ಅನೈತಿಕ ಸಂಬಂಧ: ಮೂವರ ಮೇಲೆ ಮಚ್ಚಿನಿಂದ ಹಲ್ಲೆ
Team Udayavani, Jan 31, 2022, 12:20 PM IST
ಎಚ್.ಡಿ.ಕೋಟೆ: ಅನೈತಿಕ ಸಂಬಂಧದ ಆರೋ ಪದ ಹಿನ್ನೆಲೆ ಮಹಿಳೆಯ ಕಡೆಯವರು ಹಾಡ ಹಗಲೇ ರಸ್ತೆ ಮಾರ್ಗವಾಗಿ ಬೈಕ್ ನಲ್ಲಿ ಆಗಮಿಸು ತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಮಚ್ಚಿ ನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಮಾದಾಪುರ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ಬೊಂಪನಹಳ್ಳಿ ನಿವಾಸಿಗಳಾದ ಒಂದೇ ಕುಟುಂ ಬದ ಶಿವಪ್ಪ (45), ಶರತ್ (20), ಜ್ಯೋತಿ (40) ಹಲ್ಲೆಗೊಳಗಾದವರು. ಇವರ ಮೇಲೆ ಅದೇ ಗ್ರಾಮದ ಲೋಹಿತ್ ಕುಮಾರ್, ಪರಶಿವ ಮೂರ್ತಿ ಸಹೋದರರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆಂದು ಗಾಯಾಳುಗಳು ಹೇಳಿಕೆ ನೀಡಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗಳಾಗಿರುವ ಶಿವಪ್ಪ ಮತ್ತು ಶರತ್ ಗೆ ಎಚ್.ಡಿ.ಕೋಟೆ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನುಳಿ ದಂತೆ ಜ್ಯೋತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಏನಿದು ಘಟನೆ?: ಶರತ್ ಅದೇ ಗ್ರಾಮದ ವಿವಾ ಹಿತ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಮಾಹಿತಿ ತಿಳಿದು ಬಂದಿದ್ದು, ಈ ಕುರಿತು ಹಲವಾರು ಬಾರಿ ಶರತ್‌ಗೆ ಎಚ್ಚರಿಕೆ ನೀಡಿದರೂ ಆತ ತನ್ನ ಚಾಳಿ ಮುಂದುವರಿಸಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಎಚ್ .ಡಿ.ಕೋಟೆ ಠಾಣೆಗೆ ದೂರು ನೀಡಿದಾಗ ಗ್ರಾಮಸ್ಥರು ನ್ಯಾಯ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ಭರವಸೆ ನೀಡಿ ದೂರು ದಾಖಲಿಸದಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಭಾನು ವಾರ ನಡೆಯಬೇಕಿದ್ದ ಗ್ರಾಮದ ಪಂಚಾಯ್ತಿ ಕಾರ ಣಾಂತರದಿಂದ ಮುಂದೂಡಲಾಗಿತ್ತು. ಶಿವಪ್ಪ ಅವರ ಕಡೆಯವರು ಮೃತಪಟ್ಟ ಸುದ್ದಿ ತಿಳಿದು ಸಾವಿನ ಮನೆಯತ್ತ ಶಿವಪ್ಪ, ಶರತ್ ಮತ್ತುಜ್ಯೋತಿ ಒಂದೇ ಬೈಕ್‌ನಲ್ಲಿ ಗ್ರಾಮದಿಂದ ಹೊರಟಿದ್ದರು. ಮಾದಾ ಪುರ ಬಳಿ ರಸ್ತೆ ಅಡ್ಡಗಟ್ಟಿದ ಲೋಹಿತ್, ಪರಶಿವಮೂರ್ತಿ ಏಕಾಏಕಿ ಮಚ್ಚಿ ನಿಂದ ಹಲ್ಲೆ ನಡೆಸಿ ದರೆಂದು ಶರತ್ ತಿಳಿಸಿದ್ದಾರೆ.
ಬಿಡಿಸಲು ಮಧ್ಯ ಪ್ರವೇಶಿಸಿದ ಶಿವಪ್ಪ ಅವರ ತಲೆ ಮತ್ತು ಕುತ್ತಿಗೆಗೂ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಆ ಮಾರ್ಗವಾಗಿಯೇ ಜೊಂಪನಳ್ಳಿ ಗ್ರಾಮ ಸ್ಥರು ಮಾದಾಪುರ ಕಡೆಯಿಂದ ಆಗಮಿಸುತ್ತಿ ದ್ದಾಗ ಘಟನೆ ಕಂಡು ತಾತ್ಕಾಲಿಕವಾಗಿ ಶಮನಗೊಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.