Hunsur; ಹಾಡ ಹಗಲೇ ಚಿರತೆ ದಾಳಿಗೆ ಮೇಕೆಗಳು ಬಲಿ: ಸೆರೆಗೆ ರೈತರ ಆಗ್ರಹ
Team Udayavani, Oct 18, 2023, 10:03 PM IST
ಹುಣಸೂರು: ಹಾಡಹಗಲೇ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆ ಎರಡು ಮೇಕೆಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಕೊಳ್ಳಗಟ್ಟದಲ್ಲಿ ನಡೆದಿದೆ.
ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ಕುಮಾರ್‌ರಿಗೆ ಸೇರಿದ ಮೇಕೆಗಳು ಇವಾಗಿದ್ದು, ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟದ್ದ ಮೇಕೆಗಳ ಮೇಲೆ ಚಿರತೆಯು ದಾಳಿ ನಡೆಸಿದೆ, ಈ ವೇಳೆ ಮೇಕೆಗಳು ಜೋರಾಗಿ ಚೀರಾಟ ನಡೆಸಿವೆ. ಅಕ್ಕಪಕ್ಕದಲ್ಲಿದಲ್ಲಿದ್ದ ದನಗಾಹಿಗಳು ಜೋರಾಗಿ ಕೂಗಿಕೊಂಡಿದ್ದರಿಂದ ಮೇಕೆಗಳನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಹತ್ತಿರ ಬಂದು ನೋಡುವಷ್ಟರಲ್ಲಿ ಮೇಕೆಗಳು ಸಾವನ್ನಪ್ಪಿದ್ದವು.
ಕೊಳಗಟ್ಟ ಗ್ರಾಮವು ಅರಬ್ಬಿತಿಟ್ಟು ರಕ್ಷಿತಾರಣ್ಯದ ಪಕ್ಕದಲ್ಲೇ ಇದ್ದು, ಕೊಳಗಟ್ಟ, ಕುಪ್ಪೆ, ರಂಗಯ್ಯನಕೊಪ್ಪಲು, ಮಧುಗಿರಿಕೊಪ್ಪಲು ಭಾಗದಲ್ಲಿ ಚಿರತೆಗಳ ಹಾವಳಿ ಸಾಕಷ್ಟಿದ್ದು, ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಮಾಹಿತಿ ನೀಡಿದ ಕೂಡಲೆ ಬೋನಿಟ್ಟು ಚಿರತೆಗಳನ್ನು ಬಂಧಿಸುವಂತೆ ರೈತರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!
MUST WATCH
ಹೊಸ ಸೇರ್ಪಡೆ
Udupi: ಮುನಿಯಾಲ್ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್
ಜೀವನ ಪರ್ಯಂತ ವೀಲ್ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
WPL 2025: ಆರ್ ಸಿಬಿ ಆಟಗಾರರ ರಿಟೆನ್ಶನ್ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್
Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್
ಕಡೂರಲ್ಲಿ 40 ವರ್ಷದವರಿಗೂ ವೃದ್ದಾಪ್ಯ ವೇತನ! ಯೋಜನೆಯಲ್ಲಿ ಗೋಲ್‌ಮಾಲ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.