ಹುಣಸೂರು: ಒಂದೇ ದಿನ 250 ಮಂದಿಗೆ ವಿವಿಧ ಸವಲತ್ತು ವಿತರಣೆ
ಕಾಲಮಿತಿಯೊಳಗೆ ಕೆಲಸ ಮಾಡಿದಲ್ಲಿ ಬಡವರ ಅಲೆದಾಟ ತಪ್ಪಲಿದೆ ಶಾಸಕ ಮಂಜುನಾಥ್
Team Udayavani, Oct 15, 2022, 9:13 PM IST
ಹುಣಸೂರು: ಹುಣಸೂರು ತಾಲೂಕಿನ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡಿಗೆ-ಹಳ್ಳಿಯಡೆಗೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಕ್ಕರೆ, ಬಾಕಿ ಉಳಿದಸಮಸ್ಯೆಯನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಶಾಸಕ ಎಚ್.ಪಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ವಸತಿ ಮಂಜೂರು ಆದೇಶ ಪತ್ರ, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್‌ಕಾರ್ಡ್, ಮಾಶಾಸನ ಆದೇಶ ಪತ್ರಗಳನ್ನು ಆದಿವಾಸಿಗಳಿಗೆ ವಿತರಿಸಿ ಮಾತನಾಡಿ ಈ ಕಾರ್ಯಕ್ರಮಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನವಿಲ್ಲ, ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಬಡವರಿಗಾಗಿ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ನಿಗದಿತ ವೇಳೆಯಲ್ಲೇ ಅವರ ಮನೆಬಾಗಿಲಿಗೆ ತಲುಪಿಸಬಹುದಾಗಿದ್ದು, ಇದನ್ನು ಮನಗಂಡ ಸರಕಾರ ಯೋಜನೆಯನ್ನು ಜಾರಿಗೊಳಿಸಿದ್ದು, ಇಂದು ಸುಮಾರು 250 ಮಂದಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ಕೆಲವನ್ನು ಗ್ರಾ.ಪಂ.ವತಿಯಿAದಲೇ ಬಗೆಹರಿಸಬಹುದಾಗಿದ್ದು, ಪಿಡಿಓಗಳು ಕ್ರಮ ಕೈಗೊಳಳಬೇಕೆಂದು ಸೂಚಿಸಿದರು.ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಮೂರು ರಸ್ತೆಗಳಿಗೆ ತಲಾ ಹತ್ತು ಲಕ್ಷ ರೂ ವೆಚ್ಚದಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗೆ ೩೦ ಲಕ್ಷ ರೂ ಅನುದಾನ ಕಲ್ಪಿಸಲಾಗಿದೆ. ಮಳೆ ನಿಂತ ನಂತರ ಕಾಮಗಾರಿ ಪ್ರಾರಂಬಿಸಲಾಗುವುದೆಂದರು.
ಮೂರು ಅಂಗನವಾಡಿ ಕಟ್ಟಡ ನಿರ್ಮಾಣ
ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಮೂರು ಘಟಕಗಳಲ್ಲಿ ಅಂಗನವಾಡಿ ಕಟ್ಟಡಕ್ಕೆ ಮನವಿ ಮಾಡಿದ್ದು, ಇದೇ ಕಾರ್ಯಕ್ರಮದಲ್ಲಿ ಇಂದು ತಲಾ ಹತ್ತು ಲಕ್ಷ ರೂ ವೆಚ್ಚದಲ್ಲಿ ಮೂರು ಅಂಗನವಾಡಿ ಕಟ್ಟಡ ನಿರ್ಮಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಕೇಂದ್ರದ ಆರು ಘಟಕಗಳ ಪೈಕಿ ನಾಲ್ಕು ಘಟಕಗಳಿಗೆ ಪ್ರತ್ಯೇಕವಾಗಿ ನಾಲ್ಕು ಸ್ಮಶಾನಗಳಿಗೆ ಸರ್ಕಾರಿ ಜಾಗ ಗುರುತಿಸಿ ಸರ್ವೆ ಮಾಡಿಸಿದ್ದು, ದಾಖಲಾತಿಗಳನ್ನು ಸಂಬಂಧಪಟ್ಟ ಗ್ರಾ.ಪಂ. ಪಿಡಿಒಗಳಿಗೆ ಹಸ್ತಂತರ ಮಾಡಿದರು. ಈ ವೇಳೆ ಸಮೀಪದ ಕುರುಬರಹೊಸಹಳ್ಳಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಪ್ರತ್ಯೇಕ ಸ್ಮಶಾನಕ್ಕಾಗಿ ಜಾಗ ಗುರುತಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.
ದೊಡ್ಡಹೆಜ್ಜೂರು ಗ್ರಾ.ಪಂ.ಅಧ್ಯಕ್ಷ ಮುದಗನೂರು ಸುಭಾಷ್,ಗುರುಪುರ ಗ್ರಾ.ಪಂ. ಅಧ್ಯಕ್ಷೆ ರಾಧಮ್ಮನಾಗನಾಯಕ, ತಾಪಂ.ಇಓ ಮನುಬಿ.ಕೆ, ತಹಶೀಲ್ದಾರ್ ಡಾ.ಅಶೋಕ್, ಜಿಲ್ಲಾ ಐಟಿಡಿಪಿ ಆಧಿಕಾರಿ ಪ್ರಭಾಅರಸ್, ತಾಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿ ಬಸವರಾಜ್, ಸಂತೋಷ್‌ಕುಮಾರ್, ವೆಂಕಟೇಶ್, ವಸತಿ ನೋಡಲ್ ಅಧಿಕಾರಿ ಲೋಕೇಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
250 ಮಂದಿಗೆ ಸೌಲಭ್ಯ ವಿತರಣೆ
ಇದೇ ಕಾರ್ಯಕ್ರದಲ್ಲಿ ೪ ಸ್ಮಶಾನ ಹಸ್ತಾಂತರ, ಆಶ್ರಮ ಶಾಲೆ ದಾಖಲೆ ಹಸ್ತಾಂತರ,ಆಯುಷ್ ಮಾನ್ ಭಾರತ್ ಕಾರ್ಡ್-೧೩೦, ವಿವಿಧ ಮಾಶಾಸನ-೧೮, ಬ್ಯಾಂಕ್ ಖಾತೆ ಕಿಟ್-೨೯, ಆದಾಯ ರ್ದರಡೀಕರಣ-೫, ಜಾತಿ ದೃಡೀಕರಣ-೫, ಆಧಾರ್ ಕಾರ್ಡ್ ನೊಂದಣಿ-೮೪, ಮತದಾರರ ಗುರುತಿನ ಚೀಟಿ ಹೊಸ ಸೇರ್ಪಡೆ-೨೮ಗೊಳಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.