Hunsur; ಗದ್ದಿಗೆಯಲ್ಲಿ 59 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ
ವಿಶ್ವ ಹಿಂದೂ ಪರಿಷತ್, ಎಸ್.ಎಸ್.ಫೌಂಡೇಶನ್ ದಾನಿಗಳ ನೆರವು
Team Udayavani, Sep 27, 2023, 11:58 PM IST
ಹುಣಸೂರು: ಐತಿಹ್ಯವುಳ್ಳ ಹುಣಸೂರು ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆ ಶ್ರೀ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಎಸ್.ಎಸ್. ಫೌಂಡೇಶನ್ ಸಹಯೋಗದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹುಣಸೂರು, ಪಿರಿಯಾಪಟ್ಟಣ,ಎಚ್.ಡಿ.ಕೋಟೆ, ಸರಗೂರು ತಾಲೂಕುಗಳ ಆದಿವಾಸಿ ಸಮುದಾಯದ 59 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ತಾಲೂಕಿನ ಗದ್ದಿಗೆಯ ಕೆಂಡಗಣ್ಣೇಶ್ವರ, ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ದಾನಿಗಳ ನೆರವಿನೊಂದಿಗೆ ಆಯೋಜಿಸಿದ್ದ ಸಾಮೂಹಿಕ ವಿವಾಹ ನೆರವೇರಿಸಿದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಸಾಂಬಸದಾಶಿವಸ್ವಾಮಿಜಿ ಮಾತನಾಡಿ ವಿಶ್ವಹಿಂದೂಪರಿಷತ್ ಆದಿವಾಸಿಗಳ ಮನವೊಲಿಸಿ ಸಾಮೂಹಿಕ ವಿವಾಹ ನೆರವೇರಿಸಿರುವುದು ಸತ್ಕಾರ್ಯ ಅಭಿನಂದನೀಯ. ಆದಿವಾಸಿಗಳು ಕಾಡಿನಿಂದ ನಾಡಿಗೆ ಬಂದಿದ್ದು, ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸಿ. ಬಾಲ್ಯವಿವಾಹ ಮಾಡದೆ ಸಾಂಪ್ರದಾಯಿಕವಾಗಿ ಮದುವೆಯಾಗಿರೆಂದು ಸಲಹೆ ನೀಡಿದರು.
ಭಜರಂಗದಳದ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್ ಮಾತನಾಡಿ ವಿವಾಹ ಕಾನೂನುಗಳ ಬಗ್ಗೆ ತಿಳಿಸಿ. ದುಂದುವೆಚ್ಚದ ಮದುವೆಗಳನ್ನು ಮಾಡದೆ ಸರಳ, ಸಾಮೂಹಿಕ ವಿವಾಹಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಜೀವನ ಸಾಗಿಸಿರೆಂದರು.
ಬೆಂಗಳೂರಿನ ಉದ್ಯಮಿಗಳಾದ ಕಿಶನ್‌ಜೀ, ಬಾಬುಲಾಲ್‌ಜೀ, ಶಕಿಲಾಶೆಟ್ಟಿ, ಮೈಸೂರಿನ ವಕೀಲ ಜಿ.ವಿ.ಕೇಶವಮೂರ್ತಿ ಸೇರಿದಂತೆ ಅನೇಕ ದಾನಿಗಳು ನೆರವಾಗಿದ್ದಾರೆ. ಪ್ರತಿ ಕುಟುಂಬಕ್ಕೆ ಕನಿಷ್ಟ ೧೫ ಸಾವಿರ ರೂ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳನ್ನು ವಿತರಿಸಲಾಗಿದೆ ಎಂದು ಭಜರಂಗದಳ ತಾಲೂಕು ಸಂಯೋಜಕ ಮಧುಗೌಡ, ವಿ.ಹೆಚ್.ಪಿ. ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು.
ಕಾರ್ಯಕ್ರಮದ ಯಶಸ್ವಿಗೆ ವಿ.ಎಚ್.ಪಿ.ಜಿಲ್ಲಾ ಸೇವಾ ಪ್ರಮುಖ್ ಕುಂಟೇಗೌಡ, ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರೀ , ವಿಶ್ವ ಹಿಂದೂಪರಿಷತ್‌ನ ಬೈಲಕುಪ್ಪಸೋಮಣ್ಣ ಮತ್ತಿತರರು ದುಡಿದರು. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಪರಿಶಿಷ್ಟ ವರ್ಗಗಳ ಕಲ್ಯಾಣಾ ಇಲಾಖೆ ಅಧಿಕಾರಿ ಬಸವರಾಜು, ಸಿಬಂದಿಗಳು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.