ಉತ್ತಮ ರೀತಿಯಲ್ಲಿ ಎಲ್ಲರೂ ಬಾಳ್ವೆ ಮಾಡಬೇಕು: ಮಹಾರಾಜರು
Team Udayavani, May 28, 2017, 12:24 PM IST
ಬನ್ನೂರು: ಸಮಾಜಕ್ಕೆ ಉತ್ತಮವಾದ ಕೆಲಸ ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಜೈನ ಗುರುಗಳಾದ ಶ್ರೀ ಹನ್ಸ್‌ರಾಜ್ ಮಹಾರಾಜರು ಹೇಳಿದರು. ಕಾಲ್ನಡಿಗೆ ಮೂಲಕ ಕಿರುಗಾವಲು ಮಾರ್ಗವಾಗಿ ಆಗಮಿಸಿದ ಇವರನ್ನು ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ನಡವಳಿಕೆಯನ್ನು ನಾವು ರೂಢಿಸಿಕೊಳ್ಳಬೇಕು. ಗುರುಗಳಿಗೆ ಉತ್ತಮ ರೀತಿಯಲ್ಲಿ ಗೌರವ ಸಲ್ಲಿಸಬೇಕು. ಇಂದು ಆಧುನಿಕ ಕಾಲದಲ್ಲಿ ಮೊಬೈಲ್ ಆಮಿಷಕ್ಕೆ ಒಳಗಾಗಿ ಮಕ್ಕಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು, ಪೋಷಕರು ಎಚ್ಚರ ವಹಿಸಿ ಮಕ್ಕಳನ್ನು ಉತ್ತಮ ಹಾದಿಗೆ ತರಬೇಕು ಎಂದು ಹೇಳಿದರು.
ಸಮಾಜಸೇವಕ ಮಹೇಂದ್ರ ಸಿಂಗ್‌ಕಾಳಪ್ಪ ಮಾತನಾಡಿ, ಗುರುಗಳ ನೀತಿ ನಿಯಮದಂತೆ ಪ್ರತಿಯೊಬ್ಬರು ತಮ್ಮ ಕೆಲಸ ನಿರ್ವಹಿಸುವ ಮೂಲಕ ಮಹಾ ಮಹಿಮರ ವಿಚಾರಧಾರೆ ತಿಳಿದು, ನಮ್ಮ ಜೀವನ ನಡೆಸಬೇಕು. ಇಂದು ಹಲವಾರು ವಿವಿಧ ಪರಿಕಲ್ಪನೆಗಳು ಬಂದಿದ್ದರು,
ಕಾಣದ ಕೈನ ಕೆಲಸ ಮಾತ್ರ ಮಾನವನ ಊಹೆಗೂ ನಿಲುಕದಂತೆ ಕೆಲಸ ನಿರ್ವಹಿಸುತ್ತಿದೆ. ಗುರುಗಳು ನೀಡಿದ ಮಾರ್ಗದರ್ಶನದ ಆಶ್ರಯದಲ್ಲಿ ಎಲ್ಲರೂ ಕೆಲಸ ನಿರ್ವಹಿಸೋಣ ಎಂದು ತಿಳಿಸಿದರು. ದಿಲೀಪ್‌ಕುಮಾರ್, ರಾಜೇಶ್ ಸಿಂಗ್, ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.