ಪ್ರಪ್ರಥಮ ಮಹಿಳಾ ಕೋವಿಡ್ ಕೇರ್ ಉದ್ಘಾಟನೆ
Team Udayavani, Jun 2, 2021, 5:32 PM IST
ಮೈಸೂರು: ಗೋಕುಲಂ 2ನೇ ಹಂತದಲ್ಲಿರುವಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್‌ನಲ್ಲಿಮಹಿಳೆಯರಿಗೆ ವಿಶೇಷ ಕೋವಿಡ್ ಸೆಂಟರನ್ನುಮಂಗಳವಾರ ಸಂಜೆ ಉದ್ಘಾಟಿಸಲಾಯಿತು.ಸ್ಥಳೀಯ ಶಾಸಕ ಎಲ್.ನಾಗೇಂದ್ರ, ಪಾಲಿಕೆಸದಸ್ಯೆ ಭಾಗ್ಯ ಮಾದೇಶ್, ವಿಧಾನ ಪರಿಷತ್ ಮಾಜಿಸದಸ್ಯ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ ಕೋವಿಡ್‌ಕೇರ್‌ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ನಗರದಲ್ಲಿವಿಶೇಷವಾಗಿ ಮಹಿಳೆಯರಿಗೆ ಆರಂಭಿಸಿದಮೊದಲ ಕೋವಿಡ್ ಕೇರ್ ಸೆಂಟರ್ ಇದಾಗಿದ್ದು,ಇಲ್ಲಿ 64 ಹಾಸಿಗೆಗಳ ಸೌಲಭ್ಯವಿದೆ. ವಿವಿ ಪುರಂಹೆರಿಗೆ ಆಸ್ಪತ್ರೆಯು ಈ ಕೇಂದ್ರದ ಉಸ್ತುವಾರಿಮತ್ತು ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಆಶಾಕಿರಣ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸಹ ಇಲ್ಲಿ ಸೇವೆ ಸಲ್ಲಿಸುವರು ಎಂದರು.
ಮೈಸೂರು ಇನ್ನೂ 3 ಕೋವಿಡ್ ಕೇರ್ ತೆರೆಯಲಾಗುವುದು. ಚಾಮರಾಜ ಕ್ಷೇತ್ರದ ಸರ್ಕಾರಿಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ50ಹಾಸಿಗೆಗಳ ಸಿಸಿಸಿ(ಕೋವಿಡ್‌ಕೇರ್ ಸೆಂಟರ್),ಎನ್.ಆರ್.ಕ್ಷೇತ್ರದ ಫರೂಕಿಯಫಾರ್ಮಸಿ ಕಾಲೇಜಿನಲ್ಲಿ 200 ಹಾಸಿಗೆಗಳ ಸಿಸಿಸಿಮತ್ತು ಕೆ.ಆರ್.ಕ್ಷೇತ್ರದ ಆರ್‌ಎಂಸಿ ಎದುರುಇರುವ ಮೆಟ್ರಿಕ್ ನಂತರದ ಬಿಸಿಎಂ ಮಹಿಳಾವಿದ್ಯಾರ್ಥಿ ನಿಲಯದಲ್ಲಿ 300 ಹಾಸಿಗೆಗಳ ಸಿಸಿಸಿಮಾಡಲಾಗುತ್ತಿದೆ ಎಂದರು.
ಮೈಸೂರಿನ ಜನತೆಗಾಗಿ ಈ 3 ಸಿಸಿಸಿಗಳನ್ನುಮಾಡಲಾಗಿದೆ. ಎಲ್ಲಾ ಸಿಸಿಸಿಗಳಲ್ಲೂ ಉಚಿತ ಸೇವೆದೊರೆಯಲಿದೆ. ಜಿÇÉೆಯ ಗ್ರಾಮೀಣ ಪ್ರದೇಶದಲ್ಲಿಈ ವರೆಗೆ 19 ಸಿಸಿಸಿಗಳನ್ನು ತೆರೆಯಲಾಗಿದೆ. ಈಎÇÉಾ ಸಿಸಿಸಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಇದ್ದಾರೆ. 1700 ಜನ ಈ ಸಿಸಿಸಿಗಳಲ್ಲಿ ಇದ್ದಾರೆ.ಮೈಸೂರು ನಗರದಲ್ಲಿ8535ಮತ್ತು ಗ್ರಾಮೀಣಪ್ರದೇಶದಲ್ಲಿ 6550 ಸಕ್ರಿಯ ಪ್ರಕರಣಗಳು ಇದ್ದು,ಮೈಸೂರು ನಗರದಲ್ಲಿ ವಿಶೇಷವಾಗಿ 3 ಸಿಸಿಸಿಮತ್ತು 1 ಮಹಿಳಾ ಸಿಸಿಸಿ ಆರಂಭಿಸಲಾಗಿದೆ.ಇದರಿಂದ ವಿವಿಧ ಕಾರಣಕ್ಕಾಗಿ ಮನೆಯಲ್ಲಿಪ್ರತ್ಯೇಕವಾಗಿಇರಲು ಸಾಧ್ಯವಾಗದವರಿಗೆ ತುಂಬಾಅನುಕೂಲವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.