಳವಡಿಕೆಗೆ ಅವಕಾಶ ಕಲ್ಪಿಸಲಾಗುವುದು. ಅಂದೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಡಿಪಾಸಿಟ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದೆಂಬ ಸಲಹೆಗೆ ಸದಸ್ಯರು ಒಪ್ಪಿಕೊಂಡರು.

ನಗರದ ಎಚ್.ಡಿ.ಕೋಟೆ ಸರ್ಕಲ್, ಕಲ್ಕುಣಿಕೆ ಸರ್ಕಲ್, ರಂಗನಾಥ ಬಡಾವಣೆ ಹಾಗೂ ನರಸಿಂಹಸ್ವಾಮಿತಿಟ್ಟು ಬಳಿಯ ಡಿ.ಎಲ್.ಬಳಿ ಬಟ್ಟೆ ಫ್ಲೆಕ್ಸ್ ಗಳ ಅಳವಡಿಕೆಗೆ ಅವಕಾಶ ಕಲ್ಪಿಸಲಾಗುವುದೆಂದು ಪ್ರಕಟಿಸಿದರು.

ಇದನ್ನೂ ಓದಿ : ಹಿಜಾಬ್ ವಿವಾದಕ್ಕೆ ಸಿಲುಕಿದ ಸೇನಾ ಶಾಲೆ : ಕಾಶ್ಮೀರದಲ್ಲಿ ಹಲವರ ಖಂಡನೆ

ಖಾತಾ ಅದಾಲತ್ ನಡೆಸಿ;
ನಗರಸಭೆಯಲ್ಲಿ ನಾಗರೀಕರು ಖಾತೆ ಬದಲಾವಣೆ, ನಮೂನೆ-3 ಸೇರಿದಂತೆ ಯಾವುದೇ ದಾಖಲಾತಿ ಪಡೆದುಕೊಳ್ಳಲು ವರ್ಷಗಟ್ಟಲೆ ಅಧಿಕಾರಿ-ಸಿಬ್ಬಂದಿಗಳು ಅಲೆದಾಡಿಸುತ್ತಾರೆ. ತೆರಿಗೆ ಪಾವತಿಸಲು ಬರುವ ಸಾಮಾನ್ಯರಿಗೂ ಕಿರುಕುಳವಿದೆ. ಸದಸ್ಯರ ಕೆಲಸವು ಆಗುತ್ತಿಲ್ಲ, ಹಳೇ ದಾಖಲೆಗಳನ್ನು ಕೇಳಿ ಸತಾಯಿಸುತ್ತಾರೆ. ನಿಮ್ಮಿಂದಾಗಿ ಜನರು ಶಾಪ ಹಾಕುತ್ತಿದ್ದಾರೆ. ಜನರ ಪಾಲಿಗೆ ನರಕಸಭೆಯಾಗಿದೆ ಎಂದು ಬಿಜೆಪಿ ಸದಸ್ಯ ಗಣೇಶ್‌ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರೆ, ಶರವಣ, ಕೃಷ್ಣರಾಜಗುಪ್ತ, ಸ್ವಾಮಿಗೌಡ, ವಿವೇಕ್, ಹರೀಶ್ ಮತ್ತಿತರ ಸದಸ್ಯರು ಇದು ಸತ್ಯಸಂಗತಿ, ಅಗತ್ಯ ಕ್ರಮವಾಗಬೇಕೆಂದು ಪೌರಯುಕ್ತರನ್ನು ಒತ್ತಾಯಿಸಿದರೆ, ಗುಪ್ತರವರು ಇದಕ್ಕಾಗಿ ಪ್ರತಿ ಮಾಹೆ ಖಾತಾಅದಾಲತ್ ನಡೆಸಿರೆಂಬ ಸಲಹೆಗೆ ಹಾಗೂ ಸ್ವಾಮಿಗೌಡ ಈ ಹಿಂದಿನ ಸಭೆಗಳಲ್ಲಿ ನಿರ್ಣಯಿಸಿದ ಯಾವೊಂದು ಸಲಹೆ, ತೀರ್ಮಾನಗಳು ಅನುಷ್ಟಾನಗೊಳ್ಳುತ್ತಿಲ್ಲ, ಮುಂದೆ ಹೀಗಾಗದಂತೆ ಕ್ರಮವಹಿಸಿರೆಂಬ ಆಗ್ರಹಕ್ಕೆ, ಇಲ್ಲಿ ಸಿಬ್ಬಂದಿಗಳ ಕೊರತೆಇದೆ. ಆದರೂ ಅಗತ್ಯಕ್ರಮ ತೆಗೆದುಕೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದರು.

ಕಳಪೆ ಕಾಮಗಾರಿ ಬಿಲ್‌ ಸ್ಥಗಿತಕ್ಕೆ ಒತ್ತಾಯ;
ಇತ್ತೀಚೆಗೆ 32ಲಕ್ಷರೂ ವೆಚ್ಚದಡಿ ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವಿಕೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಯಾವ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಇಷ್ಟ ಬಂದ ಹಾಗೆ ಕಳಪೆ ಕಾಮಗಾರಿ ನಡೆಸಿದ್ದಾರೆ. ಗುತ್ತಿಗೆದಾರನಿಗೆ ಬಿಲ್ ಪಾವತಿಸಬಾರದೆಂದು ಕ್ರಷ್ಣರಾಜಗುಪ್ತ ಓತ್ತಾಯಕ್ಕೆ ಬಹುತೇಕ ಸದಸ್ಯರು ಬೆಂಬಲಿಸಿದರು. ಮೂರನೇ ಸಂಸ್ಥೆಯಿಂದ ತನಿಖೆ ನಂತರವಷ್ಟೆ ಸದಸ್ಯರ ಗಮನಕ್ಕೆ ತಂದು ಬಿಲ್ ಪಾವತಿಸಲಾಗುವುದೆಂದು ಪೌರಾಯುಕ್ತರು ಭರವಸೆ ಇತ್ತರು.

ಥೀಯೇಟರ್ ಮರುಹರಾಜು ಮಾಡಿ;
ನಗರಸಭೆಯ ಎಸ್‌ಸಿವಿಡಿಎಸ್ ಸಿನಿಮಾ ಥಿಯೇಟರ್ ಬಾಡಿಗೆ ಬಾಕಿ 75ಲಕ್ಷ ಮೀರಿದ್ದು, ಅವರಿಂದ ಬಾಕಿ ವಸೂಲಿಗೆ ಕ್ರಮವಹಿಸಬೇಕೆಂದು ಸದಸ್ಯ ಶರವಣ ಒತ್ತಾಯಕ್ಕೆ, ಎರಡುವರ್ಷಗಳಿಂದ ಥಿಯೇಟರ್ ನಡೆಯುತ್ತಿಲ್ಲಾ, ಕಟ್ಟಡ ಹಾಳಾಗಲಿದ್ದು, ತಕ್ಷಣವೇ ನಗರಸಭೆ ವಶಕ್ಕೆ ಪಡೆದು ಬೇರೆಯವರಿಗೆ ಬಾಡಿಗೆ ನೀಡುವಂತೆ ಸದಸ್ಯರು ಸೂಚನೆಗೆ ಕ್ರಮವಹಿಸುವುದಾಗಿ ಪೌರಾಯುಕ್ತರು ತಿಳಿಸಿದರು. ಮಳಿಗೆಗಳ ಹರಾಜಾಗಿ ಎರಡು ತಿಂಗಳಾಗುತ್ತಿದ್ದರೂ ಇನ್ನೂ ಒಪ್ಪಂದವೇಕೆ ಮಾಡಿಕೊಂಡಿಲ್ಲಾ, ಇದರಿಂದ ಲಕ್ಷಾಂತರರೂ ಆದಾಯ ಖೋತವಾಗುತ್ತಿದೆ ಎಂಬ ಸದಸ್ಯರ ಆರೋಪಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.

ಹಂದಿ-ನಾಯಿ ಹಾವಳಿ ತಪ್ಪಸಿ;
ನಗರದಾದ್ಯಂತ ಹಂದಿ-ನಾಯಿಗಳ ಹಾವಳಿ ವಿಪರೀತವಾಗಿ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯ ಕ್ರಮವಹಿಸಬೇಕೆಂದು ಸದಸ್ಯರಾದ ಆಂಡಿ, ಸಮೀನಾಬಾನು, ರಾಧ, ಗೀತಾನಿಂಗರಾಜು, ರಾಣಿಪೆರುಮಾಳ್ ಒತ್ತಾಯಕ್ಕೆ ಅಗತ್ಯಕ್ರಮವಹಿಸಲಾಗಿದೆ ಎಂದು ಪೌರಾಯುಕ್ತ ತಿಳಿಸಿದರು. ಪ್ರಿಯಾಂಕಥಾಮಸ್ ಮಳೆಹಾನಿಯಿಂದ ತಿಟ್ಟಿನಲ್ಲಿ ಕೂಲಿ ಕಾರ್ಮಿಕ ನಜೀರ್‌ಷರೀಫ್ ಮನೆ ನೀಡಿಲ್ಲವೆಂಬ ದೂರಿಗೆ ಈ ಬಾರಿಯೇ ಮನೆ ನಿರ್ಮಿಸಿಕೊಡಲಾಗುವುದೆಂಬಭರವಸೆ ಸಿಕ್ಕಿತು. ಚರ್ಚೆಯಲ್ಲಿ ದೇವರಾಜು ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.