ಹುಣಸೂರು: ಗ್ರಾಹಕರಿಗೆ ಪಂಗನಾಮ ಹಾಕಿ ಜ್ಯುವೆಲರಿ ಅಂಗಡಿ ಮಾಲಿಕ ಪರಾರಿ
Team Udayavani, Jul 31, 2023, 11:09 PM IST
ಹುಣಸೂರು: ಗ್ರಾಹಕರಿಗೆ ಲಕ್ಷಾಂತರ ರೂ. ಉಂಡೆ ನಾಮ ಹಾಕಿರುವ ಹುಣಸೂರು ನಗರದ ಜ್ಯುವೆಲರಿ ಅಂಗಡಿ ಮಾಲಿಕನೊರ್ವ ಅಂಗಡಿಗೆ ಬೀಗ ಜಡಿದು ಕುಟುಂಬ ಸಹಿತ ಪರಾರಿಯಾಗಿದ್ದು, ಗ್ರಾಹಕರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಸ್ಟೋರ್ ಬೀದಿಯ ನಿವಾಸಿ, ಬಜಾರ್ ರಸ್ತೆಯ ವಿನಾಯಕ ಜ್ಯುವೆರ‍್ಸ್ ಮಾಲಿಕ, ರಾಜಸ್ತಾನದ ಮೂಲದ ಪ್ರೀತೇಶ್ ಅಲಿಯಾಸ್ ಪಿಂಟು ಪರಾರಿಯಾಗಿರುವಾತ. ನಗರದ ಬಜಾರ್ ರಸ್ತೆಯಲ್ಲಿ ಪ್ರಿತೇಶ್ ಕಳೆದ ಹತ್ತು ವರ್ಷಗಳಿಂದ ವಿನಾಯಕ ಜ್ಯುವೆಲರಿ ಅಂಗಡಿ ನಡೆಸುತ್ತಿದ್ದ ಈತ ಗ್ರಾಹಕರ ನಂಬಿಕೆಗೆ ಪಾತ್ರನಾಗಿದ್ದ, ಹೀಗಾಗಿ ಹಲವಾರು ಮಂದಿ ಗ್ರಾಹಕರು ಈತನ ಬಳಿ ಚಿನ್ನದ ಮಾಡಿಸಲು ಮುಂಗಡ ಹಣ ನೀಡಿದ್ದರು, ಅಲ್ಲದೆ ಒಡವೆ ಮಾರಾಟದ ಜೊತೆಗೆ ಪಾನ್ ಬ್ರೋಕರ್ ಲೈಸನ್ಸ್ ಪಡೆದು ಗಿರವಿ ವ್ಯವಹಾರ ನಡೆಸುತ್ತಿದ್ದ, ನೂರಾರು ಮಂದಿ ಒಡವೆಗಳನ್ನು ಗಿರವಿ ಇಟ್ಟಿದ್ದಾರೆ. ಕಳೆದ ಶುಕ್ರವಾರದಿಂದ ಅಂಗಡಿಗೆ ಬೀಗ ಜಡಿದು, ಸ್ಟೋರ್ ಬೀದಿಯಲ್ಲಿ ವಾಸವಿದ್ದ ಮನೆಯನ್ನು ಸಹ ಖಾಲಿ ಮಾಡಿಕೊಂಡು ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ.
ಒಡವೆ ಮಾಡಿಸಲು ಮುಂಗಡ ಹಣ ಪಾವತಿಸಿರುವವರು, ಗಿರವಿ ಇಟ್ಟವರು ತಮ್ಮ ಒಡವೆ ಬಿಡಿಸಿಕೊಳ್ಳಲು ಹಣ ನೀಡಿದ್ದರು, ಬೇರೆಡೆ ಗಿರವಿ ಇಟ್ಟಿದ್ದು ಬಿಡಿಸಿಕೊಂಡು ಮರಳಿಸುತ್ತೇನೆಂದು ವಾಯಿದೆ ಹೇಳಿ ಇದೀಗ ನಾಪತ್ತೆಯಾಗಿದ್ದು, ನಿತ್ಯ ಅಂಗಡಿ ಬಳಿಗೆ ದಾವಿಸುತ್ತಿದ್ದು, ಬೀಗ ಹಾಕಿರುವುದನ್ನು ಕಂಡು ಅವಕ್ಕಾಗಿದ್ದಾರೆ.
ದೂರು ದಾಖಲು
ಈ ಸಂಬಂಧ ಕಟ್ಟೆಮಳಲವಾಡಿಯ ಮಜೀಜ್ ಅಹಮದ್, ನಗರದ ಮಂಜುನಾಥ ಬಡಾವಣೆಯ ದೀಪು, ಸರಸ್ವತಿಪುರಂ ಬಡಾವಣೆಯ ಅರ್ಜುನ್, ಸೀತಾ, ಲಕ್ಷಿö್ಮ, ಸಿದ್ದ, ಯಶೋಧರಪುರದ ಅತೀಬಾಬಾನು, ಮಜೀದ್ ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ತಾವು ಗಿರವಿ ಇಟ್ಟಿರುವ ಒಡವೆಗಳನ್ನು ಬಿಡಿಸಲು ಹಣ ನೀಡಿದ್ದರೂ ವಾಪಸ್ ನೀಡದೆ ಪರಾರಿಯಾಗಿದ್ದಾನೆ, ಕೆಲವರು ಒಡವೆ ಮಾಡಿಸಲು ಮುಂಗಡ ಹಣನೀಡಿದ್ದೇವೇ ಎಂದೂ , ಹಲವರು ಒಡವೆ ಬಿಡಿಸಲು ಹಣ ನೀಡಿದ್ದೇವೆಂತಲೂ ಮತ್ತು ಕೆಲವರು ಹಣ ತಂದರೂ ಅಂಗಡಿಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದು, ಈ ಬಗ್ಗೆ ವಂಚಿಸಿರುವ ವಿನಾಯಕ ಜ್ಯುವೆಲರಿ ಮಾಲಿಕ ಆರೋಪಿ ಪ್ರೀತೇಶ್‌ನನ್ನ ಪತ್ತೆಮಾಡಿ ಒಡವೆ ಕೊಡಿಸುವಂತೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಪ್ರಿತೇಶ್‌ನ ಪತ್ತೆಗೆ ಕ್ರಮವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.