ಜನ ಹಣಕ್ಕೆ ಮಹತ್ವ ನೀಡಿದ್ದರಿಂದ ನನಗೆ ಸೋಲು
Team Udayavani, Nov 17, 2017, 12:07 PM IST
ನಂಜನಗೂಡು: ತಾನು ಸ್ವಾಭಿಮಾನವನ್ನು ಪಣಕ್ಕಿಟ್ಟು ಉಪ ಚುನಾವಣೆ ಕಣಕ್ಕಿಳಿದಾಗ ಹೆಚ್ಚು ಜನ ಸ್ವಾಭಿಮಾನವನ್ನು ಬದಿಗಿಟ್ಟು ಹಣಕ್ಕೆ ಮಹತ್ವ ನೀಡಿದ್ದರಿಂದ ತನಗೆ ಸೋಲಾಯಿತು ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ವಿಷಾದಿಸಿದರು. ತಾಲೂಕಿನ ಹೆಗ್ಗಡಹಳ್ಳಿ ಜಿಪಂ ಸದಸ್ಯ ದಯಾನಂದ ಮೂರ್ತಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.
ಉಪ ಚುನಾವಣೆ ನಂತರದ ಪ್ರಥಮ ಹೃದಯ ಸ್ಪರ್ಷಿ ಸಭೆ ನಡೆದಿದೆ ಎಂದ ಅವರು, ಹೆಚ್ಚನ ಮತದಾರರು ಸ್ವಾಭಿಮಾನವನ್ನು ಬದಿಗೊತ್ತಿ ಸಿದ್ದರಾಮಯ್ಯನವರ ಹಣಕ್ಕೆ ಪ್ರಾಧಾನ್ಯತೆ ನೀಡಿದರು. ಆದರೆ, ಹಣ ತಿರಸ್ಕರಿಸಿ ತಮಗೆ ಮತ ನೀಡಿದ 65 ಸಾವಿರ ಜನತೆಗೆ ತಾವು ಅತ್ಯಂತ ಋಣಿಯಾಗಿರುವುದಾಗಿ ಹೇಳಿದರು.
ನೀವೇ ಅಭ್ಯರ್ಥಿಯಾಗಿ ಎಂಬ ಬೆಂಬಲಿಗರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್, ಕೆಲವು ತಮ್ಮ ಬೆಂಬಲಿಗರಿಗೆ ಜೆ.ಪಿ.ಪ್ಯಾಲೇಸ್‌ನ ಮೂಳೆ ಹಾಗೂ ನೋಟುಗಳೇ ಪ್ರಧಾನವಾಯಿತು ಎಂದರು. ಇನ್ನು ತಮ್ಮ ಸ್ಪರ್ಧೆ ವರಿಷ್ಟರಿಗೆ ಬಿಟ್ಟದ್ದು ಎಂದರು.
ಎರಡು ಜಿಲ್ಲೆ ಸೀಮಿತ: ಬರುವ ಚುನಾವಣೆಯಲ್ಲಿ ತಾವು ಮೈಸೂರು ಚಾಮರಾಜ ನಗರ ಜಿಲ್ಲೆಗಳಿಗೆ ಸಿಮೀತರಾಗಲಿದ್ದು ಇವರೆಡು ಜಿಲ್ಲೆಗಳ ವರುಣ, ಚಾಮುಂಡೇಶ್ವರಿ, ಟಿ.ನರಸಿಪುರ ನಂಜನಗೂಡು ಸೇರಿದಂತೆ ಎಲ್ಲಡೆ ಕಾಂಗ್ರೆಸ್‌ನ್ನು ಸೋಲಿಸುವ ಗುರಿ ಹೊಂದಿದ್ದೇವೆಂದರು.
ತಮ್ಮ ಕಾಲದಲ್ಲಿ ಆರಂಭಗೊಂಡ ಮಿನಿ ವಿಧಾನಸೌಧ, ಪದವಿ ಕಾಲೇಜು, ಬಸ್ ನಿಲ್ದಾಣ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಕೆರೆ ತುಂಬುವ ಕಾಮಗಾರಿ, ಸಮುದಾಯ ಭವನಗಳು ಮುಂತಾದವುಗಳನ್ನು ಬಿಟ್ಟರೆ ಇನ್ನೇನು ಕೆಲಸ ಪ್ರಾರಂಭಿಸಿದ್ದೀರಿ ಹೇಳಿ ಎಂದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಣ ಹಂಚುವ ಲೋಕಸಭಾ ಸದಸ್ಯರು ಎಂದು ಟೀಕಿಸಿದ ಅವರು ಚುನಾವಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಣ ಹಂಚುವ ಸಾಮರ್ಥ್ಯ ನಮ್ಮ ಸಂಸರಿಗಲ್ಲದೆ ಇನ್ಯಾರಿಗಿದೆ ಎಂದು ಸಂಸದ ಧ್ರುವನಾರಾಯಣರ ಹೆಸರೇಳದೆ ತರಾಟೆಗೆ ತೆಗೆದುಕೊಂಡರು.
ತಮ್ಮನ್ನು ಸೋಲಿಸುವ ಭರದಲ್ಲಿ ಸಮಾಜದ ನಾಯಕರೆಲ್ಲಾ ಒಂದಾಗಿ ದಲಿತರ ಸ್ವಾಭಿಮಾನವನ್ನೇ ಹೊಸಕಿ ಹಾಕಿದ ಖರ್ಗೆ, ಪರಮೇಶ್ವರ ಸೇರಿದಂತೆ ದಲಿತ ನಾಯಕರುಗಳು ಎಂದ ಪ್ರಸಾದ ತಾವೇನು ಮಾಡುತ್ತಿದ್ದೇವೆ ಎಂದು ಯೋಚಿಸದೆ ಸಮುದಾಯವನ್ನೇ ಬಲಿಕೊಟ್ಟರೆಂದರು.
ಸಭೆ ಆಯೋಜಕ ದಯಾನಂದಮೂರ್ತಿ ಮಾತನಾಡಿದರು. ಜಿಪಂ ಸದಸ್ಯ ಸದಾನಂದ, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಹರ್ಷವರ್ಧನ, ಕೃಷ್ಣರಾಜಪುರದ ಸಿದ್ದಪ್ಪ, ಬಸವರಾಜು, ರಾಜಶೇಖರಮೂರ್ತಿ, ಸುರೇಶ, ಬಸವಣ್ಣ, ಶೇಖರ ಸೇರಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿದ್ದರು.
ನನ್ನ ಪುಸ್ತಕದಲ್ಲಿ 2 ಭಾಗಗಳಿವೆ. ಬೂಸಾ ಚಳವಳಿಯಿಂದ ಉಪ ಚುನಾವಣೆವರೆಗಿನ ವಿಷಯಗಳಿವೆ. ಅಲ್ಲದೆ, ನಂಜನಗೂಡು ಉಪಚುನಾವಣೆಯಲ್ಲಿ ಸಮಾಜವಾದಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ನಾಯಕರು ನಡೆದುಕೊಂಡ ವಿವರಗಳನ್ನೂ ದಾಖಲಿಸಿ ಅವರ ಮುಖವಾಡವನ್ನು ಬಹಿರಂಗಪಡಿಸುವೆ. ಒಂದು ಭಾಗ ಈಗಾಗಲೆ ಮುದ್ರಣಕ್ಕೆ ಹೋಗಿದ್ದು ಇನ್ನೋಂದು ಭಾಗ ಕೆಲವೇ ದಿನಗಳಲ್ಲಿ ಮುದ್ರಣವಾಗಲಿದೆ.
-ಶ್ರೀನಿವಾಸ ಪ್ರಸಾದ, ಬಿಜೆಪಿ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.