ಕೆಆರ್‌ಐಡಿಎಲ್‌ಗೆ ಅನುದಾನ ನೀಡಿದರೂ ಕೆಲಸ ಮಾಡಲ್ಲ… ಎರಡು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ

ಎಲ್ಲಾ ಇಲಾಖೆಗಳು ಸಹಕಾರ ನೀಡಿದಲ್ಲಿ ಬಾಲ್ಯ ವಿವಾಹ ತಡೆಯಲು ಸಾಧ್ಯ

Team Udayavani, Dec 29, 2022, 8:22 PM IST

ಕೆಆರ್‌ಐಡಿಎಲ್‌ಗೆ ಅನುದಾನ ನೀಡಿದರೂ ಕೆಲಸ ಮಾಡಲ್ಲ… ಎರಡು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ

ಹುಣಸೂರು.: ಕಳೆದ ಹತ್ತು ವರ್ಷಗಳಿಂದ ತಾಲೂಕಿನ 32 ಗ್ರಾಮಗಳಲ್ಲಿ ಅಂಬೇಡ್ಕರ್ ಹಾಗೂ ನಾಲ್ಕು ಕಡೆ ಜಗಜೀವನರಾಂ ಭವನ ಸೇರಿದಂತೆ 50 ಕ್ಕೂ ಹೆಚ್ಚು ಕಾಮಗಾರಿಗಳು ಇನ್ನೂ ನೆನೆಗುದಿಗೆ ಬಿದ್ದಿರುವ ಬಗ್ಗೆ ಕೆ.ಆರ್.ಐ.ಡಿ.ಎಲ್ ಸಂಸ್ಥೆ ವಿರುದ್ದ ಬೇಸರ ವ್ಯಕ್ತಪಡಿಸಿ, ಇನ್ನೆರಡು ತಿಂಗಳಲ್ಲಿ ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿ ಮುಗಿಸುವಂತೆ ಇಂಜಿನಿಯರ್‌ಗಳಿಗೆ ತಾ.ಪಂ.ಆಡಳಿತಾಧಿಕಾರಿ ನಂದಾ ಸೂಚಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಕೆಆರ್‌ಐಡಿಎಲ್ ಸಾಕಷ್ಟು ಕಾಮಗಾರಿಗಳನ್ನುವಹಿಸಿ, ಮೊದಲೇ ಅನುದಾನವನ್ನೂ ಬಿಡುಗಡೆ ಮಾಡಿದ್ದರೂ ವಿನಾಕಾರಣ ತಡ ಮಾಡುತ್ತಿದ್ದೀರಾ, ಹೀಗಾದರೆ ಹೇಗೆಂಬ ಆಡಳಿತಾಧಿಕಾರಿ ನಂದಾರ ಅಸಮಾಧಾನಕ್ಕೆ ಕೆಲ ಕಡೆ ನಿವೇಶನದ ವಿವಾದವಿದೆ. ಕೆಲವುಕಡೆಗಳಲ್ಲಿ ಕೆಲಸ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಣಸೂರಿನ ಜಗಜೀವನರಾಂ ಭವನ ಪೂರ್ಣಗೊಳ್ಳಲು ಇನ್ನೂ 17 ಲಕ್ಷ ಬಾಕಿ ಬರಬೇಕಿದ್ದು, ನಗರಸಭೆಯಿಂದ 10 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ. 15 ಹಾಡಿಗಳಲ್ಲಿ ಅಂಗನವಾಡಿಕಟ್ಟಡ, 11 ಮಾದರಿ ಗ್ರಾಮ ಯೋಜನೆ ಹಾಗೂ ಮುಖ್ಯಮಂತ್ರಿಗಳ ಗ್ರಾಮವಿಕಾಸ ಯೋಜನೆಯ 10 ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದೆ, ಚಿಕ್ಕಹುಣಸೂರಚಿಕ್ಕಹುಣಸೂರು ಕೆರೆ ಅಭಿವೃದ್ದಿಗೆ ಇನ್ನೂ 25 ಲಕ್ಷರೂ ಅನುದಾನ ಬರಬೇಕಿದ್ದು, ಅನುದಾನ ಬಂದ ನಂತರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದೆಂದು ಸಹಾಯಕ ಇಂಜಿನಿಯರ್ ವಿಜಯ್ ತಿಳಿಸಿದರು.

ನಿಯಂತ್ರಣದಲ್ಲಿ ಚರ್ಮಗಂಟು ರೋಗ:
ತಾಲೂಕಿನಲ್ಲಿ 74,510 ಜಾನುವಾರುಗಳಿದ್ದು, 55 ರಾಸುಗಳಿಗೆ ಚರ್ಮಗಂಟುರೋಗ ಕಂಡುಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಲಸಿಕೆ ಕೊರತೆ ಕಂಡು ಬಂದ ವೇಳೆ ಖರೀದಿಸಿ ಹಾಗೂ ಡೇರಿ ಕಡೆಯಿಂದ ಲಸಿಕೆ ನೀಡಲಾಗಿದೆ. ಈಗಾಗಲೆ 60,510 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಕಾಲುಬಾಯಿ ಜ್ವರ 73 ಸಾವಿರ ರಾಸುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ತಿಳಿಸಿದರು.

ಬಾಲ್ಯ ವಿವಾಹ ತಡೆಗೆ ಸಹಕಾರ ಸಿಗುತ್ತಿಲ್ಲ:
ಬಾಲ್ಯ ವಿವಾಹ ಒಂದು ಪಿಡುಗಾಗಿದ್ದು, ತಾಲೂಕಿನಲ್ಲಿ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಗನವಾಡಿ ಕಾರ್ಯಕರ್ತೆ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆಂಬ ಕಾರಣಕ್ಕೆ ಮರಳಯ್ಯನಕೊಪ್ಪಲಿನಲ್ಲಿ ಅಂಗನವಾಡಿಗೆ ಮಕ್ಕಳನ್ನೇ ಕಳುಹಿಸುತ್ತಿಲ್ಲ, ಹಲವೆಡೆ ಕಾರ್ಯಕರ್ತೆಯರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ, ತುಂಬಾ ಥ್ರಟನಿಂಗ್ ಇದೆ ಇದಕ್ಕಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರಿದ್ದರೂ ಯಾರೂ ಮುಂದೆ ಬರುತ್ತಿಲ್ಲ, ನಮ್ಮ ಇಲಾಖೆಯಲ್ಲಿರೋದು ಬರೀ ಮಹಿಳೆಯರೇ ನಾವು ಮದ್ಯರಾತ್ರಿಯಲ್ಲಿ ಹೇಗೆ ಹಳ್ಳಿಗೆ ಹೋಗೋದು ಸಾರ್ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 2017- 18 ರಿಂದ 8 ಅಂಗನವಾಡಿಗಳ ಕಟ್ಟಡ ಕಾಮಗಾರಿ ಅರೆಬರೆಯಾಗಿದೆ. ಹೆಗ್ಗಂದೂರು ಕೇಂದ್ರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಕೋರಿದರು.

ಎಲ್ಲರೂ ಸಹಕಾರ ನೀಡಬೇಕು, ಇಓ ಮನು:
ಕ್ರಮತೆಗೆದುಕೊಳ್ಳಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ, ಪ್ರತಿ ಗ್ರಾ.ಪಂ.ನಲ್ಲೂ ಬಾಲವಿಕಾಸ ಸಮಿತಿ ಇದ್ದು, ಇವರ ಸಹಕಾರ ಪಡೆದುಕೊಳ್ಳಿ, ಜೊತೆಗೆ ಇತರೆ ಇಲಾಖಾಧಿಕಾರಿಗಳು ಸಹಕಾರ ನೀಡುವಂತೆ ಸೂಚಿಸಲಾಗುವುದೆಂದು ಇಓ.ಮನು.ಬಿ.ಕೆ. ಭರವಸೆ ಇತ್ತರು.

ವಿಮೆ ಇಲ್ಲದ ವಾಹನಗಳ ಮೇಲೇಕೆ ಕ್ರಮವಿಲ್ಲ: ಮಾಹಿತಿ ಇಲ್ಲವೆಂದ ಎಆರ್‌ಟಿಓ:
ತಾಲೂಕಿನಲ್ಲಿ ಸುಮಾರು 700 ಟ್ರಾಕ್ಟರ್‌ಗಳಿಗೆ ವಿಮೆ ಇಲ್ಲವೆಂಬ ಆತಂಕಕಾರಿ ಮಾಹಿತಿ ಬಂದಿದೆ. ಈಬಗ್ಗೆ ಸಾರಿಗೆ ಇಲಾಖೆ ಯಾವಕ್ರಮವಹಿಸಿದೆ ಎಂಬ ಇಓ ಮನು.ಬಿ.ಕೆ.ರವರ ಪ್ರಶ್ನೆಗೆ ವಿಮೆ ಇಲ್ಲದಿರುವುದು ಗಮನಕ್ಕೆ ಬಂದಿದೆ ಆದರೆ ನಿಖರ ಮಾಹಿತಿ ಇಲ್ಲವೆಂದು ಎ.ಆರ್.ಟಿ.ಓ.ಹೇಮಾವತಿಯವರ ಉತ್ತರಕ್ಕೆ ವಾರದೊಳಗೆ ಕ್ರಮವಾಗಿರುವ ಹಾಗೂ ವಿಮೆ ಇಲ್ಲದ ಟ್ರಾಕ್ಟರ್‌ಗಳ ಬಗ್ಗೆ ಲಿಖಿತ ಮಾಹಿತಿ ನೀಡಬೇಕೆಂದು ಇ.ಓ.ಸೂಚಿಸಿದರು.

ಕೊರೊನಾ ಎಚ್ಚರಿಕೆ ಇರಲಿ:
ರೇಷ್ಮೆ ಬೆಳೆ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ಕ್ಷೇತ್ರೋತ್ಸವಕ್ಕೆ ಹೆಚ್ಚಿನ ರೈತರನ್ನು ಸೇರಿಸಿ, ಅರಣ್ಯ ಇಲಾಖೆ ನಿಗದಿತ ಅವಧಿಯೊಳಗೆ ಕೆಲಸ ಮುಗಿಸುವಂತೆ ಸೂಚಿಸಿದರು. ವಿವಿಧ ಇಲಾಖೆಗಳ ಪರಿಶೀಲನೆ ನಡೆಸಿ, ಕೊರೊನಾ ದಿಂದಾಗಿ ಜನವರಿ-ಫೆಬ್ರವರಿಯಲ್ಲಿ ಸರಕಾರ ಮತ್ತಷ್ಟು ಕಠಿಣ ನಿರ್ದಾರಗಳನ್ನು ಕೈಗೊಳ್ಳಬಹುದಾಗಿದ್ದು, ಆದಷ್ಟು ಶೀಘ್ರ ಕಾಮಗಾರಿಗಳನ್ನು ಮುಗಿಸಬೇಕೆಂದು ಅಧಿಕಾರಿಗಳಿಗೆ ಆಡಳಿತಾಧಿಕಾರಿ ಸೂಚಿಸಿದರು. ತಾ.ಪಂ.ಇಓ ಮನು, ತಾಲೂಕು ಯೋಜನಾಧಿಕಾರಿ ಎಂ.ಎಸ್.ರಾಜೇಶ್ ಇದ್ದರು.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.