ಚನ್ನಕೇಶವ ದೇಗುಲ ಇಂದು ಉದ್ಘಾಟನೆ
Team Udayavani, Nov 8, 2019, 4:49 PM IST
ಹುಣಸೂರು: ಹೊಯ್ಸಳರ ಕಾಲದ ಹುಣಸೂರು ತಾಲೂಕಿನ ಧರ್ಮಾಪುರದ ಚನ್ನಕೇಶವ ಸ್ವಾಮಿ ದೇವಾಲಯವನ್ನು ಕೋಟಿ ರೂ. ವೆಚ್ಚದಡಿ ಜೀರ್ಣೋದ್ಧಾರಗೊಳಿಸಲಾಗಿದ್ದು, ಶುಕ್ರವಾರ ಉದ್ಘಾಟನೆಯಾಗಲಿದೆ.
ಈ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಗಳು ನ. 8, 9 ಮತ್ತು 10ರಂದು ಮೂರು ದಿನಗಳ ಕಾಲ ಜರುಗಲಿವೆ. ವಿವಿಧ ಪೂಜಾ ಕೈಂಕರ್ಯಗಳು ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪ್ರಕಾಲ ಮಠದ ಅಭಿನವ ವಾಗೀವ್ ಸ್ವಾಮಿ, ಬೆಂಗಳೂರಿನ ವೈಷ್ಣವ ಮಠದ ತ್ರಿದಂಡಿ ರಾಮಾನುಜಂ ಸ್ವಾಮಿ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ನೆರವೇರಲಿವೆ. ಜೀರ್ಣೋದ್ಧಾರದ ಅಂಗವಾಗಿ ಗೋಪುರ ಕಳಶ ಪ್ರತಿಷ್ಠಾಪನೆ, ಗರುಡಗಂಭ ಸ್ಥಾಪನೆ, ಶ್ರೀ ರಾಮ, ಸೀತಾ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿ ಮತ್ತು ಲಕ್ಷ್ಮೀ ದೇವಿ ಅಮ್ಮನವರ ಶಿಲಾ ವಿಗ್ರಹಗಳ ಪ್ರತಿಷ್ಠಾಪಿಸಲಾಗುತ್ತಿದೆ.
ಶಿಥಿಲಗೊಂಡಿದ್ದ ದೇವಾಲಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾಗಿದ್ದ ಮಂಜುನಾಥ್ ಅವಧಿಯಲ್ಲಿ ದೇವಾಲಯ ಜೀರ್ಣೋದ್ಧಾರಕ್ಕಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಿಡುಗಡೆಗೊಳಿಸಿದ್ದ ಒಂದು ಕೋಟಿ ರೂ. ವಿಶೇಷ ಅನುದಾನದಡಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ಎಲ್ಲಾ ಕೋಮಿನವರು ಸೇರಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯ ವನ್ನು ಅದ್ಧೂªರಿಯಿಂದ ನಡೆಸುತ್ತಿದ್ದು, ಸಾಕಷ್ಟು ಇತಿಹಾಸ ಹೊಂದಿರುವ ಈ ದೇವಾಲಯವು ಪ್ರವಾಸೋದ್ಯಮ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ,
ಕಾರ್ಯಕ್ರಮ ವಿವರ:
ಶುಕ್ರವಾರ: ಮುಂಜಾನೆ ಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1.30ರಿಂದ ಶ್ರೀಗಳ ಪಾದಪೂಜೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಸನ್ಮಾನ. ಉಸ್ತುವಾರಿ ಸಚಿವ ಸೋಮಣ್ಣ ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ ಮಾಜಿ ಸಚಿವ ಎಚ್.ವಿಶ್ವನಾಥ್, ವಿಶೇಷ ಆಹ್ವಾನಿತರಾಗಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಅನಿಲ್ ಚಿಕ್ಕಮಾದು, ಸಂಜೆ 5 ರಿಂದ ಚಲನಚಿತ್ರನಟ ಕುಮಾರ್ ಅರಸೇಗೌಡ ತಂಡ ದಿಂದ ಹಾಸ್ಯಕಾರ್ಯಕ್ರಮ. ನಂತರ ಹುಣಸೂರಿನ ಕಸ್ತೂರಿ ತಿಲಕ ಭಜನಾ ಮಂಡಳಿಯಿಂದ ಭಜನೆ.
ಶನಿವಾರ: ಬೆಳಗ್ಗೆ 9ಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಚ್.ಪಿ. ಮಂಜುನಾಥ್, ಮಹದೇವಪ್ಪ, ಸಿ.ಎಚ್. ವಿಜಯಶಂಕರ್ ಭಾಗವಹಿಸುವರು. ಧಾರ್ಮಿಕ ಕಾರ್ಯಕ್ರಮ ಮೇಲುಕೋಟೆಯ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್, ಮೈಸೂರಿನ ಸಪ್ತಋಷಿ ಗುರುಕುಲ ಆಶ್ರಮದ ರಾಮಾನುಜಸ್ವಾಮಿ, ನಿಟ್ಟೂರು ಮಠದ ರೇಣುಕಾ
ನಂದಸ್ವಾಮಿ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಗಾವಡಗೆರೆಯ ನಟರಾಜಸ್ವಾಮೀಜಿ ಗಳು ಭಾಗವಹಿಸುವರು. ಸಂಜೆ 4 ರಿಂದ ಕಲ್ಕುಣಿಕೆ ಶ್ರೀನಿವಾಸರ ಆರ್ಕೆಸ್ಟ್ರಾ ತಂಡದಿಂದ ಭಕ್ತಿಗೀತೆ, ರಸಮಂಜರಿ. ರಾತ್ರಿ ಧರ್ಮಾಪುರ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಭಾನುವಾರ: ಬೆಳಗ್ಗೆ 9 ರಿಂದ 12ರ ವರೆಗೆ ಕಲ್ಯಾಣೋತ್ಸವ, ಪ್ರಸಾದ ವಿನಿಯೋಗ, ಧಾರ್ಮಿಕ ಕಾರ್ಯಕ್ರಮ ಬಾಷ್ಯಂ ಸ್ವಾಮೀಜಿ, ಸೋಮೇಶ್ವರ ನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪಸಿಂಹ, ಶಾಸಕ ಎ.ರಾಮದಾಸ್, ಜಿಪಂ ಉಪಾಧ್ಯಕ್ಷೆ ಗೌರಮ್ಮ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ದೇವಾಲಯದ ಕುರಿತು ಇತಿಹಾಸ ತಜ್ಞ ಡಾ.ಸೆಲ್ವಪಿಳ್ಳೇ ಐಯಂಗಾರ್‌ರಿಂದ ಪ್ರವಚನ, 3ಕ್ಕೆ ಸಮಾರೋಪ ಸಮಾರಂಭ, ಸಂಜೆ 4.30ರಿಂದ ಜೀ ಕನ್ನಡ ವಾಹಿನಿಯ ಸರಿಗಮಪ ತಂಡದಿಂದ ರಸಮಂಜರಿ ಕಾರ್ಯಕ್ರಮ.
-ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.