Hunsur; 480ರೂ.ಗೆ ನಡೆಯಿತಾ ಡಬ್ಬಲ್ ಮರ್ಡರ್?: ಅರೋಪಿ ಬಂಧನ, ಮತ್ತೋರ್ವ ಪರಾರಿ
Team Udayavani, Jun 24, 2023, 11:10 PM IST
ಹುಣಸೂರು: ಜೂ.21 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅರೋಪಿಯೊರ್ವ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ನಗರದ ಸರಸ್ವತಿಪುರಂನ ಅಭಿಷೇಕ್ ಅಯಾಸ್ ಅಭಿ ಬಂಧಿತ ಪ್ರಮುಖ ಆರೋಪಿ, ಮತ್ತೊರ್ವ ಬಾಲಾಪರಾಧಿಯಾಗಿದ್ದು, ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಸಹಚರ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪರಸಯ್ಯನ ಛತ್ರದ ಪಕ್ಕದ ಎಸ್.ಎಸ್.ಸಾಮಿಲ್‌ನಲ್ಲಿ ಜೂ. 21ರ ಮದ್ಯ ರಾತ್ರಿ ಕಾವಲುಗಾರರಾದ ವೆಂಕಟೇಶ್ ಹಾಗೂ ಷಣ್ಮಖರಾವ್‌ರನ್ನು ಕಬ್ಬಿಣದ ಆಯುಧದಿಂದ ಬಲವಾಗಿ ಹೊಡೆದು ಭೀಕರವಾಗಿ ಕೊಲೆ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದರು.
ಡಬ್ಬಲ್ ಮರ್ಡರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಎಸ್.ಪಿ.ಸೀಮಾಲಾಟ್ಕರ್, ಎ.ಎಸ್.ಪಿ.ಡಾ.ನಂದಿನಿ, ಡಿವೈಎಸ್‌ಪಿ ಎಂ.ಕೆ.ಮಹೇಶ್‌ರವರ ಮಾರ್ಗದರ್ಶನದಲ್ಲಿ ಸಿ.ಸಿ.ಟಿವಿ. ಪುಟೇಜ್ ಪರಿಶೀಲಿಸಿದ ವೇಳೆ ಯುವಕರ ಕೃತ್ಯ ಬಯಲಿಗೆ ಬಂದಿದೆ.
ನಗರ ಠಾಣೆ ಇನ್ಸ್ಪೆಕ್ಟರ್ ಎಸ್.ಎಂ.ದೇವೇಂದ್ರ ನೇತೃತ್ವದಲ್ಲಿ ಸಿಬಂದಿ ಕಾರ್ಯಾಚರಣೆ ನಡೆಸಿ ಅಭಿಷೇಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿ ಹಣಕ್ಕಾಗಿ ಕೃತ್ಯ ನಡೆಸಿರುವುದಾಗಿ, ಇಬ್ಬರಿಂದ 480ರೂ ಮಾತ್ರ ಸಿಕ್ಕಿದೆ. ಕೊಲೆಗೆ ಮತ್ತಿಬ್ಬರು ಸಹಕರಿಸಿರುವುದಾಗಿ ಬಾಯಿಬಿಟ್ಟಿದ್ದ.
ಆರೋಪಿಯನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಾಲಾಪರಾಧಿಯನ್ನು ಶನಿವಾರ ರಿಮ್ಯಾಂಡ್ ಹೋಂಗೆ ಸೇರಿಸಲಾಗಿದೆ. ಅಭಿಷೇಕನಿಂದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಪ್ರಕರಣಗಳ ಆರೋಪಿ
ಆರೋಪಿ ಅಭಿಷೇಕ್ ಹಲವಾರು ಸುಲಿಗೆ, ಕಳ್ಳತನ, ಸರಗಳ್ಳತನ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತನ ವಿರುದ್ದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿವೆ. ಈತ ಹಣಕ್ಕಾಗಿ ಮದ್ಯರಾತ್ರಿ ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮಿಲ್ ಪ್ರವೇಶಿಸಿ ಮಲಗಿದ್ದ ವೇಳೆ ಇಬ್ಬರ ಜೇಬಿಗೂ ಕೈ ಹಾಕಿ ಹಣ ಕದಿಯುವ ವೇಳೆ ಎಚ್ಚರಗೊಂಡು ಪ್ರತಿರೋಧ ತೋರಿದ ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ. ಅವರ ಬಳಿಸಿಕ್ಕ ೪೮೦ರೂಗಳೊಂದಿಗೆ ಪರಾರಿಯಾಗಿದ್ದೇವೆಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಹಾಡಹಗಲೇ ಕಾರು ಅಡ್ಡಗಟ್ಟಿ ರಾಬರಿ; ಹಣದೊಂದಿಗೆ ಕಾರು ಕೂಡಾ ದೋಚಿದರು!
Hunasur: ಪ್ರೇಯಸಿಗೆ ಚಿನ್ನ ಖರೀದಿಸಲು ಎಟಿಎಂ ಗೆ ತುಂಬಬೇಕಿದ್ದ ಹಣ ಎಗರಿಸಿದ ಯುವಕ
Mysuru ಮುಟ್ಟುಗೋಲು: 142 ನಿವೇಶನ ಮಾಹಿತಿ ಬಹಿರಂಗಕ್ಕೆ ಸ್ನೇಹಮಯಿ ಕೃಷ್ಣ ಒತ್ತಾಯ
ತ್ರಿವೇಣಿ ಸಂಗಮ ಕುಂಭಮೇಳಕ್ಕೆ 10 ಕೋಟಿ ರೂ. ಪ್ರಸ್ತಾವನೆ: ಸಚಿವ ಮಹದೇವಪ್ಪ
Mysuru: ಸಿದ್ದರಾಮಯ್ಯ ಹೆಸರು ದುರ್ಬಳಕೆಗೆ ಇ.ಡಿ. ಮೂಲಕ ಯತ್ನ; ಯತೀಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.