Hunsur: ಅಸ್ಸಾಂ ಕೂಲಿ ಕಾರ್ಮಿಕರ ಶಾಲೆ ತೊರೆದಿದ್ದ 32 ಮಕ್ಕಳು ಪತ್ತೆ
ಶಾಲೆ-ಅಂಗನವಾಡಿಗೆ ದಾಖಲಿಸಿದ ಅಧಿಕಾರಿಗಳ ತಂಡ
Team Udayavani, Feb 19, 2024, 9:40 PM IST
ಹುಣಸೂರು: ದೂರದ ಅಸ್ಸಾಂನ ನೋಯಾನಗರದಿಂದ ಕೂಲಿ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕರ 32 ಮಕ್ಕಳನ್ನು ಪತ್ತೆ ಹಚ್ಚಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಸರಕಾರಿ ಶಾಲೆ ಹಾಗೂ ಅಂಗನವಾಡಿಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ನಗರಕ್ಕೆ ಸಮೀಪದ ಹಾಲಗೆರೆ ಬಳಿಯ ಕೆ.ಎ.ಅಂಡ್ ಸನ್ಸ್ ಕೋಕೋನೆಟ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಅಸ್ಸಾಂ ರಾಜ್ಯದ ನೋಯಾ ನಗರದಿಂದ ಬಂದಿರುವ 25 ಕ್ಕೂ ಹೆಚ್ಚು ಕುಟುಂಬಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇವರೊಂದಿಗೆ ಮಕ್ಕಳು ಸಹ ಶಾಲೆ ತೊರೆದು ಆಗಮಿಸಿದ್ದು, ಪೋಷಕರೊಂದಿಗಿದ್ದು, ಮಕ್ಕಳ ಶಿಕ್ಷಣ ಮೊಟಕಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತೆ ರಜಿಯಾ ಸುಲ್ತಾನರ ನಿರ್ದೇಶನದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿದೇಶಕ ಮಲ್ಲಿಕಾರ್ಜುನ್, ತಾಲೂಕು ಕಾರ್ಮಿಕ ಅಧಿಕಾರಿ ಲಕ್ಷ್ಮೀಶ ಹಾಗೂ ಶಿಕ್ಷಣ ಇಲಾಖೆಯ ಬಿಆರ್‌ಸಿ ಸಂತೋಷ್‌ಕುಮಾರ್, ಇಸಿಓ ಕುಮಾರಸ್ವಾಮಿ, ಅಂಗನವಾಡಿ ಮೇಲ್ವಿಚಾರಕಿ ಶೋಭಾ ಮತ್ತಿತರ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ಇತ್ತು ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಕಾನೂನು ಪ್ರಕಾರ ಅಪರಾಧವಾಗಲಿದೆ ಎಂದು ತಿಳುವಳಿಕೆ ನೀಡಿ, ಕಾರ್ಖಾನೆ ಮಾಲಿಕರಿಗೆ ಎಚ್ಚರಿಕೆ ನೀಡಿ
6-14 ವರ್ಷದೊಳಗಿನ 23 ಮಕ್ಕಳನ್ನು ಸಮೀಪದ ಯಶೋಧರಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ 9ಮಕ್ಕಳನ್ನು ದಾಖಲಿಸಲಾಯಿತು. ಮಕ್ಕಳು ಖುಷಿಯಿಂದಲೇ ಶಾಲೆ, ಅಂಗನವಾಡಿಗೆ ಪೋಷಕರು ಹಾಗೂ ಅಧಿಕಾರಿಗಳೊಂದಿಗೆ ಹೊರಟರು.
ಮಾಹಿತಿ ಮೇರೆಗೆ ಕಾರ್ಖಾನೆ ಆವರಣದಲ್ಲಿರುವ ವಸತಿ ಗೃಹದಲ್ಲಿ ಪರಿಶೀಲನೆ ನಡೆಸಿದ ವೇಳೆ ಶಾಲೆಗೆ ಹೋಗದೆ ಆಟವಾಡಿಕೊಂಡಿರುವ32 ಮಕ್ಕಳು ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆಶಾಲೆಗೆ ಸೇರಿಸಲು ಕ್ರಮವಹಿಸಲಾಗಿದೆ ಎಂದು ತಾಲೂಕು ಕಾರ್ಮಿಕ ಅಧಿಕಾರಿ ಲಕ್ಷ್ಮೀಶ ತಿಳಿಸಿದ್ದಾರೆ.
ಈ ಮಕ್ಕಳಿಗಾಗಿ ಸ್ಥಳದಲ್ಲೇ ಟೆಂಟ್ ಶಾಲೆ ತೆರೆಯುವ ಹಾಗೂ ಈ ಶಾಲೆಗೆ ಉರ್ದು ಮತ್ತು ಹಿಂದಿ ಶಿಕ್ಷಕರನ್ನು ನೇಮಿಸಲಾಗುವುದೆಂದು ಡಿಡಿಪಿಐ ಎಚ್.ಕೆ.ಪಾಂಡು ತಿಳಿಸಿದ್ದಾರೆಂದು ಬಿಆರ್‌ಸಿ ಸಂತೋಷ್‌ಕುಮಾರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.