ಮನುಕುಲ ಮರೆಯಲಾರದ 2020 ರ ಹಿನ್ನೋಟ
Team Udayavani, Dec 29, 2020, 3:34 PM IST
ಇನ್ನೆರೆಡು ದಿನಗಳಲ್ಲಿ 2020 ಎಂಬ ಮನುಕುಲ ಕಂಡ ಕರಾಳ ವರ್ಷ ಕೊನೆಯಾಗಲಿದ್ದು, 2021ರ ಹೊಸ ಬೆಳಕು ಹೊಸ ಆಶಾವಾದ ಮೂಡಿಸಿದೆ. ಕೋವಿಡ್ ಎಂಬ ಕಣ್ಣಿಗೆ ಕಾಣದ ವೈರಾಣುವಿನಿಂದ ಇಡೀ ಜಗತ್ತು ತತ್ತರಿಸಿತು. ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿ ಇದೀಗ ತುಸು ಚೇತರಿಕೆಯ ಹಾದಿ ಕಾಣುತ್ತಿದೆ. ಬಣಗುಡುತ್ತಿದ್ದ ಪ್ರವಾಸಿ ತಾಣಗಳುಪ್ರಸ್ತುತ ಜನ ಜಂಗುಳಿಯಿಂದ ಕೂಡಿವೆ. ಸ್ಥಗಿತವಾಗಿದ್ದ ರೈಲುಗಳು ಓಡಲಾರಂಭಿಸಿವೆ. 8 ತಿಂಗಳು ಬಂದ್ ಆಗಿದ್ದ ಪದವಿ ಕಾಲೇಜುಗಳು ಪುನಾರಂಭವಾಗಿ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.
ಮೈಸೂರು: ಹೊಸ ಆಲೋಚನೆ, ಹೊಸ ಆಶಾವಾದದೊಂದಿಗೆ 2020ರ ಹೊಸ ವರ್ಷಕ್ಕೆ ಕಾಲಿರಿಸಿದ್ದ ಜನತೆಯ ಸಂಭ್ರವನ್ನು ವರ್ಷಪೂರ್ತಿ ಕೋವಿಡ್ ಸೋಂಕು ನುಂಗಿ ಹಾಕಿದರೆ, ಅದೆಂ ತಹ ಕಠಿಣ ಪರಿಸ್ಥಿತಿ ಎದುರಾದರೂ ನಾವು ಬದುಕಿ ತೋರಿಸುತ್ತೇವೆ ಎಂಬ ಮನೋಬಲಕ್ಕೆ ಈ ವರ್ಷ ಸಾಕ್ಷಿ ಯಾಗಿದ್ದು ಸುಳ್ಳಲ್ಲ. ಇತಿಹಾಸ ಪುಟ ಸೇರಿಲಿರುವ 2020ರ ಕೆಲವು ಪ್ರಮುಖ ಘಟನಾವಳಿಗಳ ಸಿಂಹಾವ ಲೋಕನ ನಡೆಸಿದಾಗಕಂಡ ಕೆಲ ಘಟನೆಗಳು ಮನಸ್ಸನ್ನು ಚುಚ್ಚಿದರೆ, ಮತ್ತೆ ಕೆಲವು ಆತ್ಮಸ್ಥೈರ್ಯ ಮತ್ತು ಸಂತೋಷ ಉಂಟು ಮಾಡಿವೆ.
ವರ್ಷಾರಂಭಕ್ಕೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿ ವರ್ಷ ಪೂರ್ತಿ ತನ್ನ ಕಬಂಧಬಾಹು ವಿಸ್ತರಿಸಿದ ಕೋವಿಡ್ ಭೀತಿಯಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಗ್ರಹಣ ಹಿಡಿಯುವಂತಾಯಿತು. ಮಳೆರಾಯನ ಕೃಪೆಯಿಂದ ಕೃಷಿಕ್ಷೇತ್ರ ಮುನ್ನಡೆ ಸಾಧಿಸಿದರೆ, ಪ್ರವಾಸೋದ್ಯಮ, ಹೋಟೆಲ್, ಸಾರಿಗೆ ಸೇರಿದಂತೆ ಆರ್ಥಿಕ ಕ್ಷೇತ್ರಗಳು ಹಿನ್ನಡೆ ಅನುಭವಿಸುವಂತಾಯಿತು. ಉದ್ಯೋಗ ಕಡಿತ: ಕೈಗಾರಿಕೆಗಳು ಸೇರಿದಂತೆ ಹಲವು ಕಂಪನಿ ಗಳಲ್ಲಿ ಕೆಲಸ ಮಾಡುತ್ತಾ ಜೀವನದ ಬಂಡಿ ಸಾಗಿಸುತ್ತಿದ್ದ ಸಹಸ್ರಾರು ನೌಕರರು ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸಿದರು. ಬೀದಿ ಬದಿ ವ್ಯಾಪಾರಿಗಳು, ವರ್ತಕರು,ಅಸಂ ಘಟಿತ ವಲಯದ ಕಾರ್ಮಿಕರು ಕೆಲವಿಲ್ಲದೇ ನಿರುದ್ಯೋಗಿಗಳಾಗಿ ಒಪ್ಪತ್ತಿನ ಊಟಕ್ಕೂ ಪರದಾಡುವಂತ ಪರಿ ಸ್ಥಿತಿ ನಿರ್ಮಾಣವಾಗಿತ್ತು.
ಸಾರಿಗೆ ಸ್ತಬ್ಧ: ಮಾರ್ಚ್ ಅಂತ್ಯದಲ್ಲಿ ಕೋವಿಡ್ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ರೈಲುಗಳ ಓಡಾಟ ಸಂಪೂರ್ಣ ನಿಂತು ಹೋಯಿತು. ಖಾಸಗಿ ಬಸ್‌ಗಳು ಇನ್ನೂ ಕೂಡ ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಆರು ಏಳು ತಿಂಗಳ ಕಾಲ ಜನರ ಜೀವನಾಡಿಯಾಗಿರುವ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿತ್ತು. ಜನರಿಂದ ತುಂಬಿತುಳುಕುತ್ತಿದ್ದ ಸಂತೆಗಳು, ಜಾತ್ರೆ, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು ಬಿಕೋ ಎನ್ನುವಂತಿದ್ದವು.ವರ್ಷದ ಆರಂಭದಲ್ಲಿ ಮೈಸೂರಿನಲ್ಲಿ ಮೊಟ್ಟ ಮೊದಲಕಾರ್ಯಕ್ರಮವಾಗಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸ ವನಡೆದಿದ್ದು, ಈ ವರ್ಷ ತಲಕಾಡು ಪಂಚಲಿಂಗ ದರ್ಶನ ಮಹೋ ತ್ಸವ ವರ್ಷದ ಕಡೆಯ ಕಾರ್ಯಕ್ರಮ ಎಂಬ ಸ್ಥಾನ ಪಡೆದುಕೊಂಡಿದೆ.
ಕಳ್ಳರ ಕೈಚಳಕ: 2020-2021ನೇ ಸಾಲಿನ ಅವಧಿಯಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳು ಒಂದು ರೀತಿಯಲ್ಲಿ ಕಣ್ಣಾಮುಚ್ಚಾಲೆ ಆಟದಂತೆಯೂ ಗೋಚರವಾಗುತ್ತದೆ. ಒಂದೆಡೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದರೆ, ಮತ್ತೂಂ ದೆಡೆಯಿಂದ ಪೊಲೀಸರು ಅವರ ಕುಕೃತ್ಯಗಳಿಗೆ ಎಡೆಮುರಿ ಕಟ್ಟುತ್ತಾ ಕಡಿವಾಣ ಹಾಕಿದರು. ಇನ್ನೇನು ನಗರದಲ್ಲಿ ವಾತಾವರಣ ಶಾಂತ ರೀತಿಗೆ ತಲುಪಿತೇ ಎನ್ನುವ ಹೊತ್ತಿಗಾಗಲೇ ಮತ್ತೂಂದು ಕೃತ್ಯ ಸಂಭವಿಸಿ ಪೊಲೀಸರ ನಿದ್ದೆಗೆಡಿಸಿದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪೊಲೀಸರು ಹಲವು ಪ್ರಕರಣಗಳನ್ನು ಭೇದಿಸಿ, ನಾಗರಿಕರ ವಿಶ್ವಾಸ ಗಳಿಸಿಕೊಂಡದ್ದು, ಮೆಚ್ಚುಗೆಯ ಸಂಗತಿ.
ಕೋವಿಡ್ ದಿಂದ ಜಿಲ್ಲೆಗೆ ಯಾವ ರೀತಿ ಹೊಡೆತ? :
ಕೋವಿಡ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಎರಡು ತಿಂಗಳು ಕಾಲ ಸಾಂಸ್ಕೃತಿಕ ನಗರಿ ಮೈಸೂರು ಭಾಗಶಃ ಸ್ತಬ್ಧವಾಗಿತ್ತು. ಬಡವರು, ವಲಸಿಗರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದಲ್ಲದೇ ಜಿಲ್ಲೆಯ ಜೀವಾಳವಾದ ಪ್ರವಾಸೋದ್ಯಮ ಸಂಪೂರ್ಣ ವಾಗಿ ನೆಲಕಚ್ಚಿತು.ಪರಿಣಾಮ ಹೋಟೆಲ್ ಉದ್ಯಮ ಸೇರಿದಂತೆ ಆರ್ಥಿಕ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿತು.ಅರಮನೆ, ಮೃಗಾಲಯ ತಿಂಗಳಗಟ್ಟಲೆಬಂದ್ ಆಗಿದ್ದವು. ಇದರಿಂದ ಆದಾಯಕುಸಿದು ಆರ್ಥಿಕ ಸಂಕಷ್ಟಕ್ಕೆ ಮೃಗಾ ಲಯ ಸಿಲುಕಿಕೊಂಡಿತು. ಮಾ.14ರಂದು ಮುಚ್ಚಿರುವ ನಗರದ ಬಹುತೇಕ ಚಿತ್ರ ಮಂದಿರಗಳು ಇಂದಿಗೂ ಪುನಾರಂಭವಾಗಿಲ್ಲ. ಅಲ್ಲದೆ ಮುಚ್ಚಿದ್ದಶಾಲಾ-ಕಾಲೇಜುಗಳು ಈವರೆಗೂ ತೆರೆಯದೇ ಆನ್‌ಲೈನ್‌ಮೂಲಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತಾಗಿದೆ.
ಕೋವಿಡ್ ದಿಂದ ಮೈಸೂರಿನಲ್ಲಿ ಜರುಗುತ್ತಿದ್ದ ಆಷಾಢ ಶುಕ್ರವಾರ ಸಂಭ್ರಮ, ನಂಜುಂಡೇಶ್ವರ ಜಾತ್ರೆ, ಮಾಗಿ ಉತ್ಸವ, ದಸರಾ ಉತ್ಸವ, ತಲಕಾಡು ಪಂಚಲಿಂಗ ದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನರಿಲ್ಲದೇ ಸರಳಾತಿ ಸರಳವಾಗಿ ನಡೆದವು
ಕೋವಿಡ್ ದಿಂದ ಧನಾತ್ಮಕ ಬದಲಾವಣೆ :
ಕೆಲಸ, ವ್ಯವಹಾರ ಹಾಗೂ ಉದ್ಯೋಗಕ್ಕಾಗಿ ದಿನವಿಡೀ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಮನೆಯವರೊಂದಿಗೆ ಒಂದಿಷ್ಟೂ ಸಮಯ ಕೊಡದೆ ಇದ್ದ ನಗರ ಪ್ರದೇಶದ ಜನರು ಲಾಕ್‌ಡೌನ್‌ನಿಂದದೀರ್ಘ ಸಮಯ ಮನೆಯಲ್ಲಿ ಉಳಿಯುವ ಜೊತೆಗೆ ಮನೆಯಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಂತಾಯಿತು.
ಮಾನವೀಯತೆ: ಲಾಕ್‌ಡೌನ್‌ನಿಂದ ಕಡು ಬಡವರು,ನಿರ್ಗತಿಕರು, ಭಿಕ್ಷುಕರು ಹಾಗೂ ಬೀದಿ ನಾಯಿಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾದಾಗ ಮೈಸೂರಿನ ಹತ್ತು ಹಲವು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಆಹಾರಪೊಟ್ಟಣವನ್ನು ನಿರಂತರವಾಗಿ ಹಂಚಿದವು. ಜೊತೆಗೆ ಕೆಲವರು ರಸ್ತೆ ಬದಿಯಲ್ಲಿದ್ದ ಶ್ವಾನಗಳಿಗೆ ಅನ್ನ ಆಹಾರ ನೀಡಿ ಸಲಹಿದ್ದು ಮಾನವ ಸಂಬಂಧ ಗಟ್ಟಿಗೊಳ್ಳಲು ಕಾರಣವಾಯಿತು.ತಗ್ಗಿದ ಶಬ್ದ, ವಾಯು ಮಾಲೀನ್ಯ: ಲಾಕ್‌ಡೌನ್‌ನಿಂದ ಜನಮತ್ತು ವಾಹನ ಸಂಚಾರ ಸಂಫೂರ್ಣ ಸ್ತಬ್ಧವಾದ ಹಿನ್ನೆಲೆ ಇಡೀಜಿಲ್ಲೆಯಲ್ಲಿ ಶಬ್ದ ಮತ್ತು ವಾಯು ಮಾಲೀನ್ಯ ಸಂಪೂರ್ಣವಾಗಿತಗ್ಗಿತ್ತು. ಎಲ್ಲೆಂದರಲ್ಲಿ ಶುದ್ಧ ಗಾಳಿ, ಹೊಸ ಹೊಸ ಹಕ್ಕಿಗಳ ಕಲರವ ಕಂಡು ಬಂದಿತು.
ನೆಲಕಚ್ಚಿದ ಪ್ರವಾಸೋದ್ಯಮ :
ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಆವರಸಿದ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಹಾಗೂ ಕೊರೊನಾ ಭೀತಿಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚುವಂತಾಯಿತು. ಮೈಸೂರು ಜಿಲ್ಲೆಯ ಜೀವಾಳವಾದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದರಿಂದ ಹೋಟೆಲ್ ಉದ್ಯಮ, ಆಟೋ, ಟ್ಯಾಕ್ಸಿ, ಬಸ್ ಸಂಚಾರದ ಮೇಲೂ ಅಡ್ಡ ಪರಿಣಾಮ ಬೀರಿತು. ಅರಮನೆ, ಮೃಗಾಲಯ ತಿಂಗಳ ಗಟ್ಟಲೆ ಮುಚ್ಚಿದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾದವು. ಮೈಸೂರುಮೃಗಾಲಯ ದಿನದ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪರದಾಡುವ ಸ್ಥಿತಿಗೆ ತಲುಪಿ, ಸಾರ್ವಜನಿಕರ ದೇಣಿಗೆ ಸಂಗ್ರಹದ ಮೂಲಕ ಕೊಂಚ ಸುಧಾರಿಸಿಕೊಳ್ಳುವಂತಾಯಿತು.
ಇನ್ನೂ ತೆರೆಯದ ಶಾಲೆಗಳು: ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆ ಶೈಕ್ಷಣಿಕ ಚಟುವಟಿಕೆಗಳಿಗೆ ಇನ್ನೂ ಗ್ರಹಣ ಹಿಡಿದಿದ್ದು, ಮಾ.14ರಿಂದ ಮುಚ್ಚಿರುವ ಶಾಲಾ ಪುನಾರಂಭವಾಗಿಲ್ಲ.
ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ :
ಮೈಸೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೈಸೂರು ಮಹಾನಗರ ಪಾಲಿಕೆಗೆ ಮೇಯರ್ ಆಗಿ ಗಮನ ಸೆಳೆದರು. ಜ.18ರಂದು ಜೆಡಿಎಸ್ ಸದಸ್ಯೆ ತಸ್ನೀಂ 33ನೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದರು. ಉಸ್ತುವಾರಿ ಸಚಿವ ಬದಲಾವಣೆ: ಜಿಲ್ಲೆಯಲ್ಲಿ ಕೊರೊನಾ, ಲಾಕ್‌ಡೌನ್‌ನಿಂದ ಜನರು ತತ್ತರಿಸಿದ್ದ ವೇಳೆ ಜನತೆಗೆ ಆಹಾರ ಕಿಟ್ ವಿತರಣೆ ಸೇರಿದಂತೆ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಜನರ ವಿಶ್ವಾಸ ಗಳಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಬದಲಿಸಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಏ.10 ರಂದು ನೇಮಿಸಲಾಯಿತು. ಇದರಿಂದ ಬೇಸರಗೊಂಡಿದ್ದ ಸೋಮಣ್ಣ 7 ತಿಂಗಳವರೆಗೆ ಮೈಸೂರಿನತ್ತ ಮುಖ ಮಾಡಿರಲಿಲ್ಲ. ವಿಶ್ವನಾಥ್‌ಗೆ ಎಂಎಲ್‌ಸಿ ಸ್ಥಾನ: ಹುಣಸೂರು ಕ್ಷೇತ್ರದಿಂದ ಶಾಸಕರಾಗಿದ್ದ ಎಚ್. ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ನಂತರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡು ಹಿನ್ನಡೆ ಅನುಭವಿಸಿದ್ದರು. ಬಹಳ ದಿನಗಳ ನಂತರ ರಾಜ್ಯ ಸರ್ಕಾರ ಸಾಹಿತ್ಯ ಕೋಟಾದಡಿ ವಿಶ್ವನಾಥ್ ಅವರನ್ನು ಮೇಲ್ಮನೆ ಸದಸ್ಯರನ್ನಾಗಿಸಿ ರಾಜಕೀಯ ಪುನರ್ಜನ್ಮ ನೀಡಿದ್ದು ವಿಶೇಷ.
ದಳದಿಂದ ಜಿಟಿಡಿ ದೂರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ರಾಜ್ಯದ ಗಮನ ಸೆಳೆದಿದ್ದ ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ದೂರವಾಗಿದ್ದು, ಪಕ್ಷ ತೊರೆಯುವ ಚಿಂತನೆಯಲ್ಲಿದ್ದಾರೆ.
ಫ್ರೀ ಕಾಶ್ಮೀರ ವಿವಾದ :
ಮೈಸೂರು ವಿವಿ ಆವರಣದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯಲ್ಲಿ ಜನವರಿ 8ರಂದು ನಡೆದಿದ್ದ ಪಂಜಿನ ಮೆರವಣಿಗೆಯಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಯುವತಿಯ ಮೇಲೆ ಪೊಲೀಸರು ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದರೆ, ರಾಜ್ಯಪಾಲರು ಘಟನೆ ಬಗ್ಗೆ ವರದಿ ಕೇಳಿದರು. ಈ ನಡುವೆ ಮೈಸೂರು ಜಿಲ್ಲಾ ವಕೀಲರ ಸಂಘ ಆಕೆಯ ಪರ ವಾದ ಮಂಡಿಸದಿರಲು ನಿರ್ಣಯ ಕೈಗೊಂಡಿತು. ಇದನ್ನು ವಿರೋಧಿಸಿ ಕೆಲ ವಕೀಲರು ಬೇರೆ ಭಾಗದಿಂದ ಬಂದು ಯುವತಿ ಪರ ವಾದ ಮಂಡಿಸಿದ್ದರು. ವಕೀಲರ ಸಂಘದ ನಿರ್ಣಯ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದ್ದು ಎಂದು ಇತ್ತೀಚೆಗೆ ಹೈಕೋರ್ಟ್ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿತ್ತು.
ಮೈಮುಲ್ ಗುದ್ದಾಟ:
ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿನ (ಮೈಮುಲ್) ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಒಂದೇ ಪಕ್ಷದ ಶಾಸಕರಾದ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ ಇಬ್ಬರ ನಡುವೆ ವಾಗ್ವಾದ ನಡೆಯಲು ಕಾರಣವಾಯಿತು. ಮುಂದೆ ಇದು ಜಿಲ್ಲೆಯ ಪಕ್ಷ ಸಂಘಟನೆಗೆ ಭಾರಿ ಹೊಡೆತ ಬಿದ್ದಿದ್ದಲ್ಲದೇ, ಜಿಟಿಡಿ ಪಕ್ಷ ತೊರೆಯುವ ಹಂತಕ್ಕೆ ಬಂದು ನಿಂತಿದೆ.
ಸೂಯೇಜ್ ಫಾರ್ಮ್ ಜಟಾಪಟಿ:
ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರ್ಮ್ ತ್ಯಾಜ್ಯ ವಿಲೇವಾರಿ ಘಟಕ ವಿಷಯದಲ್ಲಿ ಸ್ವಪಕ್ಷೀಯರಾದ ಸಂಸದ ಪ್ರತಾಪ್‌ಸಿಂಹ ಹಾಗೂ ಶಾಸಕ ಎಸ್.ಎ. ರಾಮದಾಸ್ ನಡುವೆ ಜಟಾಪಟಿಗೆ ಕಾರಣವಾಯಿತು. ಇಬ್ಬರ ನಡುವಿನ ಆರೋಪ-ಪ್ರತ್ಯಾರೋಪದಿಂದ ಬಿಜೆಪಿಗೆ ಮುಜುಗರ ಉಂಟಾಯಿತು. ಪರಿಣಾಮ ಸೂಯೇಜ್ ಫಾರ್ಮ್ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.
ಮಳೆ-ಬೆಳೆ, ಕೆರೆ ಕಟ್ಟೆ ಭರ್ತಿ :
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಪ್ರಮುಖ ಜಲಾಶಯ ಹಾಗೂ ಕೆರೆ-ಕಟ್ಟೆಗಳು ತುಂಬಿ ಹರಿದರೆ, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕೃಷಿ ರೈತರ ಕೈ ಹಿಡಿಯಿತು.ಕಾವೇರಿ ಕೊಳ್ಳದ ನಾಲ್ಕುಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಆಣೆಕಟ್ಟುಗಳು ಆಗಸ್ಟ್‌ನಲ್ಲಿ ಭರ್ತಿಯಾದರೆ, ಜಿಲ್ಲೆಯ ಎಲ್ಲಾ ಕೆರೆ- ಕಟ್ಟೆಗಳು ಭರ್ತಿಯಾಗಿ ಬರದ ಆತಂಕವನ್ನು ದೂರ ವಾಗಿಸಿದವು. ಜುಲೈ ಕೊನೆಯ ವಾರದಲ್ಲಿ ಆರಂಭವಾದ ಮಳೆ ಆಗಸ್ಟ್‌ನಲ್ಲಿ ಬಿರುಸು ಪಡೆದು ಕೊಂಡ ಪರಿಣಾಮ ಕಪಿಲಾ ನದಿ ತುಂಬಿ ಹರಿಯುವ ಮೂಲಕ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾದರೆ, ಸರಗೂರು ತಾಲೂಕಿನ ನುಗು ಸೇರಿದಂತೆ ನಾಲ್ಕು ಜಲಾಶಯಗಳೂ ತುಂಬಿ ರೈತರ ಮೊಗದಲ್ಲಿ ನಗು ತರಿಸಿತು. ಇದರ ಜೊತೆಗೆ ಕೊಡಗಿನಲ್ಲಿ ಭಾರೀ ಮಳೆ ಬಿದ್ದ ಹಿನ್ನೆಲೆ ಕಾವೇರಿ ನದಿ ಮೈದುಂಬಿ ಹರಿಯುವ ಮೂಲಕ ನದಿ ಅಚ್ಚುಕ್ಕಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಲು ಕಾರಣವಾಯಿತು. ಉಳಿದಂತೆ ಲಕ್ಷ್ಮಣ ತೀರ್ಥ ನದಿಯೂ ತುಂಬಿ ಹರಿದು ರೈತರ ಪಾಲಿಗೆ ವರದಾನವಾಗಿದ್ದು ವಿಶೇಷ
ಗಮನ ಸೆಳೆದ ಹಾಗೂ ಫಲಶೃತಿಗೆ ಕಾರಣವಾದ 10 ಉದಯವಾಣಿ ಸುದ್ದಿಗಳು :
ಪತ್ರಿಕೆ ವರದಿ ಆಧರಿಸಿ ಇಒಗೆ ದೂರು :
ಜ.17ರಂದು ಎನ್‌ಎಚ್‌ಬಿ ನಿವಾಸಿಗಳ ಗೋಳುಕೇಳುವವರಿಲ್ಲ ಶೀರ್ಷಿಕೆಯಡಿ ಪ್ರಕಟಿವಾದ ವರದಿ ಹಿನ್ನೆಲೆ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತಾಪಂ ಸಿಒಗೆ ಅರ್ಜಿ ಸಲ್ಲಿಕೆಯಾಯಿತು.
ಸಾರ್ವಜನಿಕ ರಸ್ತೆಗೆ ವಿಮೆ :
ಅರೆಕಾಲಿಕ ಕ್ಯಾಬ್ ಚಾಲಕರೊಬ್ಬರು ಸಾರ್ವಜನಿಕರಸ್ತೆಯೊಂದಕ್ಕೆ ವಿಮೆ ಮಾಡಿಸುವ ಮೂಲಕ ಸಮಾಜದಲ್ಲಿ ಸಾರ್ವಜನಿಕರ ಜವಾಬ್ದಾರಿಏನೆಂಬುದು ಎಂದು ತಿಳಿಸುತ್ತಾ ಇಡೀ ರಾಷ್ಟ್ರಕ್ಕೆಮಾದರಿಯಾಗಿರುವ ಬಗ್ಗೆ ವಿಶೇಷ ವರದಿ.
ಹಾಡಿ ಮಕ್ಕಳಿಗೆ ತಲುಪುತ್ತಿಲ್ಲ ಶಿಕ್ಷಣ :
ಶಾಲಾ ಮತ್ತು ಕಾಲೇಜು ಮಕ್ಕಳಿಗಾಗಿ ಆನ್‌ಲೈನ್ ಶಿಕ್ಷಣ ಆರಂಭವಾಗಿ ತಿಂಗಳಾದರೂಕಾಡಂಚಿನಲ್ಲಿ ವಾಸಿಸುತ್ತಿರುವ ಹಾಡಿ ಮಕ್ಕಳಿಗೆ ಈ ಬಗ್ಗೆ ಕಿಂಚಿತ್ತೂ ಅರಿವಿಲ್ಲದೇ ಶಿಕ್ಷಣದಿಂದವಂಚಿತರಾಗಿರುವ ಬಗ್ಗೆ ವಿಶೇಷ ವರದಿ.
ಭಿಕ್ಷುಕರ ಸೆಸ್ ನೀಡದ ಪಾಲಿಕೆ :
ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರಿಂದ ಸಂಗ್ರಹಿಸಿದ 10 ಕೋಟಿಗೂಹೆಚ್ಚು ನಿರ್ಗತಿಕರ ಸೆಸ್‌ನ್ನು ಪುನರ್ವಸತಿ ಕೇಂದ್ರಕ್ಕೆ ನೀಡದಿರುವ ಬಗ್ಗೆ ವಿಶೇಷ ವರದಿ.
ಗರಿಗೆದರಿದ ದಸರಾ ಸಿದ್ಧತೆ :
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅವರಣದಲ್ಲಿ ಸಿದ್ಧತೆಗಳು ಗರಿಗೆದರಿದ್ದು, ಅರಮನೆಗೆ ಸುಣ್ಣ-ಬಣ್ಣ ಬಳಿಯುವ ಭರದಿಂದ ಸಾಗಿರುವ ಬಗ್ಗೆ ವಿಶೇಷ ವರದಿ.
ರಂಗೇರಿದ ಗ್ರಾಪಂ ಅಖಾಡ :
ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲೆ ಆಕಾಂಕ್ಷಿಗಳ ಕಸರತ್ತು ಕುರಿತು ವಿಶೇಷ ವರದಿ.
ವಿವಿ ಉನ್ನತ ಶಿಕ್ಷಣ ಶುಲ್ಕ ದುಪ್ಪಟ್ಟು :
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆಯಾದ ಉನ್ನತ ಶಿಕ್ಷಣ, ವಿಶ್ವವಿದ್ಯಾಲಯ ಆಡಳಿತಮಂಡಳಿ ನಡೆಗೆ ವಿದ್ಯಾರ್ಥಿಗಳ ಆಕ್ರೋಶ ಸಂಬಂಧ ವಿಶೇಷ ವರದಿ.
ಶಾಲೆ ಇಲ್ಲದ್ದಕ್ಕೆ ಬಾಲ್ಯ ವಿವಾಹ ದ್ವಿಗುಣ :
ಕೋವಿಡ್ ಲಾಕ್‌ಡೌನ್‌ನಿಂದ ಶಾಲೆಗಳು ಮುಚ್ಚಿದ ಪರಿಣಾಮ ಜಿಲ್ಲೆಯಲ್ಲಿ 149 ಬಾಲ್ಯ ವಿವಾಹಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ 131ಮದುವೆಗೆ ತಡೆ ಬಿದ್ದರೆ 18 ಮದುವೆಗಳು ನಡೆದಿರುವ ಬಗ್ಗೆ ವಿಶೇಷ ವರದಿ.
ಡಬಲ್ ಡೆಕ್ಕರ್‌ಗಾಗಿ ಮರಗಳ ಹನನ :
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರಿಗೆ ಡಬಲ್ ಡೆಕ್ಕರ್ ಬಸ್ ಓಡಾಟಕ್ಕಾಗಿರಸ್ತೆ ಬದಿಯಲ್ಲಿದ್ದ ನೂರಾರು ಮರಗಳ ಹನನಕುರಿತು ವಿಶೇಷ ವರದಿ.
ಇತಿಹಾಸ ಪುಟದಲ್ಲಿ ದಾಖಲಾದ ದಸರಾ :
ಪ್ರತಿ ವರ್ಷ ಲಕ್ಷಾಂತರ ಮಂದಿಯ ವೀಕ್ಷಣೆಯೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದ ದಸರಾ ಮಹೋತ್ಸವ 2020ರಲ್ಲಿ ಕೆಲವೇ ಮಂದಿ ವೀಕ್ಷಕರ ಸಮ್ಮುಖದಲ್ಲಿ ನೆರವೇರಿದ ಜಂಬೂ ಸವಾರಿ.
ಟಾಪ್ 10 ಸುದ್ದಿ :
ಫ್ರೀ ಕಾಶ್ಮೀರ ಫಲಕ ಪ್ರದರ್ಶನ :
ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್‌ಎಫ್ಐ, ಎಐಡಿಎಸ್‌ಒ ಸಂಘಟನೆಗಳಿಂದ ನಗರದ ಮಾನಸ ಗಂಗೋತ್ರಿಯಲ್ಲಿ ಜ.8ರಂದು ಪಂಜಿನ ಮೆರವಣಿಗೆ. ಈ ಸಂದರ್ಭ ನಳಿನಿ ಎಂಬಾಕೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲದೇ, ಘಟನೆ ಸಂಬಂಧ ರಾಜ್ಯಪಾಲರು ಕುಲಪತಿಗಳಿಂದ ವರದಿ ಕೇಳಿದ್ದರು.
ಮೈಸೂರಿಗೆ ಒಲಿದ ಪದ್ಮಶ್ರೀ : ಕಳೆದ 50 ವರ್ಷಗಳಿಂದ ಮೈಸೂರು ನಗರದಲ್ಲಿ ಸಂಸ್ಕೃತ ಭಾಷೆಯಿಂದ ಸದ್ದಿಲ್ಲದೇ ಪ್ರಕಟವಾಗುತ್ತಿರುವ ಸುಧರ್ಮ ದಿನಪತ್ರಿಕೆಯ ಸಂಪಾದಕ ಕೆ. ಸಂಪತ್ ಕುಮಾರ್ ಹಾಗೂ ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪದ್ಮಶ್ರೀಪ್ರಶಸ್ತಿ ಸಂದಿತು. ವಿಶ್ವದಲ್ಲೇ ಸಂಸ್ಕೃತ ಭಾಷೆಯಲ್ಲಿ ಪ್ರಕಟವಾಗುವ ಏಕೈಕದಿನಪತ್ರಿಕೆ ಇದಾಗಿದ್ದು, ಅದರಲ್ಲಿಯೂ ಸಾಂಸ್ಕೃತಿಕ ನಗರಿ ಮೈಸೂರಲ್ಲಿಪ್ರಕಟವಾಗುತ್ತಿರುವುದು ವಿಶೇಷ. ಸಂಸ್ಕೃತ ಭಾಷೆ ಹಾಗೂ ಪತ್ರಿಕೋದ್ಯಮ ತಮ್ಮ ಬದ್ಧತೆಯನ್ನಾಗಿಸಿಕೊಂಡಿರುವ ದಂಪತಿಗೆ ರಾಷ್ಟ್ರದ ಮಹೋನ್ನತ ಪ್ರಶಸ್ತಿ ಲಭಿಸಿದೆ.
ಬಹುರೂಪಿ ನಾಟಕೋತ್ಸವ :
ಪ್ರತಿವರ್ಷ ರಂಗಾಯಣದ ವತಿಯಿಂದ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020ಕ್ಕೆ ಹಿರಿಯ ನಟ ಅನಂತ್‌ನಾಗ್ ಚಾಲನೆ ನೀಡಿದರು. ಬಳಿಕ ರಂಗಾಯಣ ಆವರಣದಲ್ಲಿ ಫೆ.14ರಿಂದ19ರವರೆಗೆ ನಾಟಕ, ಸಿನಿಮಾ, ವಿಚಾರ-ಮಂಥನ, ಕಲೆ, ಜಾನಪದ ಸಹಿತ ನಾನಾ ಚಟುವಟಿಕೆಗಳೂ ನಡೆದವು.
ಲಾಕ್‌ಡೌನ್ ಘೋಷಣೆ :
ಕೋವಿಡ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಮಾರ್ಚ್ 14ರಿಂದ ಜಿಲ್ಲಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿತು. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರಗಳು,ಸಿನಿಮಾ ಮಂದಿರ, ಕಲ್ಯಾಣ ಮಂಟಪ, ಮಾರುಕಟ್ಟೆ, ಮಾಲ್‌ಗಳನ್ನುಬಂದ್ ಮಾಡುವ ಮೂಲಕ ಜನದಟ್ಟಣೆ ಸೇರುವ ಸ್ಥಳಗಳಿಗೆ ನಿಷೇಧ ಹೇರಲಾಯಿತು.
ಮೊದಲ ಕೋವಿಡ್ ಪ್ರಕರಣ :
ಜಿಲ್ಲೆಯಲ್ಲಿ ಮಾರ್ಚ್ 21ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಅಂದಾಜು 35 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಇರುವುದು ದೃಢವಾಗಿತ್ತು. ದುಬೈಯಿಂದ ಗೋವಾ ಮಾರ್ಗವಾಗಿ ಮಾ.20ರಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು, ನಂತರ ಅಲ್ಲಿಂದ ಟ್ಯಾಕ್ಸಿ ಮೂಲಕ ಮೈಸೂರಿಗೆ ಬಂದಿದ್ದ ಅವರು ಆರೋಗ್ಯ ಸರಿ ಇಲ್ಲದ ಕಾರಣ ನಗರದ ಕೆ.ಆರ್.ಆಸ್ಪತ್ರೆಗೆ ಸ್ವಯಂ ಪ್ರೇರಣೆಯಿಂದ ಆಗಮಿಸಿ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಸೋಂಕು ಇರುವುದು ದೃಢಪಟ್ಟಿತ್ತು. ಇದಾದ ನಂತರ ನಿಧಾನಗತಿಯಲ್ಲಿ ಸೋಂಕು ಹರಡಲು ಪ್ರಾರಂಭವಾಯಿತು.
ಜ್ಯುಬಿಲಿಯಂಟ್ ಕಾರ್ಖಾನೆ :
ಮಾರ್ಚ್ ಅಂತ್ಯದಲ್ಲಿ ನಂಜನಗೂಡು ತಾಲೂಕಿನ ಜ್ಯುಬಿಲಿಂಟ್ ಕಾರ್ಖಾನೆ ಸೋಂಕಿನ ಮೂಲವಾಗಿ ಮಾರ್ಪಟ್ಟಿದ್ದು ದೊಡ್ಡ ಸಂಚಲನ ಸೃಷ್ಟಿಯಾಗುವ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತು. ಈಕಾರ್ಖಾನೆಗೆ ಸಂಬಂಧಿಸಿದಂತೆ 70 ಜನರಿಗೆ ಸೋಂಕು ತಗುಲಿತ್ತು. ಪರಿಣಾಮ ಇಡೀ ನಂಜನಗೂಡು ನಗರವನ್ನೇ ಸೀಲ್‌ಡೌನ್ ಮಾಡಲಾಗಿತ್ತು.
ಆರೋಗ್ಯಾಧಿಕಾರಿ ಆತ್ಮ ಹತ್ಯೆ :
ಕೆಲಸ ಒತ್ತಡ ಹಾಗೂ ಮಾನಸಿಕ ಖನ್ನತೆಯಿಂದ ನಂಜನಗೂಡು ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆಮಾಡಿಕೊಂಡಿದ್ದು, ಜಿಲ್ಲೆಯ ಕಹಿ ಘಟನೆಯಲ್ಲಿ ಒಂದಾಗಿದೆ. ಘಟನೆಯಿಂದ ನೊಂದ ಜೊತೆಗೆ ಸರ್ಕಾರಿ ವೈದ್ಯರು 4 ದಿನ ಮುಷ್ಕರನಡೆಸಿದ್ದರು. ವೈದ್ಯನ ಸಾವಿನಿಂದ ಜಿಪಂ ಸಿಇಒ ಆಗಿದ್ದ ಪ್ರಶಾಂತ್ ಕುಮಾರ್ ಮಿಶ್ರಾ ಎಂಬ ಪ್ರಾಮಾಣಿಕ ಅಧಿಕಾರಿಯ ತಲೆ ದಂಡವಾಗಿದ್ದಲ್ಲದೇ, ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಯಿತು.
ಅತಿ ಸರಳಾತಿ 410ನೇ ದಸರಾ :
ಪ್ರತಿವರ್ಷ ಲಕ್ಷಾಂತರ ಮಂದಿಯ ವೀಕ್ಷಣೆಯೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದ ಮೈಸೂರು ದಸರಾ ಮಹೋತ್ಸವ, 2020ರ ದಸರಾ ಉತ್ಸವ ಕೋವಿಡ್ ಹಿನ್ನೆಲೆ ಅತಿ ಸರಳಾತಿ ಸರಳವಾಗಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿ ನಡೆಯಿತು. 300 ಮಂದಿ ಜನರೊಂದಿಗೆ ಅರಮನೆ ಆವರಣದಲ್ಲಿ ಅಭಿಮನ್ಯು, ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳ ತಂಡ ಯಶಸ್ವಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟವು
ಪಂಚಲಿಂಗ ದರ್ಶನ :
ಏಳು ವರ್ಷಗಳ ಬಳಿಕ ತಿ. ನರಸೀಪುರ ತಾಲೂಕಿನ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವದ ಪ್ರಮುಖ ಕಾರ್ಯಕ್ರಮ ಪಂಚಲಿಂಗ ದರ್ಶನ ಪೂಜಾ ಮಹೋತ್ಸವ ಡಿ.14 ರಂದು ಸೋಮವಾರ ಮುಂಜಾನೆ 4.30ಕ್ಕೆ ನೆರವೇರಿತು.
ವರ್ಷದ ಪ್ರಮುಖ ದುರಂತಗಳಿವು :
ತೆಪ್ಪ ಮಗುಚಿ ನವ ಜೋಡಿ ಸಾವು :
ಮದುವೆ ಹೊಸ್ತಿಲಿನಲ್ಲಿದ್ದ ನವ ಜೋಡಿ ತೆಪ್ಪದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಅಚಾನಕ್ಕಾಗಿ ತೆಪ್ಪ ಮಗುಚಿ ದಾರುಣ ಅಂತ್ಯ ಕಂಡಿತ್ತು. ನವೆಂಬರ್ ಕಡೆವಾರದಲ್ಲಿ ನಗರದ ಕ್ಯಾತಮಾರನಹಳ್ಳಿಯ ಚಂದ್ರು (30), ಶಶಿಕಲಾ (20) ಜೋಡಿತಿ.ನರಸೀಪುರ ತಾಲೂಕಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ಸಂದರ್ಭದಲ್ಲಿ ತೆಪ್ಪ ಮಗುಚಿ ಮದುವೆಗೂ ಮುನ್ನ ನವ ಜೋಡಿ ಮೃತಪಟ್ಟರು.
ಅಪಘಾತಕ್ಕೆ ಒಂದೇ ಕುಟುಂಬದ ಮೂವರ ಸಾವು :
ಅಪ್ರಾಪ್ತನೋರ್ವ ಬೇಕಾಬಿಟ್ಟಿ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದರು. ಡಿಸೆಂಬರ್‌ನಲ್ಲಿ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ರಮೇಶ್ (41), ಪತ್ನಿ ಉಷಾ (34), ಪುತ್ರಿ ಮೋನಿಷಾ (5) ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪುತ್ರ ಸಿದ್ಧಾರ್ಥ್ (3) ಘಟನೆಯಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಲಿಂಗಪುರದ ಕಡೆಯಿಂದ ಮೈಸೂರಿಗೆ ರಮೇಶ್ ಮತ್ತು ಕುಟುಂಬದ 4 ಜನ ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ಮೈಸೂರಿನಿಂದ ಶ್ರೀರಂಗಪಟ್ಟಣದ ಕಡೆವೇಗವಾಗಿ ಬಂದ ಕಾರು ರಸ್ತೆ ವಿಭಜಕವನ್ನು ದಾಟಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದರು.
ಮುಂದುವರಿದ ಕಾಡಾನೆ, ಹುಲಿ ದಾಳಿ :
ಮೈಸೂರು ಭಾಗದಲ್ಲಿ ಮಾನವ ಹಾಗೂ ವನ್ಯಜೀವಗಳ ನಡುವೆ ಸಂಘರ್ಷ ಸಾಮಾನ್ಯವಾಗಿದ್ದು, ಈ ವರ್ಷ ಕೂಡ ವನ್ಯಜೀವಿಗಳು ಹಲವರನ್ನು ಬಲಿತೆಗೆದುಕೊಂಡವು. ಕಾಡಾನೆ ಹಾಗೂ ಹುಲಿ ದಾಳಿಗೆ ಕಾಡಿಂಚಿನ ಸಾಕಷ್ಟು ಮಂದಿ
ಮೃತಪಟ್ಟರು. ಜೊತೆಗೆ ಕಾಡಾನೆಗಳ ಹಿಂಡುಜಮೀನುಗಳಿಗೆ ಆಗಾಗನುಗ್ಗಿದ್ದರಿಂದ ಬೆಳೆಗಳುಧ್ವಂಸವಾಗಿ ಅಪಾಯ ಹಾನಿ ಕೂಡ ಸಂಭವಿಸಿ, ರೈತರು ನಷ್ಟಕ್ಕೆ ಗುರಿಯಾದರು.
2020ರಲ್ಲಿ ಎದುರಾದ ಕೋವಿಡ್ ಅಳಿದುಜನರು ಎಂದಿನಂತೆ ಸಹಜಬದುಕಿಗೆ ಮರಳಲಿ. ತಾಯಿ ಚಾಮುಂಡೇಶ್ವರಿ ಜನತೆಗೆ ಸುಃಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ಕರುಣಿಸಲಿ. – ಮಹದೇವಸ್ವಾಮಿ, ಅಧ್ಯಕ್ಷರು ಮೃಗಾಲಯ ಪ್ರಾಧಿಕಾರ.
ಕೋವಿಡ್ ಆತಂಕದ ನಡುವೆಯೂ ಕೃಷಿ ಕ್ಷೇತ್ರಅತ್ಯುತ್ತಮ ಸಾಧನೆ ಮಾಡಿದೆ. ಮುಂದೆಯೂ ಕೃಷಿ, ಆರ್ಥಿಕತೆ, ಔದ್ಯೋಗಿಕ ಕ್ಷೇತ್ರ ಮತ್ತಷ್ಟುಬೆಳೆಯಲಿ. ಸರ್ಕಾರ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತುಜನರ ನಿರೀಕ್ಷೆಯನ್ನು ಮೀರಿ ಉತ್ತಮ ಆಡಳಿತ ನೀಡಿದೆ. ಈಗಿರುವ ಆತಂಕ, ಕಷ್ಟ-ಕಾರ್ಪಣ್ಯಗಳನ್ನು ಹೊಸ ವರ್ಷ ದೂರ ಮಾಡಲಿ. – ಎಚ್.ವಿ.ರಾಜೀವ್, ಅಧ್ಯಕ್ಷರು ಮುಡಾ
ಹೊಸ ವರ್ಷ ಕತ್ತಲೆಯನ್ನು ಕೊನೆಗಾಣಿಸುವ,ಹೊಸ ಬೆಳಕನ್ನು ಹೊರಹೊಮ್ಮಿಸುವಂತಹ ದಿನಗಳನ್ನುಹೊತ್ತು ತರಲಿ. ನಾಡಿನ ಜನತೆಗೆ ಶುಭವಾಗಲಿ. – ರಘು ಕೌಟಿಲ್ಯ,ಅಧ್ಯಕ್ಷರು ಅರಸು ಹಿಂದುಳಿದ ವರ್ಗಗಳ ನಿಗಮ.
ದೇಶಕ್ಕೆ ಎದುರಾಗಿರುವ ಕೋವಿಡ್ ಸಂಕಷ್ಟ ದೂರವಾಗಿಎಲ್ಲರೂ ನೆಮ್ಮದಿಯಿಂದ ಬದುಕುನಡೆಸುವಂತಾಗಲಿ. ಜನತೆಗೆ ಸುಃಖ, ಶಾಂತಿ, ನೆಮ್ಮದಿಯನ್ನುಹೊಸ ವರ್ಷ ಹೊತ್ತು ತರಲಿ. – ಎ. ಹೇಮಂತ್‌ಕುಮಾರ್‌ಗೌಡ, ಅಧ್ಯಕ್ಷರು ವಸ್ತುಪ್ರದರ್ಶನ ಪ್ರಾಧಿಕಾರ
ಕೋವಿಡ್ ದಿಂದ ದೇಶದ ಜನ ತತ್ತರಿಸಿದ್ದು, ಹೊಸ ವರ್ಷ ಎಲ್ಲಾಸಂಕಷ್ಟವನ್ನು ದೂರ ಮಾಡಲಿ.ತಾಯಿ ಚಾಮುಂಡಿ ಅರಾಜಕತೆ ದೂರ ಮಾಡಿ, ದೇಶವನ್ನು ಸುಭೀಕ್ಷವಾಗಿಡಲಿ. – ಬಿ.ಜೆ. ವಿಜಯ್‌ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರು
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.