![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Apr 7, 2021, 11:10 AM IST
ಹುಣಸೂರು: ಪ್ಲಾಸ್ಟಿಕ್ ನಿಷೇಧ ಆದೇಶದ ಹಿನ್ನೆಲೆಯಲ್ಲಿ ನಗರದ ಬಜಾರ್ ರಸ್ತೆಯ ಮಸೀದಿ ಬಳಿಯ ಅಂಗಡಿ ಮೇಲೆ ದಿಢೀರ್ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಸುಮಾರು 200 ಕೆಜಿಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದರಾದರೂ ನಗರಸಭಾ ಸದ್ಯನ ಬೆದರಿಕೆಗೆ ಹೆದರಿ ಬರಿಗೈಯಲ್ಲಿ ವಾಪಾಸಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಬಜಾರ್ ರಸ್ತೆಯ ಸಗಟು ಮಾರಾಟ ಮಳಿಗೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ದಾಸ್ತಾನಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಜಾರ್ ರಸ್ತೆಯ ನಗರಸಭೆ ವಾಣಿಜ್ಯ ಮಳೆಗೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 200 ಕೆಜಿಯಷ್ಟು ಪ್ಲಾಸ್ಟಿಕ್ ಪತ್ತೆಯಾಗಿತ್ತು
ನಗರಸಭೆ ಅಧಿಕಾರಿಗಳ ಸೂಚನೆಯಂತೆ ವಶಪಡಿಸಿಕೊಂಡ ವೇಳೆ ದಿಢೀರ್ ಪ್ರತ್ಯಕ್ಷನಾದ ನಗರಸಭೆ ಸದಸ್ಯ ಮಾಲಿಕ್ ಪಾಷಾ ಯಾರ ಅನುಮತಿ ಪಡೆದು ದಾಳಿ ನಡೆಸುತ್ತಿದ್ದೀರಾ ಜಾಗ ಖಾಲಿ ಮಾಡಿ, ಇಲ್ಲವೇ ಪರಿಸ್ಥಿತಿ ನೆಟ್ಟಗಿರಲ್ಲವೆಂದು ದಮಕಿ ಹಾಕಿದ್ದಾರೆ. ಸಾರ್ವಜನಿಕವಾಗಿ ಅಧಿಕಾರಿಗಳು ಹಾಗೂ ಸದಸ್ಯನ ನಡುವೆ ಮಾತಿನ ಚಕಮಖಿ ನಡೆದಿದೆ.
ಅಂಗಡಿಗೆ ಬೀಗ: ವಶಪಡಿಸಿಕೊಂಡ ಪ್ಲಾಸ್ಟಿಕನ್ನು ಸಾರ್ವಜನಿಕರು ಹೊತ್ತೊಯ್ದರೆ, ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿದರು. ಈ ವೇಳೆ ಬೀಗ ಕಿತ್ತುಕೊಳ್ಳಲು ಮುಂದಾದ ಸದಸ್ಯನಿಗೆ ತಿಳಿ ಹೇಳಿದರೂ ಹಾರಿಕೆ ಉತ್ತರ ನೀಡಿ ನನ್ನ ವಾರ್ಡಿಗೆ ಕಾಲಿಡಲು ನನ್ನ ಅನುಮತಿ ಬೇಕೆಂದು ಧಮಕಿ ಹಾಕಿ ಅಂಗಡಿ ಕಿ ಕಿತ್ತು ಪರಾರಿಯಾಗಿದ್ದಾರೆ.
ಹೆದರಿದ ಅಧಿಕಾರಿಗಳು: ನಗರಸಭೆ ಸದಸ್ಯ ಮಾಲಿಕಾ ಪಾಷಾನ ಬೆದರಿಕೆಗೆ ಹೆದರಿದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.
ಕೆಲಸ ಸ್ಥಗಿತ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ವಾರದ ಹಿಂದೆಯೇ ಏ5 ರಿಂದ ಜಿಲ್ಲಾದ್ಯಂತ ಪ್ಲಾಸ್ಟಿಕ್ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರು. ಅದರಂತೆ ಇಲ್ಲಿನ ಪರಿಸರ ಇಂಜಿನಿಯರ್ ರೂಪಾ, ಆರೋಗ್ಯ ನಿರೀಕ್ಷಕರಾದ ಸತೀಶ್, ಮೋಹನ್, ಧಪೇದಾರ್ ಕೃಷ್ಣೇಗೌಡರ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಗಳ ಮೇಲೆ ದಾಳಿ ನಡೆಸಲು ಮುಂದಾದ ವೇಳೆ ನಗರಸಭೆ ಸದಸ್ಯರೇ ತಡೆಯೊಡ್ಡಿ ಬೆದರಿಕೆ ಹಾಕಿದ್ದು, ಇದರಿಂದ ಕೆಲಸ ನಿರ್ವಹಿಸಲು ತೊಂದರೆ ಆಗುತ್ತಿದೆ. ಸ್ವತಂತ್ರವಾಗಿ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಇಂದಿನಿಂದ ಬಜಾರ್ ರಸ್ತೆಯಲ್ಲಿ ನಗರಸಭೆ ಯಾವುದೇ ಸಿಬ್ಬಂದಿಗಳು ಕಾರ್ಯ ನಿರ್ವ ಹಿಸುವುದಿಲ್ಲ. ಸ್ವತಂತ್ರವಾಗಿ ಕೆಲಸ ಮಾಡಲು ರಕ್ಷಣೆ ಒದಗಿಸುವಂತೆ ಪೌರಾಯುಕ್ತ ರಮೇಶ್ ರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.