ಸಂಪನ್ಮೂಲ ಸಂಗ್ರಹಿಸಿ, ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವೆ: ಅಧ್ಯಕ್ಷೆ ಅನುಷಾ
ಹುಣಸೂರು ನಗರಸಭೆ ನೂತನ ಅಧ್ಯಕ್ಷೆಯ ಮನದಾಳ
Team Udayavani, Nov 7, 2020, 2:33 PM IST
ಹುಣಸೂರು: ಹುಣಸೂರು ನಗರಸಭೆಯಾದ ನಂತರ ಪ್ರಥಮ ಬಾರಿಗೆ ಶಾಸಕ ಎಚ್.ಪಿ. ಮಂಜುನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದೆ. 3ನೇ ವಾರ್ಡ್‌ನ ಸದಸ್ಯೆ ಅನುಷಾ ರಘು ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆದು 9 ತಿಂಗಳು ಬಳಿಕ ಸದಸ್ಯರಿಗೆ ಅಧಿಕಾರ ದೊರೆತಿದೆ. ನಗರ ಅಭಿವೃದ್ಧಿ, ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು, ತಮ್ಮಕಾರ್ಯವೈಖರಿ ಕುರಿತು ಅನುಷಾ “ಉದಯವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಗರ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು? :
-ನಗರದಲ್ಲಿ ಶೀಘ್ರವೇ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕರಿಂದತೆ ರಿಗೆ ಹಣ ಕ್ರೋಢೀಕರಿಸಿಕೊಂಡು ವ್ಯವಸ್ಥಿತ ವಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುವೆ.ಮಾದರಿ ನಗರವನ್ನಾಗಿಸಲು ಶ್ರಮಿಸುವೆ.
ಹಿರಿಯ ಸದಸ್ಯರಿದ್ದರೂ ನಿಮ್ಮನ್ನೇ ಆಯ್ಕೆ ಮಾಡಲುಕಾರಣವೇನು? :
-ಹಲವು ಆಕಾಂಕ್ಷಿಗಳು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದು, ತಮಗೆ ಸಹಕಾರ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶೀರ್ವಾದದಿಂದ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವೆ.
ನಗರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆಯಲ್ಲಾ? :
-ನಿಜ, ಕಳೆದ ಒಂದೂವರೆ ವರ್ಷದಿಂದ ನಗರ ಸಭೆಗೆ ಕಾಯಂ ಪೌರಾಯುಕ್ತರಿಲ್ಲ. ಜೊತೆಗೆ 9 ತಿಂಗಳಿನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದರೂ ಅಧ್ಯಕ್ಷರ ಆಯ್ಕೆ ನಡೆಯದೇ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಇದೀಗ ತಾವು ಆಯ್ಕೆಯಾಗಿದ್ದು, ಈಗಾಗಲೇ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಸಂಸದರಿಗೂ ಕಾಯಂ ಪೌರಾಯುಕ್ತರ ನೇಮಕಕ್ಕೆ ಮನವಿ ಮಾಡಲಾಗಿದೆ. ಶೀಘ್ರ ನಗರಾಭಿವೃದ್ಧಿ ಸಚಿವರ ಬಳಿ ಎಲ್ಲಾ ಸದಸ್ಯರ ನಿಯೋಗ ತೆರಳಿ ಕಾಯಂ ಪೌರಾಯುಕ್ತರ ನೇಮ ಕಕ್ಕೆ ಕ್ರಮವಹಿಸಿ, ನನೆಗುದಿಗೆ ಬಿದ್ದಿರುವ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಶ್ರಮಿಸುವೆ.
ವಾರ್ಡ್‌ಗಳಿಗೆ ಮೂಲಭೂತ ಸೌಕರ್ಯಕ್ಕೆ ಯಾವ ಕ್ರಮ ವಹಿಸುವಿರಿ? :
-ನಗರದ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಅನುದಾನದ ಕೊರತೆ ಇದೆ. ಶೀಘ್ರ ಅಧಿಕಾರಿ ಗಳೊಂದಿಗೆ ವಾರ್ಡ್‌ಗಳಿಗೆ ತೆರಳಿ ಕಂದಾಯ ಅದಾಲತ್ ನಡೆಸಿ ತೆರಿಗೆಯಿಂದ ಬರುವ ಹಣ ಹಾಗೂ ಬಾಕಿ ಉಳಿದಿರುವ ನಗರೋತ್ಥಾನ ಅನುದಾನ ಜೊತೆಗೆ ಸರ್ಕಾರದ ವಿವಿಧ ಯೋಜನೆ ಗಳ ಅನುದಾನಕ್ಕೆ ಮೂವರು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸುವೆ. ನಗರದ ಬಹುತೇಕ ವಾರ್ಡ್ ಅಕ್ರಮವೆಂಬ ಹಣೆಪಟ್ಟಿ ಇದೆ. ಸಕ್ರಮ ಖಾತೆ ಮಾಡಿದರೆ ತೆರಿಗೆ ಹೆಚ್ಚಳವಾಗಲಿದೆ ಇದನ್ನು ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತರಲಾಗುವುದು.
ನಿಮ್ಮ ವಾರ್ಡ್‌ನ ಮತದಾರರಿಗೆ ಕೊಡುಗೆ ಏನು? :
-ನನ್ನ ಪತಿ ರಾಘು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದನ್ನು ವರಿಷ್ಠರು ಗುರುತಿಸಿ ಟಿಕೆಟ್ ನೀಡಿದ್ದಲ್ಲದೆ, ಮತದಾರರು ಕೂಡ ಕೈ ಹಿಡಿದಿದ್ದಾರೆ. ವಾರ್ಡ್‌ನಲ್ಲಿ ಕುಡಿವ ನೀರಿನಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇನೆ. ಇದನ್ನು ಪರಿಹರಿಸಲು ಗಮನ ಹರಿಸುವೆ.
ಪರಿಸರ, ಸ್ವಚ್ಛತೆ, ನಗರ ಸೌಂದಯಕ್ಕೆಕ್ರಮ ಏನು? :
-ನಾನು ಈ ನಗರಕ್ಕೆ ಹೊಸಬಳೇನೂ ಅಲ್ಲ. ಇಲ್ಲಿನ ಸೊಸೆ ಜೊತೆಗೆ ಮಗಳು ಸಹ.ನಗರದ ಮಧ್ಯ ಭಾಗದಲ್ಲಿ ಹರಿಯುವ ಜೀವನದಿ ಲಕ್ಷ್ಮಣ ತೀರ್ಥಕ್ಕೆ ಸೇರುವ ಒಳಚರಂಡಿ ನೀರಿನ ದುರ್ವಾಸನೆ, ನದಿಯ ಅವಸ್ಥೆಯನ್ನು ಕಂಡು ಬೇಸತ್ತಿದ್ದೇನೆ. ಇದಕ್ಕೊಂದು ಕಾಯಕಲ್ಪ ನೀಡಲು ಶಾಸಕ, ಸಂಸದ, ಎಂಎಲ್‌ಸಿ ಸಾಧ್ಯವಾದಲ್ಲಿ ಮುಖ್ಯಮಂತ್ರಿಗಳ ಬಳಿಗೆ ಅಧಿಕಾರಿ – ಜನಪ್ರತಿ ನಿಧಿಗಳ ನಿಯೋಗ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಚಿಂತಿಸಿದ್ದೇನೆ.
ಮಹಿಳಾ ಸದಸ್ಯರ ಪತಿಯರೇ ಅಧಿಕಾರ ನಡೆಸುತ್ತಾರೆಂಬ ಅಪವಾದ ಇದೆಯಲ್ಲಾ? :
ನಾನು ಅಧಿಕಾರಕ್ಕೆ ಹೊಸಬಳಿರಬಹುದು. ಆದರೆ ನಾನು ಪದವಿವರೆಗೆ ವ್ಯಾಸಂಗ ಮಾಡಿದ್ದೇನೆ. ಕಾನೂನು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಅಪವಾದದ ಹೊರತಾಗಿ ಆಡಳಿತ ನಡೆಸುತ್ತೇನೆ. ಯಾರ ಪ್ರಭಾವ, ಹಸ್ತಕ್ಷೇಪಕ್ಕೂ ಅವಕಾಶ ನೀಡುವುದಿಲ್ಲ. ಪಾರದರ್ಶಕ ಆಡಳಿತ ನೀಡುವೆ. ಅಧಿಕಾರಿಗಳು ಹಾಗೂಸದಸ್ಯರನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವೆ.
ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.