ಹುಣಸೂರನ್ನು ಅರಸರ ಜಿಲ್ಲೆಯಾಗಿಸಲು ಮನವಿ


Team Udayavani, Aug 20, 2021, 8:02 PM IST

hunasuru news

ಹುಣಸೂರು:ಉಪ ವಿಭಾಗ ಕೇಂದ್ರವಾದ ಹುಣಸೂರನ್ನು ದೇವರಾಜ ಅರಸರ ಹೆಸರಿನಲ್ಲಿ ಜಿಲ್ಲೆಯಾಗಿಸುವ ಕನಸಿಗೆ ಸೇತುವೆಯಾಗಬೇಕೆಂದು ಶಾಸಕರಾದ ಎಚ್.ಪಿ.ಮಂಜುನಾಥ್ ಹಾಗೂ ಎಚ್.ವಿಶ್ವನಾಥ್‌ರವರು ಸಚಿವ ಎಸ್.ಟಿ.ಸೋಮಶೇಖರ್‌ರಲ್ಲಿ ಮನವಿ ಮಾಡಿದರು.

ಕೊಡಗು ಜಿಲ್ಲಾ ಪ್ರವಾಸದಲ್ಲಿದ್ದ  ಸಚಿವರು ತಾಲೂಕಿನ ಕಲ್ಲಹಳ್ಳಿಯ ಅರಸರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಕ್ಕಪಕ್ಕದಲ್ಲಿನ ಸಮಾಧೀಗಳ ಬಗ್ಗೆ ಶಾಸಕ ಮಂಜುನಾಥರಿಂದ ಮಾಹಿತಿ ಪಡೆದುಕೊಂಡ ನಂತರ ಅರಸರ ಸಮಾಧಿಗೆ ಹೂಮಾಲೆ ಹಾಕಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ನಂತರ  ನಡೆದ ಸರಳ ಸಮಾರಂಭದಲ್ಲಿ ಎಚ್.ವಿಶ್ವನಾಥರು ಆಡಳಿತದ ಹಿತ ದೃಷ್ಟಿಯಿಂದ ೬ ತಾಲೂಕನ್ನೊಳಗೊಂಡ ಹುಣಸೂರನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯನ್ನಾಗಿಸಿ, ಜಿಲ್ಲೆಯಾಗಲು ಎಲ್ಲಾ ಅರ್ಹತೆ ಹೊಂದಿದ್ದು, ಇಲ್ಲಿ ಲಕ್ಷ್ಮಣತೀರ್ಥ,ಕಾವೇರಿ, ಕಬಿನಿ ನದಿಗಳು ಹರಿಯುತ್ತಿವೆ, ವಿಶ್ವ ವಿಖ್ಯಾತ ನಾಗರಹೊಳೆ ಉದ್ಯಾನವಿದೆ. ವಿಶ್ವ ದರ್ಜೆಯ ತಂಬಾಕು ಉತ್ಪಾದಿಸುವ ಕೇಂದ್ರವಾಗಿದ್ದು, ಈ ಸಂಬಂಧ ೬ ತಾಲೂಕುಗಳ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ಎಲ್ಲ ಪಕ್ಷಗಳವರನ್ನು ವಿಶ್ವಾಸಕ್ಕೆ ಪಡೆದು ಚರ್ಚಿಸುತ್ತೇವೆ, ನೀವು ಅರಸರ ಅನುಯಾಯಿಯಾಗಿದ್ದು, ನೀವೇ ಮುಂದಾಳತ್ವವಹಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲೆಯಾಗಿಸುವ ಕನಸನ್ನು ನನಸಾಗಿಸಬೇಕೆಂದು ಮನವಿ ಸಲ್ಲಿಸಿದರು.

ಶಾಸಕ ಎಚ್.ಪಿ.ಮಂಜುನಾಥ್ ದೇವರಾಜ ಅರಸರ ಆಡಳಿತದ ಛಾಪು ದೇಶದೆಲ್ಲೆಡೆ ಇದ್ದು, ಇವರ ನೆನಪಿನಲ್ಲಿ ಹುಣಸೂರನ್ನು ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ನಾನು ಮತ್ತು ವಿಶ್ವನಾಥರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಶೀಘ್ರವೇ ಆಡಳಿತಾತ್ಮಕ ಹಿತದೃಷ್ಟಿಯಿಂದ, ಮುಖ್ಯವಾಗಿ ದಸರಾ ಮತ್ತಿತರ ಪ್ರಮುಖ ಸಂದರ್ಭದಲ್ಲಿ ಇಡೀ ಆಡಳಿತಶಾಹಿ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ತಾಲೂಕುಗಳ ಕೆಲಸ ನೆನೆಗುದಿಗೆ ಬೀಳುತ್ತಿದೆ, ಹೀಗಾಗಿ ಜಿಲ್ಲೆಯ ಮೇಲೆ ಒತ್ತಡ ಕಡಿಮೆ ಮಾಡುವ, ಆದಿವಾಸಿಗಳ ಸಮಸ್ಯೆ ಶೀಘ್ರ ಬಗೆಹರಿಸುವ ಸಂಬಂಧ ಜಿಲ್ಲೆಯಾಗಿಸುವುದು ಅನಿವಾರ್ಯವಾಗಿದೆ. ಹೀಗಾಗಿ ದೇವರಾಜ ಅರಸರ ಕರ್ಮ ಭೂಮಿಯನ್ನು ಜಿಲ್ಲೆಯಾಗಿಸುವ ಮೂಲಕ  ಕೊಡುಗೆ ನೀಡುವಂತೆ ಕೋರಿ, ಶೀಘ್ರದಲ್ಲೇ ಹುಣಸೂರು ತಾಲೂಕಿನ ಎಲ್ಲ ಪಕ್ಷಗಳು, ಸಂಘಸಂಸ್ಥೆಗಳ ಸಭೆ ನಡೆಸಿ, ರೂಪುರೇಷೆ ಹಾಗೂ ಸರಕಾರಕ್ಕೆ ನಿಮ್ಮ ನೇತೃತ್ವದಲ್ಲೇ ಮನವಿ ಸಲ್ಲಿಸಲಾಗುವುದೆಂದರು.

ಇದೇ ವೇಳೆ ನಗರಸಭಾ ಅಧ್ಯಕ್ಷೆ ಅನುಷಾ, ದಸಂಸ ಮುಖಂಡ ನಿಂಗರಾಜಮಲ್ಲಾಡಿ, ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ಜಿಲ್ಲೆಗಾಗಿ ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಜಿಲ್ಲೆಯಾಗಿಸಲು ನನ್ನ ಸಹಮತವಿದೆ: ಸಚಿವ ಸೋಮಶೇಖರ್

ದೇವರಾಜ ಅರಸರ ಶಿಷ್ಯನಾಗಿ ಹುಣಸೂರನ್ನು ಜಿಲ್ಲೆಯಾಗಿಸುವ ನಿಮ್ಮೆಲ್ಲರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಈ ನಾಡಿಗೆ ಅರಸರ ಕೊಡುಗೆ ಅಪಾರವಾಗಿದ್ದು, ಅವರ ಹೆಸರಿನಲ್ಲಿ ಜಿಲ್ಲೆಯಾಗಿಸುವುದು ನನಗೂ ಖುಷಿ ವಿಷಯ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಸೂಕ್ತ ಮಾರ್ಗದರ್ಶನ ನೀಡುವೆ. ನಿಮ್ಮ ಆಶಯದಂತೆ ಪಕ್ಷಬೇಧ ಮರೆತು ನಿಮ್ಮೆಲ್ಲರೊಂದಿಗೆ ಸಕಲ ಮಾಹಿತಿಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣ, ಇದಕ್ಕಾಗಿ ನನ್ನ ಕಚೇರಿಯನ್ನೇ ಬಳಸಿಕೊಳ್ಳಲು ಅವಕಾಶ ನೀಡುವೆನೆಂದು ಹರ್ಷೋದ್ಘಾರದ ನಡುವೆ ಘೋಷಿಸಿದರು.

ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಡ್ರೋನ್ ಪ್ರತಾಪ್ ವಂಚನೆ : ಪ್ರತಾಪ್ ಪಾತ್ರದಲ್ಲಿ ಪ್ರಥಮ್

ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಕೊನೆ ಅವಧಿಯಲ್ಲಿ ಹುಣಸೂರಿಗೆ ನೀಡಿದ್ದ ಎಲ್ಲ ಅನುದಾನವನ್ನು ಹಿಂಪಡೆಯಲಾಗಿದೆಯಲ್ಲಾ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಹೊಸ ಮುಖ್ಯಮಂತ್ರಿ ಇದ್ದಾರಲ್ಲ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿ, ಮೂರು ದಿನಗಳ ಹಿಂದಷ್ಟೆ 4 ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆಲ್ಲಾ ಎಂದು ಮರು ಪ್ರಶ್ನಿಸಿದ ಸಚಿವರು ಹೊಸ ಮುಖ್ಯಮಂತ್ರಿ ಬೊಮ್ಮಾಯಿಯವರು ಹಣ ಬಿಡುಗಡೆ ಮಾಡುತ್ತಾರೆಂದರೆ, ಎಂ.ಎಲ್.ಸಿ.ವಿಶ್ವನಾಥರು ಶೀಘ್ರ ಚಿಲ್ಕುಂದ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಮುಖ್ಯಮಂತ್ರಿಯೇ ಬರಲಿದ್ದಾರೆಂದು ಪ್ರಕಟಿಸಿದರು.

ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಪ್ರಸನ್ನನಾಯಕ, ಸದಸ್ಯರು. ಜಿ.ಪಂ.ಸಿ.ಇ.ಓ.ಯೋಗೀಶ್, ಇಓ.ಗಿರೀಶ್, ತಹಸೀಲ್ದಾರ್ ಮೋಹನ್‌ಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಬಿ.ಆರ್.ಸಿ.ಸಂತೋಷ್‌ಕುಮಾರ್,   ನಗರಸಭೆ ಅಧ್ಯಕ್ಷೆ ಅನುಷಾ, ಸದಸ್ಯ ಹರೀಶ್‌ಕುಮಾರ್, ವಿವೇಕಾನಂದ, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ತಾ.ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಯೋಗಾನಂದಕುಮಾರ್, ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ಮುಖಂಡರಾದ ಕೆಂಪನಂಜಪ್ಪ, ಬೋಗಪ್ಪ, ಎಚ್.ಪಿ.ಅಮರ್‌ನಾಥ್, ಲೋಕೇಶ್, ಬಸವಲಿಂಗಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.