Hunsur: ಜೋಳದ ಹೊಲದಲ್ಲಿ ಹುಲಿ ಹೆಜ್ಜೆ ಗುರುತು; ರೈತರಲ್ಲಿ ಆತಂಕ
Team Udayavani, Sep 7, 2023, 7:22 PM IST
ಹುಣಸೂರು: ನಾಗರಹೊಳೆ ಉದ್ಯಾನವನದಂಚಿನ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಉದ್ಯಾನವನದಂಚಿನ ಕೂಗಳತೆ ದೂರದಲ್ಲಿರುವ ತಾಲೂಕಿನ ಹನಗೋಡು ಹೋಬಳಿಯ ಮುದಗನೂರು ಗ್ರಾಮದ ಮುಸುಕಿನ ಜೋಳದ ಹೊಲದಲ್ಲಿ ಬುಧವಾರ ರಾತ್ರಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಈ ಭಾಗದಲ್ಲಿ ಕಳೆದ ಎರಡು -ಮೂರು ದಿನಗಳಿಂದ ಜಮೀನಿನ ಅಕ್ಕಪಕ್ಕದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದರಿಂದಾಗಿ ಅರಣ್ಯದಂಚಿನ ಹೊಲಗಳಿಗೆ ರೈತರು ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯ ಬೇಕೆಂದು ಎಂದು ಮುದಗನೂರು ಗ್ರಾಮದ ರೈತ ಸಂಘಟನೆಯ ಮಹದೇವ ಆಗ್ರಹಿಸಿದ್ದಾರೆ.
ಕಳೆದ ವರ್ಷ ಸಮೀಪದ ಕೊಳವಿಗೆ ಹಾಡಿಯಲ್ಲಿ ಹುಲಿ ದಾಳಿಗೆ ಗಿರಿಜನ ಯುವಕನೊಬ್ಬ ಮೃತಪಟ್ಟಿದ್ದನ್ನು ಸ್ಮರಿಸಬಹುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.