ಹುಲಿ ದಾಳಿ: ವ್ಯಕ್ತಿ ಸಾವು
Team Udayavani, Sep 8, 2021, 9:52 PM IST
ಹುಣಸೂರು:ಕಾಡಿನಲ್ಲಿ ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಹುಲಿಯೊಂದು ದಾಳಿ ನಡೆಸಿ ವ್ಯಕ್ತಿಯೊಬನನ್ನು ಕೊಂದಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ಅರಣ್ಯ ವಲಯದಲ್ಲಿ ನಡೆದಿದೆ
ಹುಣಸೂರು ತಾಲ್ಲೂಕಿನ ಅಯ್ಯನಕೆರೆ ಹಾಡಿಯ ಗಣೇಶ್(24) ಹುಲಿದಾಳಿಗೆ ಸಿಲುಕಿದ ಮೃತ ದುರ್ದೈವಿ. ಈತ ಅದೇ ಹಾಡಿಯ ಕರಿಯ ಮತ್ತು ಲಕ್ಷ್ಮಿ ದಂಪತಿಗಳ ಒಂಬತ್ತು ಜನ ಮಕ್ಕಳ ಪೈಕಿ ಕಿರಿಯ ಪುತ್ರ. ಈತ ಬುಧವಾರ ಮುಂಜಾನೆ ಅರಣ್ಯದಂಚಿಗೆ ಬಹಿರ್ದೆಸೆಗೆ ಹೋದಂತ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಆತನನ್ನು ಬಲಿ ಪಡೆದಿದೆ ಎನ್ನಲಾಗಿದೆ. ಎಂದಿನಂತೆ ಆತ ಇಂದು ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಬಹಿರ್ದೆಶೆಗೆ ತೆರಳಿದ್ದು, ಮಧ್ಯಹ್ನ 12 ಗಂಟೆಯಾದರೂ ಹಿಂದಿರುಗದ ಕಾರಣ ಗಾಬರಿಗೊಂಡ ಆತನ ಕುಟುಂಬಸ್ಥರು ಆತನನ್ನು ಹುಡುಕಿ ಅರಣ್ಯಕ್ಕೆ ತೆರಳಿದ್ದಾರೆ. ಈ ವೇಳೆ ಆತ ಬಹಿರ್ದೆಸೆಗೆ ತೆರಳಿದ್ದ ಸ್ಥಳದಿಂದ ಸುಮಾರು 200ಮೀ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತರಳಿದ ಹಾಡಿಯ ಜನರು ಹತ್ತಿರ ಹೋಗಿ ನೋಡಿ ಬಳಿಕ ಇದು ಹುಲಿ ದಾಳಿ ಮಾಡಿ ಕೊಂದಿರುವುದು ಎಂದು ಖಚಿತಪಡಿಸಿಕೊಂಡು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಹುಣಸೂರು ಎಸಿಎಫ್ ಸತೀಶ್, ಆರ್‌ಎಫ್‌ಓ ಹನುಮಂತಪ್ಪ ಮತ್ತು ಸಿಬ್ಬಂದಿವರ್ಗ ಪರಿಶೀಲನೆ ನಡೆಸಿ ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ಹಾಡಿಗಳಲ್ಲಿ ಈಗಾಗಲೇ ಎರಡು ಪ್ರಾಣಗಳನ್ನು ಹುಲಿ ಬಲಿ ತೆಗೆದುಕೊಂಡಿದೆ. ಈ ಕುರಿತು ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಜೆ.ಟಿ.ರಾಜಪ್ಪ ಒತ್ತಾಯಿಸಿದ್ದಾರೆ. ಅಲ್ಲದೇ ಮೃತ ಗಣೇಶನು ಸಹ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ವದಗಿಸಬೇಕು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತನ ದೇಹ ತರೆವು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹಾಡಿಯ ಗ್ರಾಮಸ್ಥರು ಆಗ್ರಹಿಸಿದರು.
ಇದನ್ನೂ ಓದಿ:ಇ.ಡಿ.ನಿರ್ದೇಶಕರ ಸೇವೆ ವಿಸ್ತರಣೆ : ಅರ್ಜಿ ತಿರಸ್ಕರಿಸಿದ ಸುಪ್ರೀಂ
ಅಲ್ಲದೆ ಹುಲಿಯ ದಾಳಿಯಿಂದಾಗಿ ಹಾಡಿಯ ಜನರು ಭಯಭೀತರಾಗಿದ್ದು ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು. ಮೃತ ಗಣೇಶನನ್ನು ಕಳೆದುಕೊಂಡ ಆತನ ಹೆಂಡತಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಈ ಪ್ರಕರಣ ಹುಣಸೂರು ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಮೇ ತಿಂಗಳಲ್ಲಿ ಇದೇ ವಲಯದಲ್ಲಿ ನೇರಳಕುಪ್ಪೆ ಬಿ.ಹಾಡಿಯ ದನಗಾಯಿ ಜಗದೀಶ್ ಎಂಬುವವರು ಹುಲಿದಾಳಿಗೆ ಸಿಲುಕಿ ಸಾವನ್ನಪ್ಪಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.