ಹಸ್ತ ಹಿಡಿಯುತ್ತಿದ್ದೇನೆ: ಕಳಲೆ
Team Udayavani, Feb 8, 2017, 12:25 PM IST
ನಂಜನಗೂಡು: ಕಾಂಗ್ರೆಸ್ ಪಕ್ಷ ತಮಗೆ ಆಹ್ವಾನ ನೀಡಿರುವುದು ಖಚಿತ ಎಂದು ಕಳಲೆ ಕೇಶವಮೂರ್ತಿ ಘೋಷಿಸುವುದರೊಂದಿಗೆ ನಂಜನಗೂಡು ಉಪಚುನಾವಣೆಯ ಗೊಂದಲಕ್ಕೆ ಅಲ್ಪವಿರಾಮ ಬಿದ್ದಂತಾಗಿದೆ. ತಾಲೂಕು ಜನತಾ ದಳದಿಂದ ಸಾಮೂಹಿಕ ವಲಸೆಗೆ ಅನುಮತಿ ಸಿಕ್ಕಂತಾಗಿದೆ.
ಮಂಗಳವಾರ ಇಲ್ಲಿನ ಯಾತ್ರಿ ಭವನದಲ್ಲಿ ಕರೆಯಲಾಗಿದ್ದ ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ತುಂಬಿದ್ದ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚುನಾವಣೆಯ ಕುರಿತು ಸಿದ್ಧತೆ ಮಾಡಿಕೊಳ್ಳಲು ಅವರಿಂದ ಸೂಚನೆ ಪಡೆದಿದ್ದೇನೆ. ತಾವು 37 ವರ್ಷಗಳಿಂದ ಪಕ್ಷದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇಲ್ಲಿನ ಪರಿಸ್ಥಿತಿಯ ವಿಷಯ ತಿಳಿಸಿದ್ದೇನೆ. ಅವರ ಆಶೀರ್ವಾದದೊಡನೆ ಮುಂದಡಿ ಇಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ಸಭೆಯ ಅಂತಿಮ ಘಟ್ಟದಲ್ಲಿ ಮಾತನಾಡಿದ ಕೇಶವಮೂರ್ತಿ, 1980ರಿಂದ ತಾವು ಜನತಾ ಪಕ್ಷ ಹಾಗೂ ದಳದಲ್ಲಿ ಗುರುಸಿಕೊಂಡು ಮಾಜಿ ಸಚಿವರಾದ ಕೆ.ಬಿ.ಶಿವಯ್ಯ, ಡಿ.ಟಿ.ಜಯಕುಮಾರ್, ಬೆಂಕಿ ಮಹದೇವು ಹಾಗೂ ಕೆ.ನರಸೇಗೌಡ ಅವರೊಂದಿಗೆ ಕೆಲಸ ಮಾಡಿದ್ದನ್ನು ಮೆಲಕು ಹಾಕುತ್ತಾ ಕಂಬಿನಿ ತುಂಬಿ ಗದ^ತರಾದರು. ಇದೇ ಸಭಾಂಗಣದಲ್ಲಿ ಪಕ್ಷದ ಅದೇಷ್ಟೂ ಸಭೆಗಳನ್ನು ಆಯೋಜಿಸಿದ್ದೆ. ಆದರೆ ಇಂದಿನ ಸಭೆ ಜೆಡಿಎಸ್‌ನಲ್ಲಿ ತಮ್ಮ ಪಾಲಿನ ಅಂತಿಮ ಸಭೆ ಎನ್ನುತ್ತ ಅವರು ಕಣ್ಣೀರು ಹಾಕಿದರು.
ತಾವು ಅತ್ಯಂತ ನೋವಿನಿಂದಲೇ ಪಕ್ಷ ತೊರೆಯುತ್ತಿದ್ದೇನೆ. ಸಂತೋಷವಾಗಿ ದಳ ಬಿಡುತ್ತಿಲ್ಲ. ಸನ್ನಿವೇಶ ನಿರ್ಮಾಣ ಆಗಿದ್ದನ್ನು ಬೆಂಬಲಿಗರಿಗೆ ವಿವರಿಸಿದರು. ಈಗ ಅನಿವಾರ್ಯವಾಗಿ ಪಕ್ಷ ಬಿಡುವಂತಾಗಿದೆ. ತಮ್ಮೊಂದಿಗೆ ಕೆಲಸ ಮಾಡಿ ಸಹಕರಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಸಹಕಾರ ನೀಡುವಂತೆ ಕೋರಿದರು. ತಮ್ಮ ತೀರ್ಮಾನಕ್ಕೆ ನಿಮ್ಮ ಒಪ್ಪಿಗೆ ನಿರೀಕ್ಷಿಸುವುದಾಗಿ ಹೇಳಿದರು.
ದಳದ ಆಸ್ತಿ ಕಾಂಗ್ರೆಸ್ ಪಾಲು: ತಾಲೂಕು ಜನತಾ ದಳದ ಆಸ್ತಿಯಾಗಿ ಪಕ್ಷದ ಅಸ್ತಿತ್ವಕ್ಕೆ ಕಾರಣರಾಗಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವುದರೊಂದಿಗೆ ತಾಲೂಕಿನ ಜೆಡಿಎಸ್ ಸಂಪೂರ್ಣ ಆಸ್ತಿ ಕಾಂಗ್ರೆಸ್ ಪಾಲಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಡುವಿನಹಳ್ಳಿ ಶಂಕರಪ್ಪ ಬಣ್ಣಿಸಿದರು. ಕೇಶವ ಮೂರ್ತಿ ಪಕ್ಷ ತೊರೆದರೆ ತಾನು ಸ್ಪರ್ಧಿಸಲು ಸಿದ್ಧ ಎಂದು ಅಶೋಕಪುರದ ಬಸವರಾಜು ಹೇಳಿದರು. ಅಲ್ಲದೆ ಕೇಶವಮೂರ್ತಿಯವರಿಗೆ ಒಳೆಯÛದಾಗಲಿ ಎಂದು ಹಾರೈಸಿಸುತ್ತ ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಪಕ್ಷ ಸೂಚಿಸಿದರೆ ತಾವೇ ಸ್ಪರ್ಧೆಗೆ ಸಿದ್ಧ ಎಂದರು.
ತಾಲೂಕು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹಾಗೂ ಸ್ಥಳಿಯ ವಕೀಲರ ಸಂಘದ ಅಧ್ಯಕ್ಷ ಬಿ.ರಾಚಪ್ಪ ಮಾತನಾಡಿ, 8 ವರ್ಷಗಳಿಂದ ನಂಜನಗೂಡು ಕ್ಷೇತ್ರಕ್ಕೆ ಗ್ರಹಣ ಹಿಡಿದಿತ್ತು. ಪ್ರಸಾದ್ ಅವರ ರಾಜೀನಾಮೆಯಿಂದಾಗಿ ಅದು ದೂರವಾಗಿದೆ. ಮತ್ತೆ ಗ್ರಹಣ ಹಿಡಿಯಲು ಅವಕಾಶ ನೀಡಬೇಡಿ. ಕೇಶವ ಮೂರ್ತಿಯವರನ್ನು ಗೆಲ್ಲಿಸಿ ಎಂದರು.
ಹೆಡಿಯಾಲದ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣಿ, ವಕೀಲ ಮುರುಳಿ, ಜಿಪಂ ಮಾಜಿ ಅಧ್ಯಕ್ಷ ಮಡುವಿನಹಳ್ಳಿ ಶಂಕರಪ್ಪ, ಎನ್.ಶ್ರೀನಿವಾಸ್, ಕೆಂಪರಾಜು, ಸೋಮಣ್ಣ, ಹೊರಳವಾಡಿ ಪರಶಿವ ಮೂರ್ತಿ, ತಾಪಂ ಮಾಜಿ ಸದಸ್ಯೆ ಗೀತಾ ಗೋವಿಂದರಾಜು, ಹಾಡ್ಯ ಶಿವಣ್ಣ. ಶ್ರೀಕಂಠೇಶ್ವರ ದೇವಾಲಯದ ಮಾಜಿ ಕನ್ವೀನರ್ ಕಿಟ್ಟಪ್ಪ, ದೇವರಸನಹಳ್ಳಿ ಸಣ್ಣಪ್ಪ, ಸೌಭಾಗ್ಯ, ರೇಣುಕಾ, ನಂಜನಮ್ಮಣ್ಣಿ, ಗುರುಮಲ್ಲಪ್ಪ, ಬಸವರಾಜು ಹಾಗೂ ನಗರಸಭಾ ಸದಸ್ಯರಾದ ಖಾಲಿದ್, ಮಟನ್ ಬಾಬು, ರಾಮಕೃಷ್ಣ, ರಾಜೇಶ, ದೊಡ್ಡ ಮಾದಯ್ಯ ಇದ್ದರು.
ಸದಸ್ಯನಿಂದಲೇ ನಿರ್ಣಯ ಮಂಡನೆ!
ಜೆಡಿಎಸ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎನ್.ಶ್ರೀನಿವಾಸ ಅವರೇ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಕಳುಹಿಸಿ ಕೊಡುವ ನಿರ್ಣಯ ಮಂಡಿಸಿದರು. ಆಗ ಸಭೆ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸುವುದರೊಂದಿಗೆ ತಾಲೂಕಿನಲ್ಲಿ ಜೆಡಿಎಸ್ ಪಾಲಿಗೆ ಕೊನೆಯ ಮೊಳೆ ಬಿದ್ದಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.