ಅಂಧ ಬಾಲಕಿ ಬಾಳಿಗೆ ಬೆಳಕಾದ ಹುಣಸೂರು ಶಾಸಕ ಮಂಜುನಾಥ್
Team Udayavani, Dec 17, 2022, 10:49 PM IST
ಹುಣಸೂರು: ದೃಷ್ಟಿ ದೋಷದಿಂದ ಬಳಲುತ್ತಿದ್ದ ಬಾಲಕಿಯೊರ್ವಳ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಶಾಸಕ ಎಚ್.ಪಿ.ಮಂಜುನಾಥ್ ಕುಟುಂಬದ ಬೆಳಕಾಗಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಮುತ್ತುರಾಯನಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಹಾಯಕ ಮನುಕುಮಾರ್-ಅರ್ಪಿತ ದಂಪತಿ ಪುತ್ರಿ ಮೈನಾಗೆ ಹುಟ್ಟಿನಿಂದಲೇ ಎಡ ಭಾಗದ ಕಣ್ಣು ದೃಷ್ಠಿ ಕಳೆದುಕೊಂಡಿದ್ದಳು, ಪೋಷಕರು ಹಲವಾರು ಬಾರಿ ಕಣ್ಣಾಸ್ಪತ್ರೆಗೆ ತೋರಿಸಿ ಶಸ್ತ್ರ ಚಿಕಿತ್ಸೆಗೆ ದುಬಾರಿ ವೆಚ್ಚವಾಗಲಿದೆ ಎಂದು ತಿಳಿದು ಕಂಗಾಲಾಗಿದ್ದರು.
ಇತ್ತೀಚೆಗೆ ಶಾಸಕ ಎಚ್.ಪಿ.ಮಂಜುನಾಥ್ ಮುತ್ತುರಾಯನಹೊಸಹಳ್ಳಿ ಗ್ರಾಮದ ಗ್ರಾಮಾಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಪುತ್ರಿಯ ಕಣ್ಣಿನ ಸಮಸ್ಯೆ ಬಗ್ಗೆ ಅಳಲುತೋಡಿಕೊಂಡಿದ್ದರು. ತಕ್ಷಣವೇ ಪರಿಚಯದ ನೇತ್ರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಸಂಪೂರ್ಣ ವೆಚ್ಚವನ್ನು ಭರಿಸಿ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಇದೀಗ ಮೈನಾಗೆ ದೃಷ್ಟಿ ಮರಳಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ತರುವಾಯ ಶಾಸಕ ಎಚ್.ಪಿ. ಮಂಜುನಾಥ್‌ರನ್ನು ಭೇಟಿಯಾದ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಮೈನಾ ಸಹ ಕಣ್ಣಿನ ದೃಷ್ಟಿ ಮರಳಿದ ಸಂತಸದಲ್ಲಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.