ಮರ್ಮಾಂಗಕ್ಕೆ ಹಾನಿ ಮಾಡಿ ಪತಿಯನ್ನು ಹತ್ಯೆಗೈದಿದ್ದ ಪತ್ನಿ ಸೆರೆ
Team Udayavani, Jul 20, 2021, 12:38 PM IST
ಮೈಸೂರು: ಮಹಿಳೆಯೊಬ್ಬಳು ಪ್ರಿಯಕರ ನೊಂದಿಗೆ ಸೇರಿ ತನ್ನ ಗಂಡನನ್ನೇ ಹತ್ಯೆ ಮಾಡಿರುವಪ್ರಕರಣವನ್ನು ಬನ್ನೂರು ಠಾಣೆ ಪೊಲೀಸರುಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ನಿವಾಸಿ ಎಚ್.ಟಿ. ವೆಂಕಟರಾಜು (50) ಹೆಂಡತಿಯಿಂದ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಉಮಾ (29) ಹಾಗೂ ಅವಿನಾಶ್‌ನನ್ನು (26) ಬಂಧಿಸಲಾಗಿದೆ ಎಂದರು. ಕಳೆದ 9 ತಿಂಗಳ ಹಿಂದೆ ಪ್ರಿಯಕರನೊಂದಿಗೆ ಸೇರಿ ಪತಿ ಮರ್ಮಾಂಗಕ್ಕೆಹಾನಿಮಾಡಿಹತ್ಯೆಗೈದಪತ್ನಿಯನ್ನು ಬಂಧಿಸಲಾಗಿದೆ.
ಘಟನೆ ವಿವರ: ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ನಿವಾಸಿ ಎಚ್.ಟಿ. ವೆಂಕಟರಾಜು 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ತಾಲೂಕು ಬಳ್ಳೇಕೆರೆಗ್ರಾಮದ ಉಮಾ ಎಂಬಾಕೆಯನ್ನು ವಿವಾಹ ವಾಗಿದ್ದರು. ಗಂಡ – ಹೆಂಡತಿಯ ವಯಸ್ಸಿನ ಅಂತರ 20 ವರ್ಷವಿದ್ದು, ಆಗಾಗ ಜಗಳವಾಗುತ್ತಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, 4 ವರ್ಷಗಳಿಂದ ಗಂಡ-ಹೆಂಡತಿ ದೂರವಿದ್ದರು.
ಈ ನಡುವೆ ತಾಯಿ ಮನೆಯಲ್ಲಿದ್ದ ಉಮಾ ಪಕ್ಕದ ಮನೆಯ ಯುವಕನೊಂದಿಗೆ ಸಂಬಂಧ ಇರಿಸಿಕೊಂಡಿದ್ದು,2020ರ ಅಕ್ಟೋಬರ್ 9 ರಂದು ಉಮಾ ತಿ.ನರಸೀಪುರ ತಾಲೂಕಿನ ಬನ್ನೂರು ಬಳಿಯ ಹುಣಸಗಳ್ಳಿಯಲ್ಲಿರುವ ಅಜ್ಜಿ ಮನೆಗೆ ಹೋಗಿ, ತನ್ನ ಪತಿಯಾದ ವೆಂಕಟರಾಜು ಅವರನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರಿಯಕರನೊಂದಿಗೆ ಸೇರಿ ಹಾಲಿನಲ್ಲಿ ನಿದ್ದೆ ಮಾತ್ರೆ ಸೇರಿಸಿ, ಆತನ ಮರ್ಮಾಂಗಕ್ಕೆ ಹಾನಿ ಮಾಡಿ ಹತ್ಯೆಗೈದಿದ್ದಾರೆ.
ಬಳಿಕ ವೆಂಕಟರಾಜು ಸಹೋದರ ಎಚ್.ಟಿ. ರವೀಂದ್ರ ಅವರಿಗೆ ಆರೋಪಿ ಉಮಾ ಸಹೋದರ ಕರೆ ಮಾಡಿ, ತಲೆ ಸುತ್ತಿನಿಂದ ಅಸ್ವಸ್ಥರಾಗಿದ್ದ ವೆಂಕಟರಾಜು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಮೃತ ವ್ಯಕ್ತಿಯ ಸಹೋದರ ರವೀಂದ್ರ 2020ರಅಕ್ಟೋಬರ್ 10 ರಂದು ಬನ್ನೂರು ಪೊಲೀಸ್‌ಠಾಣೆಗೆ ತೆರಳಿ ತನ್ನ ಅಣ್ಣನ ಸಾವಿನ ಬಗ್ಗೆಅನುಮಾನವ್ಯಕ್ತಪಡಿಸಿ,ಸೂಕ್ತತನಿಖೆನಡೆಸುವಂತೆ ದೂರು ನೀಡಿದ್ದರು.
ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಶವಪರೀಕ್ಷೆ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ತನಿಖೆನಡೆಸಿದಾಗ ಕೊಲೆ ಎಂಬುದು ದೃಢಪಟ್ಟಿದ್ದು,ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಉಮಾಮತ್ತು ಆಕೆಯ ಪ್ರಿಯಕರ ಅವಿನಾಶ್‌ನನ್ನು ಬಂಧಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಬನ್ನೂರು ಠಾಣೆ ಇನ್ಸ್‌ಪೆಕ್ಟರ್ ಚಿಕ್ಕರಾಜ ಶೆಟ್ಟಿ, ಸಬ್ ಇನ್ಸ್‌ಪೆಕ್ಟರ್ ಕುಸುಮಾ ಮತ್ತು ಸಿಬ್ಬಂದಿ ಇದ್ದರು ಎಂದುಪ್ರಕರಣ ಬಗ್ಗೆ ಎಸ್‌ಪಿ ಚೇತನ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿಹೆಚ್ಚುವರಿಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್, ಡಿಎಸ್‌ಪಿ ವಿ. ಗೋವಿಂದ ರಾಜು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.