ಮೈಸೂರು ದಸರೆ ನೆನಪಿಸಿದ ಹುಣಸೂರು ದಸರಾ


Team Udayavani, Oct 6, 2019, 3:00 AM IST

musyre-dasre

ಹುಣಸೂರು: ನಗರದಲ್ಲಿ ಶನಿವಾರ ನಡೆದ ಗ್ರಾಮೀಣ ದಸರಾ ಮೆರವಣಿಗೆ ಮೈಸೂರು ದಸರಾವನ್ನು ನೆನಪಿಸುವಂತಿತ್ತು. ಸರ್ಕಾರಿ ಯೋಜನೆಗಳ ಮಾಹಿತಿ ನೀಡಿದ ಆಕರ್ಷಕ ಸ್ತಬ್ಧಚಿತ್ರಗಳು, ಕಲಾತಂಡಗಳ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಲರವ, ಕರತಾಡನ ಮೇಳೈಸಿದವು.

ನಗರದ ರಂಗನಾಥ ಬಡಾವಣೆಯಲ್ಲಿ ನಂದಿ ಕಂಬಕ್ಕೆ ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಚ್‌.ವಿಶ್ವನಾಥ್‌, ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ, ಗ್ರಾಮೀಣ ದಸರಾ ಉಪಸಮಿತಿ ಅಧ್ಯಕ್ಷ ರಮೇಶಕುಮಾರ್‌, ತಹಶೀಲ್ದಾರ್‌ ಬಸವರಾಜ್‌, ಇಒ ಗಿರೀಶ್‌ ಮತ್ತಿತರರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಕೊಂಬು-ಕಹಳೆ, ವಾದ್ಯವೃಂದ, ದೇವರಾಜ್‌ ನೇತೃತ್ವದ ಸ್ಯಾಕ್ಸೋಫೋನ್‌ ವಾದ್ಯಗೋಷ್ಠಿಗಳ ನಾದಸ್ವರದ ಮೂಲಕ ಚಾಮುಂಡೇಶ್ವರಿ ದೇವಿಗೆ ನಮನ ಸಲ್ಲಿಸಿ ಆರಂಭಗೊಂಡ ಮೆರವಣಿಗೆಯಲ್ಲಿ ಹಳೇಬೀಡಿನ ನಂದಿ ಧ್ವಜ, ಮೈಲಾಂಬೂರಿನ ಗುಡ್ಡರಕುಣಿತ, ಪೌರಕಾರ್ಮಿಕರ ಕಾಲೋನಿ, ರಂಗನಾಥ ಬಡಾವಣೆಯ ತಂಡದ ನಗಾರಿ ತಂಡ, ನಗರದ ಎಬಿಸಿಡಿ ನಾಸಿಕ್‌ಬ್ಯಾಂಡ್‌,

ಕೊಳವಿಗೆ ಹಾಡಿಯ ಆದಿವಾಸಿ ಯುವಕರ ತಂಡದ ನವಿರಾದ ಕೋಲಾಟ, ಗಾವಡಗೆರೆಯ ಮಹದೇಶ್ವರ ಕಲಾಸಂಘದ ಪೂಜಾಕುಣಿತ, ಡೊಳ್ಳುಕುಣಿತ, ಪಟಕುಣಿತ, ವೀರಗಾಸೆ, ವಿನೋಬಕಾಲೋನಿಯ ಫಲಕಕುಣಿತ, ಪುತ್ತೂರಿನ ಗಾರುಡಿಗೊಂಬೆ, ಗೊಂಬೆಕುಣಿತ, ಯಕ್ಷಗಾನಕುಣಿತ, ನವಿಲು ನೃತ್ಯ, ಕರಗನೃತ್ಯ ಸೇರಿದಂತೆ ಕಲಾತಂಡಗಳ ವೈಭವದ ಪ್ರದರ್ಶನ ಮನಸೂರೆಗೊಂಡಿತು.

ಆಕರ್ಷಕ ಸ್ತಬ್ಧ ಚಿತ್ರಗಳು: ಮೆರವಣಿಗೆಗೆ ಕಳಶಪ್ರಾಯದಂತಿದ್ದ ವಿವಿಧ ಸ್ತಬ್ಧಚಿತ್ರಗಳು ಸರ್ಕಾರ‌ದ ಯೋಜನೆಗಳನ್ನು ಸಾದರಪಡಿಸಿದವು. ಈ ಪೈಕಿ ಅರಣ್ಯ ಇಲಾಖೆ ನಿರ್ಮಿಸಿದ್ದ ನಾಗರಹೊಳೆ ಜೀವವೈವಿಧ್ಯತೆಯ ಪ್ರದರ್ಶನ, ಇಲಾಖೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಿರುವ ಚಿಣ್ಣರ ವನದರ್ಶನದ ಬಗ್ಗೆ ಮಾಹಿತಿ ನೀಡಿದರೆ, ಪದವಿ ಕಾಲೇಜಿನ ವಿದ್ಯಾರ್ಥಿಗಳು ಆಯುಷ್ಮಾನ್‌ ಭಾರತ ಆರೋಗ್ಯ ಪ್ರದರ್ಶನ, ಅಬಕಾರಿ ಇಲಾಖೆ-ಬೆಳಕು ಸಂಸ್ಥೆಯವರ ಮದ್ಯಪಾನ-ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದು,

ತಾಲೂಕು ಪಂಚಾಯ್ತಿಯ ಉದ್ಯೋಗ ಖಾತರಿ, ಜಲಾಮೃತ ಯೋಜನೆ ಸೇರಿದಂತೆ ಕಾರ್ಯಕ್ರಮಗಳ ಪರಿಚಯ, ನಗರಸಭೆಯ ಸ್ವಚ್ಛತೆ, ಜಲಶಕ್ತಿಯೋಜನೆಯ ಪರಿಕಲ್ಪನೆ, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಮಗ್ರ ಮಾಹಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳ ಮಾರ್ಗಸೂಚಿ, ಅದುಲಾಮ್‌ ಶಾಲಾ ಮಕ್ಕಳ ಕರ್ನಾಟಕ ದರ್ಶನ ಹೀಗೆ ತರೇಹವಾರಿ ಕಾರ್ಯಕ್ರಮಗಳು ಗಮನ ಸೆಳೆದವು.

ಶ್ವೇತ ಕುದುರೆ ಸವಾರಿ: ಪ್ರಥಮ ಬಾರಿಗೆ ಮೆರವಣಿಗೆಯಲ್ಲಿ ಅಲಂಕೃತ ಎರಡು ಬಿಳಿ ಕುದುರೆಗಳು, ಅವುಗಳ ಮೇಲೆ ಸೈನಿಕ ಮತ್ತು ಪೊಲೀಸ್‌ ವೇಷಧಾರಿ ಮಕ್ಕಳ ಸವಾರಿ ಮೆರವಣಿಗೆಗೆ ಮೆರಗು ನೀಡಿತು.

101 ಕಳಶ ಹೊತ್ತ ಮಹಿಳೆಯರು: ತಾಲೂಕಿನ ವಿವಿಧ ಮಹಿಳಾ ಸಂಘಗಳ 101 ಮಹಿಳೆಯರು ಕಳಶಹೊತ್ತು ಮೆರವಣಿಗೆಯುದ್ದಕ್ಕೂ ಸಾಗಿಬಂದು ಕಳೆಕಟ್ಟಿದರು. ಇನ್ನು ಬೆಳ್ಳಿಯ ಅಲಂಕೃತ ಸಾರೋಟಿನಲ್ಲಿ ಚಾಮುಂಡೇಶ್ವರಿ ದೇವಿ ಸಾಗಿಬಂತು.

ಶ್ವೇತವಸ್ತ್ರದಲ್ಲಿ ಮಿಂಚಿದ ಅಧಿಕಾರಿಗಳು: ತಾಪಂ ಇಒ ಗಿರೀಶ್‌, ಎಡಿಎ ರಂಗಸ್ವಾಮಿ, ಎಇಇ ರಮೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಶ್ವೇತ ವಸ್ತ್ರಧರಿಸಿ ಮೆರವಣಿಗೆಗೆ ಮೆರಗು ತಂದರು. ಅಲ್ಲದೇ ತಮಟೆ ಸದ್ದಿಗೆ ಸಂಜೀವಿನ ಒಕ್ಕೂಟ, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಪಿಡಿಒಗಳು ಸೇರಿದಂತೆ ಅಧಿಕಾರಿಗಳು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು.

ಮೆರವಣಿಗೆಯು ಕಲ್ಕುಣಿಕೆ ವೃತ್ತದ ಮೂಲಕ ಶ್ರೀರಾಮ ವೃತ್ತ, ಹಳೇ ಸೇತುವೆ, ರೋಟರಿ ವೃತ್ತ, ಬಸ್‌ನಿಲ್ದಾಣದ ರಸ್ತೆ, ಕಲ್ಪತರು ವೃತ್ತದ ಮೂಲಕ ಸಾಗಿ ಬಂದು ನಗರಸಭೆ ಮೈದಾನದಲ್ಲಿ ಸಮಾವೇಶಗೊಂಡಿತು.

ಸಂಸದ ಪ್ರತಾಪ್‌ ಸಿಂಹಗೆ ಪೊಲೀಸ್‌ ಸರ್ಪಗಾವಲು: ಹುಣಸೂರು ಗ್ರಾಮೀಣ ದಸರಾದಲ್ಲಿ ಸಂಸದರು ಪಾಲ್ಗೊಂಡರೆ ಪ್ರತಿಭಟಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರಿಂದ ಸಂಸದ ಪ್ರತಾಪ ಸಿಂಹ ಅವರನ್ನು ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಸರ್ಪಗಾವಲಿನಲ್ಲಿ ಮೆರವಣಿಗೆ ಆರಂಭದ ಸ್ಥಳಕ್ಕೆ ಕರೆತಂದರು.

ಪೊಲೀಸರ ಭದ್ರತೆಯಲ್ಲಿ ರಂಗನಾಥ ಬಡಾವಣೆಯಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಗೆ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಡಿವೈಎಸ್ಪಿ ಸುಂದರರಾಜ್‌, ವೃತ್ತ ನಿರೀಕ್ಷಕ ಪೂವಯ್ಯ, ಎರಡು ಡಿಎಆರ್‌, ಒಂದು ಕೆಎಸ್‌ಆರ್‌ಪಿ ತುಕಡಿಗಳು, 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಲ್ಕುಣಿಕೆ ಸರ್ಕಲ್‌ವರೆಗೆ ಮೆರವಣಿಗೆಯಲ್ಲಿ ಸಾಗಿಬಂದ ಸಂಸದರು ಅಲ್ಲಿಂದ ಮೈಸೂರು ಕಡೆಗೆ ಪೊಲೀಸ್‌ ರಕ್ಷಣೆಯಲ್ಲಿ ತೆರಳಿದರು.

94 ಮಂದಿ ಬಂಧನ, ಬಿಡುಗಡೆ: ಸಂಸದ ಪ್ರತಾಪ್‌ ಸಿಂಹ ವಿರುದ್ಧ ಪ್ರತಿಭಟಿಸುತ್ತೇವೆ ಎಂದಿದ್ದ ಸಂಘಟನೆಗಳ ಮುಖಂಡರನ್ನು ಡಿವೈಎಸ್ಪಿ ಸುಂದರರಾಜ್‌ ಮನವೊಲಿಸಿದ್ದರು. ಆದರೂ ಕಲ್ಕುಣಿಕೆ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಪುುಟ್ಟರಾಜು, ಜಗದೀಶ್‌ ಸೂರ್ಯ, ರಾಜು, ಗೋವಿಂದರಾಜು, ಸ್ವಾಮಿ ಮತ್ತಿತರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಪ್ತಿಯಲ್ಲಿದ್ದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಈ ಎಲ್ಲಾ 24ಮಂದಿಯನ್ನು ಬಂಧಿಸಿ,

ಪೊಲೀಸ್‌ ಠಾಣೆಗೆ ಕರೆದೊಯ್ದು ಮಧ್ಯಾಹ್ನದ ಬಳಿಕ ಬಿಡುಗಡೆಗೊಳಿಸಿದರು. ಬೆಟ್ಟದಪುರದಿಂದ ಹುಣಸೂರು ಕಡೆಗೆ ಆಗಮಿಸುತ್ತಿದ್ದ 70 ಮಂದಿ ಪ್ರತಿಭಟನಾಕಾರರನ್ನು ಬೆಟ್ಟದಪುರದಲ್ಲೇ ಬಂಧಿಸಿ, ಮಧ್ಯಾಹ್ನ ಬಿಡುಗಡೆಗೊಳಿಸಲಾಯಿತು ಎಂದು ಡಿವೈಎಸ್ಪಿ ಸುಂದರರಾಜ್‌ ತಿಳಿಸಿದರು.

ಟಾಪ್ ನ್ಯೂಸ್

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.