Hunsur; ಶೆಟ್ಟಳ್ಳಿ-ಲಕ್ಕಪಟ್ಟಣದಲ್ಲಿ ಹುಲಿ ಪ್ರತ್ಯಕ್ಷ: ಸಾಕಾನೆಗಳನ್ನು ಬಳಸಿ ಕೂಂಬಿಂಗ್
Team Udayavani, Dec 7, 2023, 7:10 PM IST
ಹುಣಸೂರು:ನಾಗರಹೊಳೆ ಉದ್ಯಾನದಂಚಿನ ಹುಣಸೂರು ನೇಗತ್ತೂರು ಪಕ್ಕದ ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗಾಗಿ ಆನೆಗಳ ಮೂಲಕ ಗುರುವಾರ ಕೂಂಬಿಂಗ್ ನಡೆಸಿದರಾದರೂ ಹುಲಿ ಮಾತ್ರ ಪತ್ತೆಯಾಗಿಲ್ಲ.
ನೇಗತ್ತೂರಿನ ಲಕ್ಷ್ಮಮ್ಮರಿಗೆ ಸೇರಿದ ಎರಡು ಹಸುಗಳನ್ನು ಕೊಂದ ಹುಲಿ ಪತ್ತೆಗಾಗಿ ಬುಧವಾರದಂದು ಅರಣ್ಯ ಸಿಬ್ಬಂದಿಗಳು ಕೂಂಬಿಂಗ್ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಗುರುವಾರ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್.ಎಫ್.ಒ . ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಾಕಾನೆಗಳಾದ ಗಣೇಶ, ಶ್ರೀರಂಗ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ ಮತ್ತು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ಸಿಬ್ಬಂದಿ ಸಹಾಯದಿಂದ ಕೂಂಬಿಂಗ್ ನಡೆಸಿದರಾದರೂ ಹುಲಿರಾಯ ಪತ್ತೆಯಾಗಲಿಲ್ಲ.
ಅರಣ್ಯದಲ್ಲಿ ಅಳವಡಿಸಿದ್ದ ಸಿ.ಸಿ.ಕೆಮರಾದಲ್ಲಿ ಹುಲಿ ಸೆರೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆರ್.ಎಫ್.ಒ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಹುಲಿ ಸೆರೆಗೆ ಒತ್ತಾಯ
ಇದೀಗ ಈ ಅರಣ್ಯ ಪ್ರದೇಶದಲ್ಲಿ ಹುಲಿ ಇರುವಿಕೆ ಸಿ.ಸಿ.ಕೆಮರಾದಲ್ಲಿ ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರು ಆತಂಕದಲ್ಲಿದ್ದೇವೆ. ಅನಾಹುತವಾಗುವ ಮುನ್ನವೇ ಈ ಹುಲಿಯನ್ನು ಸೆರೆ ಹಿಡಿಯಲೇಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಹನಗೋಡು ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.