ಪೂಜಿಸಿದರೆ ಸಾಲದು, ಕೆಲಹೊತ್ತು ಧ್ಯಾನದಲ್ಲಿ ತೊಡಗಿ
Team Udayavani, Feb 27, 2020, 3:00 AM IST
ಹುಣಸೂರು: ವಿದೇಶದಲ್ಲಿ ಶಾಂತಿ ಸಮಾಧಾನವಿಲ್ಲ, ಭಾರತದಲ್ಲಿ ದೈವಿ ಶಕ್ತಿಯಿಂದಾಗಿ ನೆಮ್ಮದಿಯಿಂದಿದ್ದೇವೆ. ಪ್ರತಿಯೊಬ್ಬರಲ್ಲೂ ದೈವಿಶಕ್ತಿ ಇರಬೇಕು. ಮನಸ್ಸಿನ ನಿಗ್ರಹವೇ ವಿಗ್ರಹ ಎಂದು ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಣ್ಣಿಸಿದರು. ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಆದಿಶಕ್ತಿ ಮಹಾಕಾಳಮ್ಮ ದೇವಸ್ಥಾನದ ಮಹಾ ಸಂಪ್ರೋಕ್ಷಣೆ, ಕುಂಭಾಭಿಷೇಕ, ರಾಜಗೋಪುರ ಶಿಖರ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅಹಂಕಾರ ತ್ಯಜಿಸಿ: ಕೇವಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಗ್ರಹಕ್ಕೆ ಪೂಜಿಸಿದರೆ ಸಾಲದು, ಕನಿಷ್ಠ ಸ್ವಲ್ಪ ಹೊತ್ತಾದರೂ ಪರಮಾತ್ಮನ ಧ್ಯಾನ ಮಾಡಬೇಕು. ಇದು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನೆಮ್ಮದಿ ನೀಡಲಿದೆ. ಎಂದೂ ಕೂಡ ದೇವರ ಹೆಸರಿನಲ್ಲಿ ಕಿತ್ತಾಟಬೇಡ, ಹಣವಿದ್ದರಷ್ಟೆ ಎಲ್ಲವೂ ಆಗದು. ಗಳಿಸಿದ್ದರಲ್ಲಿ ಸ್ವಲ್ಪವಾದರೂ ದಾನ ಮಾಡಬೇಕು. ಮನುಷ್ಯನಿಗೆ ಅಹಂಕಾರ ಬರಬಾರದು, ಇದು ನಮ್ಮನೇ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಸ್ವಾಮೀಜಿಯವರ ಸಾಮಾಜಿಕ ಕಳಕಳಿ, ಆಶೀರ್ವಾದದಿಂದ ಈ ಬೃಹತ್ ದೇವಾಲಯ ನಿರ್ಮಾಣಗೊಂಡಿದ್ದು, ಹುಣಸೂರು ಸೇರಿದಂತೆ ಒಟ್ಟು 15 ಕಡೆ ಪೌರಕಾರ್ಮಿಕರ ಕಾಲೋನಿಗಳಲ್ಲಿ ದೇವಾಲಯ ನಿರ್ಮಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣೇಶನ ಗುಡಿ: ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ತಮ್ಮ ಅವಧಿಯಲ್ಲಿ ಈ ದೇವರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಮುಂದಿನ ಗೌರಿ-ಗಣೇಶ ಹಬ್ಬದೊಳಗೆ ಆವರಣದಲ್ಲಿ ಗಣೇಶನ ಗುಡಿಯನ್ನು ತಾಯಿಯ ಹೆಸರಿನಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಮಹಾಪೌರ ನಾರಾಯಣ್, ಪೌರಕಾರ್ಮಿಕರ ಬಗ್ಗೆ ಸ್ವಾಮೀಜಿಗಳು ಅಪಾರ ಗೌರವವಿಟ್ಟಿದ್ದು, ಈ ಸಮುದಾಯದ ಮಕ್ಕಳಿಗಾಗಿ ವಸತಿಶಾಲೆ ನಿರ್ಮಿಸಲು ಉತ್ಸುಕರಾಗಿದ್ದಾರೆ. ಇದಕ್ಕಾಗಿ ಹುಣಸೂರಿನಲ್ಲಿ ಐದು ಎಕರೆ ಭೂಮಿ ನೀಡಲು ಜನಪ್ರತಿನಿಧಿಗಳು ಮುಂದಾಗಬೇಕೆಂದು ಕೋರಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮ, ಕಾರ್ಯದರ್ಶಿ ಜಿಮ್‌ಮಣಿ, ಜನಾಂಗದ ಯಜಮಾನರಾದ ಚಿನ್ನಸ್ವಾಮಿ, ರಾಮಯ್ಯ, ಚಂದ್ರ, ಅಮವಾಸೆ, ಪಳನಿಸ್ವಾಮಿ, ಕುಮಾರ, ಸುಬ್ರಮಣಿ, ನಗರಸಭೆ ಸದಸ್ಯೆ ರಾಣಿಪೆರುಮಾಳ್ ಮತ್ತಿತರರಿದ್ದರು.
ಶೀಘ್ರ ಬೃಹತ್ ಹನುಮಾನ್ ಚಾಲಿಸ್ ಪಠಣ ಕಾರ್ಯಕ್ರಮ: ತಮ್ಮ ಪೀಠದ ವತಿಯಿಂದ ದೇಶ-ವಿದೇಶದಲ್ಲಿ ನೂರಾರು ಹನುಮಂತನ ಗುಡಿಗಳನ್ನು ನಿರ್ಮಿಸಲಾಗಿದೆ. ಇದು ಮುಂದೆಯೂ ಮುಂದುವರಿಯಲಿದೆ. ಹುಣಸೂರಿನಲ್ಲಿ ಬೃಹತ್ ಹನುಮಾನ್ ಚಾಲಿಸ್ ಪಠಣ ಕಾರ್ಯ ನಡೆಸಲುದ್ದೇಶಿಸಿದ್ದು,
ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮನವಿ ಮಾಡಿದರು. ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು, ಇತರರಂತೆ ದೊಡ್ಡ ಕನಸು ಕಾಣಬೇಕು ಎಂದ ಅವರು, ಈ ದೇವಾಲಯಕ್ಕೆ ನೆರವಾಗಿರುವ ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಪಿ ಮಂಜುನಾಥ್ ಅವರನ್ನು ಶ್ಲಾ ಸಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ಜೋಡಿ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಆದಿಶಕ್ತಿ ಮಹಾಕಾಳಮ್ಮ ದೇಗುಲ ರಾಜಗೋಪುರ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭದಲ್ಲಿ ಎಂಟು ಜೋಡಿ ಸಾಮೂಹಿಕ ಸರಳ ವಿವಾಹ ಸಹ ನಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇಗುಲ ಕುಂಭಾಭಿಷೇಕ ಪ್ರತಿಷ್ಠಾಪನೆ ಅಂಗವಾಗಿ ಕಾಲೋನಿಯ ಮಹಿಳೆಯರು ಕಳಶಹೊತ್ತು ನಗರದ ವಿವಿಧ ಬಡಾವಣೆಗಳಲ್ಲಿ ಮೆರೆವಣಿಗೆ ನಡೆಸಿದರು.
ಇಡೀ ಕಾಲೋನಿಯನ್ನು ಸಿಂಗರಿಸಲಾಗಿತ್ತು. ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಲಾಗಿತ್ತು. ಭಕ್ತಾ ದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಡೀ ಕಾಲೋನಿಯ ಜನರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.