Hunsur; ಒಂಟಿ ಸಲಗ ದಾಳಿ: ಆದೃಷ್ಟವಶಾತ್ ಪಾರಾದ ಮನೆ ಮಂದಿ
Team Udayavani, Nov 13, 2023, 10:16 PM IST
ಹುಣಸೂರು: ಒಂಟಿ ಸಲಗವೊಂದು ನಾಗರಹೊಳೆ ಉದ್ಯಾನದಂಚಿನ ರೈಲ್ವೆ ಬ್ಯಾರಿಕೇಡ್ ದಾಟಿ ಹೊರಬಂದು ತಾಲೂಕಿನ ಬಿಲ್ಲೇನಹೊಸಹಳ್ಳಿಯಲ್ಲಿ ಬೆಳೆಯನ್ನು ನಾಶ ಮಾಡಿ, ಹಾಡಿ ಬಳಿಯ ಮನೆಗೆ ಹಾನಿ ಮಾಡಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿಯ ಉದ್ಯಾನದಂಚಿನ ಬ್ಯಾರಿಕೇಡ್ ದಾಟಿ ಹೊರ ಬಂದಿದ್ದ ಒಂಟಿಸಲಗವು ಭಾನುವಾರ ರಾತ್ರಿ ಚಿನ್ನದೊರೆ ಹಾಗೂ ಇವರ ಪುತ್ರ ವೆಂಕಟೇಶ್ ಅವರಿಗೆ ಸೇರಿದ ರಾಗಿ, ಮುಸುಕಿನಜೋಳ, ಮರಗೆಣಸು ಬೆಳೆಗಳನ್ನು ನಾಶ ಮಾಡಿದೆ. ನಂತರ ಜಮೀನಿನಲ್ಲಿ ವಾಸವಿದ್ದ ಗುಡಿಸಲು ಮೇಲೆ ದಾಳಿ ನಡೆಸಿದೆ. ಮನೆಯೊಳಗಿದ್ದವರು ಪ್ರಾಣ ರಕ್ಷಣೆಗಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದ ವರು ಸಹ ಜೋರಾಗಿ ಶಬ್ದ ಮಾಡಿದ್ದಾರೆ. ಈ ವೇಳೆ ಮನೆಯ ಒಪ್ಪಾರನ್ನು ಭಾಗಶಃ ಕೆಡವಿ ಅಲ್ಲಿಂದ ಪೇರಿ ಕಿತ್ತಿದೆ. ಅಂಗಳದಲ್ಲಿ ಡ್ರಮ್‌ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಕಾಡಿನತ್ತ ಹೋಗಿದ್ದರಿಂದ ಮನೆಯೊಳಗಿದ್ದವರು ಆನೆ ದಾಳಿಯಿಂದ ಪಾರಾಗಿದ್ದಾರೆ.
ಕಾಟ ನೀಡುವ ಸಲಗ
ಕೆಲ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಕಾಟವಿರಲಿಲ್ಲ. ವಾರದಿಂದ ತಟ್ಟೆಹಳ್ಳ ಪಾರೆ ಹಾಗೂ ಕೂಟದ ಕಡ ಭಾಗದಿಂದ ರೈಲ್ವೆ ಬ್ಯಾರಿಕೇಡ್ ಬ್ಯಾರಿಕೇಡ್ ದಾಟಿ ಹೊರಬಂದು ರೈತರ ಬೆಳೆ ನಾಶಪಡಿಸುತ್ತಿವೆ.
ಹೆಚ್ಚಿನ ಸಿಬಂದಿ ನೇಮಿಸಲು ಆಗ್ರಹ
ಕೂಡಲೇ ಆರಣ್ಯ ಇಲಾಖೆಯವರು ಈ ಭಾಗಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕು. ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್, ರೈತ ಮುಖಂಡರಾದ ಜಾನ್ಸನ್, ಸ್ವಾಮಿಗೌಡ ಹಾಗೂ ಈಶ್ವರ್ ಆಗ್ರಹಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಡಿಆರ್‌ಎಫ್‌ಒ ಚಂದ್ರೇಶ್ ಹಾಗೂ ಸಿಬ್ಬಂದಿ ಭೇಟಿ ಇತ್ತು ಮಹಜರ್ ನಡೆಸಿ, ಬೆಳೆ ನಷ್ಟ ಹಾಗೂ ಹಾಗೂ ಮನೆ ಹಾನಿಗೆ ಪರಿಹಾರ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಗುವುದು. ರಾತ್ರಿ ಕಾವಲನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.