ಕಳಪೆ ಕಾಮಗಾರಿ ಪ್ರಶ್ನಿಸಿದ ಗ್ರಾ.ಪಂ.ಉಪಾಧ್ಯಕ್ಷೆಯ ಮೂಳೆ ಮುರಿದ ಅಧ್ಯಕ್ಷೆಯ ಪತಿ
Team Udayavani, Feb 12, 2024, 10:38 PM IST
ಹುಣಸೂರು: ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಗೆ ಅಧ್ಯಕ್ಷರ ಪತಿ ಹಾಗೂ ಸದಸ್ಯರೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಜಾಬಗೆರೆಯಲ್ಲಿ ನಡೆದಿದೆ.
ತಾಲೂಕಿನ ಶಂಕರೇಗೌಡನಕೊಪ್ಪಲು ನಿವಾಸಿ ನಾಗರಾಜುರ ಪತ್ನಿ ಹಾಗೂ ಜಾಬಗೆರೆ ಗ್ರಾ.ಪಂ.ಉಪಾಧ್ಯಕ್ಷೆ ಜಯಮ್ಮರವರೇ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭುಜದ ಮೂಳೆ ಮುರಿದಿದೆ.
ಜಾಬಗೆರೆ ಪಂಚಾಯತ್ ಕಟ್ಟಡದ ಮೇಲಂತಸ್ತಿನ ಕಟ್ಟದ ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ಉಪಾಧ್ಯಕ್ಷೆ ಜಯಮ್ಮ ಪರಿಶೀಲಿಸಿ ಕೆಲಸ ಸರಿಯಾಗಿ ಮಾಡುತ್ತಿಲ್ಲ, ಕಳಪೆ ಕಾಮಗಾರಿ ನಡೆಸುತ್ತಿದ್ದೀರಿ, ಪಂಚಾಯತ್ ಕಟ್ಟಡವೇ ಹೀಗಾದರೆ ಹೇಗೆಂದು ಪ್ರಶ್ನಿಸಿ, ಕೆಲಸ ಸ್ಥಗಿತಗೊಳಿಸಿ, ಇಲ್ಲದಿದ್ದಲ್ಲಿ ನಿಮ್ಮಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ಪಿಡಿಒ ಮಿನಾಕ್ಷಮ್ಮರಿಗೆ ಹೇಳಿದ ವೇಳೆ, ಪಂಚಾಯಿತಿ ಕಚೇರಿಯಯಲ್ಲೆ ಕುಳಿತಿದ್ದ ಗ್ರಾ.ಪಂ.ಅಧ್ಯಕ್ಷೆ ಮಂಜುಳಮ್ಮರ ಪತಿ ಹಾಗೂ ಸದಸ್ಯ ತಿಮ್ಮನಾಯ್ಕ ಹೊರ ಬಂದು ನೀನ್ಯಾರು ಕೇಳೊಕ್ಕೆ, ಇಲ್ಲಿ ನಮ್ಮದೆ ದರ್ಬಾರ್, ನನ್ನ ಹೆಂಡತಿಯೇ ಅಧ್ಯಕ್ಷೆ ನಮ್ಮದೇ ಅಧಿಕಾರ ಎಂದು ಕೇವಲವಾಗಿ ಮಾತನಾಡಿದ್ದು, ಮಾತಿಗೆ ಮಾತು ಬೆಳೆದಿದೆ. ಈವೇಳೆ ಉಪಾಧ್ಯಕ್ಷೆ ಜಯಮ್ಮರ ಮೇಲೆ ದೈಹಿಕವಾಗಿಯೂ ಹಲ್ಲೆ ನಡೆಸಿದ ತಿಮ್ಮನಾಯಕ ದೂಡಿದ ವೇಳೆ ಕೆಳಕ್ಕೆ ಬಿದ್ದ ಜಯಮ್ಮರ ಎಡ ಭುಜದ ಮೂಳೆ ಮುರಿದು ತೀವ್ರ ಪೆಟ್ಟಾಗಿದೆ. ನೊವಿನಿಂದ ಕೂಗಿಕೊಂಡ ವೇಳೆ ಗ್ರಾ.ಪಂ.ಬಳಿಯಲ್ಲೇ ಇದ್ದ ಅವರ ಪುತ್ರ ನಾಗೇಂದ್ರನಾಯ್ಕ ತಾಯಿಯನ್ನು ಕರೆತಂದು ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿದ್ದಾರೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ಸೂಚನೆ ದಿಕ್ಕರಿಸಿದ್ದ ಗುತ್ತಿಗೆದಾರ
ಈ ಕಾಮಗಾರಿ ಬಗ್ಗೆ ಮೇಲ್ನೋಟಕ್ಕೆ ಕಳಪೆ ಎಂದು ತಿಳಿದು ಎಇ, ಎಇಇ ಹಾಗೂ ಸ್ಥಳೀಯ ಇಂಜಿನಿಯರ್ ಸ್ಥಳ ಪರಿಶೀಲಿಸಿ ಕಾಮಗಾರಿ ಪರಿಶಿಲಿಸಿ ಸ್ಥಗಿತಗೊಳಿಸಲು ಸೂಚಿಸಿದ್ದರು. ಆದರೆ ಗುತ್ತಿಗೆದಾರ ಕೆಲಸ ನಿಲ್ಲಿಸದೆ ಮುಂದುವರೆಸಿದ್ದರು.
ತನಿಖೆಗೆ ಒತ್ತಾಯ
ಕಾಮಗಾರಿಯ ಅಕ್ರಮ ಪ್ರಶ್ನಿಸಿದಕ್ಕೆ ಪಂಚಾಯಿತಿ ಅಬಿವೃದ್ದಿ ಅದಿಕಾರಿ ಎದುರಿನಲ್ಲೆ ಅಧ್ಯಕ್ಷರ ಪತಿ ಜೊತೆಗೆ ಸದಸ್ಯರಿಂದಲೇ ಉಪಾಧ್ಯಕ್ಷರ ಮೇಲೆಯೇ ಈ ರೀತಿ ಹಲ್ಲೆ ನಡೆದಿರುವುದು ಆತಂಕಕ್ಕೀಡುಮಾಡಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಜಿ.ಪಂ.ಸಿಇಓ ರಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.