Hunasuru: ಸ್ನೇಹಿತರ ಜೊತೆಗೂಡಿ ದೊಡ್ಡಪ್ಪನ ಮನೆಗೆ ಕನ್ನ… ಇಬ್ಬರ ಬಂಧನ
Team Udayavani, Jun 10, 2024, 8:34 AM IST
ಹುಣಸೂರು: ದೊಡ್ಡಪ್ಪನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತರೊಡಗೂಡಿ 3 ಲಕ್ಷ ನಗದು, 35 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದವನ ಹೆಡೆ ಮುರಿ ಕಟ್ಟಿ, 1.27 ಲಕ್ಷ ನಗದು ಹಾಗೂ 1.40ಲಕ್ಷರೂ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಬಿಳಿಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಉದ್ದೂರು ಗ್ರಾಮದ ಶಿವಣ್ಣೇಗೌಡರ ಪುತ್ರ ಮಂಜುನಾಥ, ಈತನ ಸ್ನೇಹಿತರಾದ ಸೂರ್ಯ ಅಲಿಯಾಸ್ ಸೂರಿ ಬಂಧಿತರು. ಇದೇ ಗ್ರಾಮದ ಅಜಯ್ ತಲೆ ಮರೆಸಿಕೊಂಡಿದ್ದಾನೆ.
ತಾಲೂಕಿನ ಧರ್ಮಾಪುರ ಗ್ರಾಮದ ರಾಮೇಗೌಡರ ಮನೆಯಲ್ಲಿ ಜೂ.೭ರಂದು ಹಾಡು ಹಗಲೇ ನಡೆದಿದ್ದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿತ್ತು. ಶಿವಣ್ಣೇಗೌಡರ ಪುತ್ರ ಮಂಜುನಾಥ್ ಧರ್ಮಪುರದ ಅಜ್ಜಿ ಮನೆಗೆ ಬಂದಿದ್ದ, ದೊಡ್ಡಪ್ಪ ರಾಮೇಗೌಡರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಮಂಜುನಾಥ ಸ್ನೇಹಿತರಾದ ಸೂರಿ, ಅಜಯ್‌ನನ್ನು ಕರೆಸಿಕೊಂಡು ಅಜ್ಜಿಯ ಮನೆಗೆ ಹೊಂದಿಕೊಂಡಿದ್ದ ಗೋಡೆ ಹತ್ತಿ, ದೊಡ್ಡಪ್ಪನ ಮನೆಯ ಬೀರುವಿನಲ್ಲಿಟ್ಟಿದ್ದ ೩ಲಕ್ಷ ನಗದು ಹಾಗೂ ಸುಮಾರು 35 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ, ಈ ಸಂಬಂಧ ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ. ಸೀಮಾ ಲಾಟ್ಕರ್ ಸೂಚನೆಯಂತೆ ಅಡಿಷನಲ್ ಎಸ್.ಪಿ.ಗಳಾದ ನಂದಿನಿ ಹಾಗೂ ನಾಗೇಶ್, ಡಿ.ವೈ.ಎಸ್.ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಬಿಳಿಕೆರೆ ಠಾಣೆ ಇನ್ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಮಂಜುನಾಥ ಉದ್ದೂರಿನ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಸ್ನೇಹಿತರಾದ ಸೂರಿ ಮತ್ತು ಅಜಯ್ ರೊಡಗೂಡಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ, ಕೃತ್ಯಕ್ಕೆ ಬಳಸಿದ್ದ ಮಹಿಂದ್ರಾ ಜೀಪ್, 1.27ಲಕ್ಷ ನಗದು, 1.40 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಜಯ್ ತಲೆ ಮರೆಸಿಕೊಂಡಿದ್ದು ಪತ್ತೆಗೆ ಕ್ರಮವಹಿಸಲಾಗಿದೆ. ಎಂದು ಬಿಳಿಕೆರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ .ಎಸ್.ಲೋಲಾಕ್ಷಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್.ಐ.ನಾಗೇಶ್.ಎನ್, ಸಿಬ್ಬಂದಿಗಳಾದ ಪ್ರಸಾದ್‌ಧರ್ಮಾಪುರ, ಪ್ರತಾಪ್, ಶಿವಕುಮಾರ ಹಾಗೂ ಚಾಲಕ ಗೋವಿಂದರಾಜು ಬಾಗವಹಿಸಿದ್ದರು.
ಇದನ್ನೂ ಓದಿ: Ullal ವಿಜಯೋತ್ಸವ ಸಂದರ್ಭ ಚಕಮಕಿ: ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಇರಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.