Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ
Team Udayavani, Jul 21, 2024, 9:38 PM IST
ಹುಣಸೂರು: ಆಕಸ್ಮಿಕವಾಗಿ ಬೆಂಕಿ ಬಿದ್ದು ತಂಬಾಕು ಹದ ಮಾಡುವ ಬ್ಯಾರನ್ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಹರವೆ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹರವೆ ಗ್ರಾಮದ ಕುಚೇಲೇಗೌಡರಿಗೆ ಸೇರಿದ ಡಬ್ಬಲ್ ಬ್ಯಾರನ್ ಗೆ ಹೊಗೆಸೊಪ್ಪು ಹದಗೊಳಿಸಲು ಬ್ಯಾರನ್ ಗೆ ಏರಿಸಿದ್ದ ವೇಳೆ ಬೆಂಕಿ ಹತ್ತಿ ದಡ್ಡ ಹೊಗೆ ಕಾಣಿಸಿಕೊಂಡಿದೆ.
ಅಕ್ಕಪಕ್ಕದ ರೈತರು ನೀರು ಹಾಯಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಗಳು ಆಗಮಿಸಿ ಬೆಂಕಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದರು.
ತಂಬಾಕು ಸಂಪೂರ್ಣ ಭಸ್ಮವಾಗಿದೆ. ಬ್ಯಾರನ್ ಮೇಲ್ಚಾವಣಿಗೆ ಹಾನಿಯಾಗಿದ್ದು. ಸುಮಾರು ಐದು ಲಕ್ಷರೂ ನಷ್ಟ ಉಂಟಾಗಿದೆ.
ಮನವಿ: ನಷ್ಟಕ್ಕೊಳಗಾಗಿರುವ ಕುಚೇಲೇ ಗೌಡರಿಗೆ ತಂಬಾಕು ಮಂಡಳಿವತಿಯಿಂದ ನೀಡುವ ಪರಿಹಾರ ಕೊಡಿಸುವಂತೆ ರೈತ ಮುಖಂಡ ಮೋದೂರು ಮಹೇಶ್ ಮನವಿ ಮಾಡಿದ್ದಾರೆ.
ಎಚ್ಚರಿಕೆ:
ತಂಬಾಕು ಹದಗೊಳಿಸುವ ವೇಳೆ ಬ್ಯಾರನ್ ಗೆ ನಿಗದಿ ಗೊಳಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಗೆಸೊಪ್ಪು ಕಟ್ಟಬಾರದು. ಹೊಗೆಸೊಪ್ಪಿನ ಕೆಳಗೆ ಜಾಲರಿ ಅಳವಡಿಸಿಕೊಂಡಲ್ಲಿ ಬೆಂಕಿ ಅವಘಡ ಕಡಿಮೆಯಾಗಲಿದ್ದು . ರೈತರು ಎಚ್ಚರ ವಹಿಸುವಂತೆ ಹುಣಸೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.