ನಾನು ಮೋದಿಯವರ ಫ್ಯಾನ್ ಆಗಿ ಬಿಟ್ಟಿದ್ದೀನಿ ಸರ್..
Team Udayavani, Feb 28, 2017, 1:00 PM IST
ಮೈಸೂರು: ಬಹಳ ಖುಷಿ ಆಗ್ತಿದೆ ಸರ್… ದೇಶದ ಪ್ರಧಾನಿ ಒಂದು ಸಣ್ಣ ವಿಷಯಕ್ಕೆ ಇಷ್ಟೊಂದು ಇಂಪಾರ್ಟೆನ್ಸ್ ಕೊಡ್ತಾರೆ ಅಂದ್ರೆ ಗ್ರೇಟ್ ಬಿಡಿ ಸರ್… ನಾನು ಅವರ ಫ್ಯಾನ್ ಆಗಿ ಬಿಟ್ಟಿದ್ದೀನಿ ಸರ್….
ಇದು ಪ್ರಧಾನಿ ನರೇಂದ್ರಮೋದಿ ಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಕ್ಯಾಷ್‌ಲೆಸ್ ವ್ಯವಹಾರ ನಡೆಸಿದಾಗ ಬಂದ ಬಹುಮಾನದ ಹಣವನ್ನು ಬೆಂಕಿ ಅವಘಡದಲ್ಲಿ ಗಾಯಗೊಂಡ ವೃದ್ಧೆಗೆ ನೀಡಿದ ಮೈಸೂರಿನ ಸಂತೋಷ್‌ರನ್ನು ಉಲ್ಲೇಖೀಸಿದ್ದರು. ಈ ಹಿನ್ನೆಲೆಯಲ್ಲಿ ಸಂತೋಷ್ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಉದಯವಾಣಿ ಅವರನ್ನು ಸಂಪರ್ಕಿಸಿದಾಗ ತಮ್ಮ ಖುಷಿಯನ್ನು ಹಂಚಿಕೊಂಡರು. ಅವರ ಖುಷಿಯನ್ನು ಸಂತೋಷರ ಮಾತುಗಳಲ್ಲೇ ಓದಿ … “30 ವರ್ಷಗಳ ಹಿಂದೆ ನಮ್ಮ ತಂದೆ ತೀರಿಕೊಂಡಾಗ ನಾಲ್ಕು ಮಕ್ಕಳ ತುಂಬು ಸಂಸಾರದ ಜವಾಬ್ದಾರಿ ತಾಯಿಯ ಮೇಲಿತ್ತು. ಮೈಸೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ವ್ಯಾಸಂಗ ಮುಗಿಸಿದ ನಂತರ ಉದ್ಯೋಗ ಹೊಂದಾಣಿಕೆ ಯಾಗದ್ದರಿಂದ 2000ನೇ ಇಸವಿಯಲ್ಲಿ ಮಂಡಿಮೊಹಲ್ಲಾದ ಶ್ರೀ ಟಾಕೀಸ್ ಬಳಿ ಪಿಎಸ್‌ಆರ್ ಲೂಬ್ರಿಕೆಂಟ್ಸ್ ಅಂಗಡಿ ತೆರೆದೆ.
ಹಿರಿಯಣ್ಣ ಸಂತೋಷ್ ನನ್ನ ಜೊತೆ ಲೂಬ್ರಿಕೆಂಟ್ಸ್ ಅಂಗಡಿ ನೋಡಿಕೊಂಡರೆ, ಇನ್ನಿಬ್ಬರು ಅಣ್ಣಂದಿರ ಪೈಕಿ ಒಬ್ಬರು ಟೈಲರ್, ಮತ್ತೂಬ್ಬರು ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದಾರೆ. ನಾನು ಲೂಬ್ರಿಕೆಂಟ್ಸ್ ಅಂಗಡಿ ನೋಡಿಕೊಳ್ಳುವ ಜೊತೆಗೆ ಭಾರತಿ ಆಕ್ಸಾದಲ್ಲಿ ವಾಹನ ವಿಮೆ ಸಲಹೆಗಾರನಾಗಿ ಕೆಲಸ ಮಾಡುತ್ತೇನೆ.
2016ರ ನವೆಂಬರ್ 8ರಂದು ನೋಟು ಅಮಾನ್ಯಿàಕರಣ ಮಾಡಿದ ಮೇಲೆ ಪೆಟ್ರೋಲ್ ಬಂಕ್, ಶಾಪಿಂಗ್ ಹೋದಾಗಲೆಲ್ಲ ಹಣದ ವ್ಯವಹಾರದ ಬದಲಿಗೆ ರೂಪೇ ಕಾರ್ಡ್ ಬಳಸುತ್ತಿದ್ದೇನೆ. ಇದರಿಂದ ಭ್ರಷ್ಟಾಚಾರ ಕಡಿಮೆಯಾಗಿ ಅಕೌಂಟೆಬಲಿಟಿ ಸಿಗುತ್ತೆ ಎನ್ನುವುದು ನನ್ನ ಅಭಿಪ್ರಾಯ.
ಪೆಟ್ರೋಲ್ ಬಂಕ್‌ಗಳಲ್ಲಿ ಕಾರ್ಡ್ ಬಳಸಿದವರಿಗೆ ಶೇ.5ರಷ್ಟು ಹಣ ಹಿಂದಕ್ಕೆ ಸಿಗುತ್ತದೆ. ಹೀಗಾಗಿ ತಮ್ಮ ಅಂಗಡಿಯಲ್ಲೂ ನಗದು ವ್ಯವಹಾರಕ್ಕಿಂತ ಪೇಟಿಎಂ ಅನ್ನು ಹೆಚ್ಚು ಸ್ವೀಕರಿಸುತ್ತೇವೆ. ನಮ್ಮಲ್ಲಿ ಬರುವ ಗ್ರಾಹಕರಿಗೂ ಕ್ಯಾಶ್‌ಲೆಸ್ ವಹಿವಾಟಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಕ್ಯಾಶ್‌ಲೆಸ್ ವಹಿವಾಟು ನಡೆಸುವುದರಿಂದ ಯಾವುದೇ ತೊಂದರೆ ಇಲ್ಲ. ಜತೆಗೆ ಆದಾಯ ತೆರಿಗೆಯನ್ನು ಸರಿಯಾಗಿ ಕಟ್ಟಿಬಿಟ್ಟರೆ ಇನ್ಯಾವ ತೊಂದರೆಯೂ ಇಲ್ಲ ನೋಡಿ.
ಜನವರಿ 5ರಂದು ನನ್ನ ಬ್ಯಾಂಕ್ ಖಾತೆಗೆ ಒಂದು ಸಾವಿರ ರೂ. ಜಮೆಯಾಯ್ತು, ಯಾವುದು ಈ ಹಣ ಎಂದು ಬ್ಯಾಂಕ್‌ಗೆ ಹೋಗಿ ವಿಚಾರಣೆ ಮಾಡಿದಾಗ ಡಿಜಿಧನ್‌ನಲ್ಲಿ ಬಹುಮಾನ ಬಂದಿರುವುದು ಎಂಬುದು ತಿಳಿಯಿತು. ಈ ಹಣವನ್ನು ಯಾವುದಕ್ಕೆ ಸದ್ಬಳಕೆ ಮಾಡುವುದು ಎಂದು ಕೊಳ್ಳುತ್ತಿದ್ದಾಗ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಗುಡಿಸಲಿಗೆ ಬೆಂಕಿಬಿದ್ದು ವೃದ್ಧೆಯೊಬ್ಬರು ನಿರ್ಗತಿಕರಾಗಿರುವ ವಿಷಯ ತಿಳಿದು ಅವರಿಗೆ ಒಂದು ಸಾವಿರ ರೂ. ನೀಡಿ ಸಹಾಯ ಮಾಡಿ ಅವರಿಗೆ ಹಣ ಕೊಟ್ಟೆ.
ಅದೇ ವೇಳೆಗೆ ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಪೋರ್ಟಲ್ ಓಪನ್ ಆಯ್ತು. ಅದರಲ್ಲಿ ಡಿಜಿಧನ್ ನಲ್ಲಿ ನನಗೆ ಬಂದ ಒಂದು ಸಾವಿರ ರೂ. ಬಹುಮಾನದ ಹಣವನ್ನು
ವೃದ್ಧೆಯೊಬ್ಬರಿಗೆ ಸಹಾಯಕ್ಕೆ ಬಳಸಿದ್ದಾಗಿ ಕಾಮೆಂಟ್ ಹಾಕಿದ್ದೆ. ಪ್ರಧಾನಿ ಮೋದಿ ಆಪ್‌ನಲ್ಲಿ ನನ್ನದಲ್ಲದೆ ಇನ್ನೂ 9 ಸಾವಿರ ಕಾಮೆಂಟ್ಸ್‌ಗಳಿತ್ತು. ಅದರಲ್ಲಿ ನನ್ನ ಕಾಮೆಂಟ್ಸ್ ಅನ್ನು ಪ್ರಧಾನಿಯವರು ಉಲ್ಲೇಖೀಸಿರುವುದು ಖುಷಿ ತಂದಿದೆ’.
ಶೇ.10ರಷ್ಟು ಕಷ್ಟ, ಶೇ.90 ಅನುಕೂಲ
ನೋಟು ರದ್ಧತಿಯಿಂದ ಶೇ.10ರಷ್ಟು ತೊಂದರೆಯಾಗಿರಬಹುದು. ಆದರೆ, ಶೇ.90ರಷ್ಟು ಒಳ್ಳೆಯದೇ ಆಗಲಿದೆ. ಎಲ್ಲ ಕಡೆಗೂ ಹಣ ಜತೆಯಲ್ಲಿಟ್ಟುಕೊಂಡು ಓಡಾಡುವುದು ಕಷ್ಟ. ಹೀಗಾಗಿ ಕ್ಯಾಶ್‌ಲೆಸ್ ವಹಿವಾಟು ಸುಲಭವಾಗಿದೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.