ಮಾಂಗಲ್ಯ ಮಾರಿದರೂ ಪತಿ ಬದುಕಲಿಲ್ಲ, ಶವಕ್ಕೂ ಹಣ ಬೇಡಿಕೆ!
Team Udayavani, May 22, 2021, 4:31 PM IST
ಮೈಸೂರು: ಕೊರೊನಾ ಸೋಂಕಿಗೆ ತುತ್ತಾಗಿ ನಗರದಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ವ್ಯಕ್ತಿಯಚಿಕಿತ್ಸೆಗಾಗಿ ತನ್ನ ಮಾಂಗಲ್ಯವನ್ನೇ ಮಾರಿ ಹಣನೀಡಿದ್ದರೂ ಪತಿ ಉಳಿಯಲಿಲ್ಲ ಎಂಬ ದುಃಖ ಒಂದೆಡೆಯಾದರೆ, ಬಾಕಿ ಹಣ ಪಾವತಿಸುವವರೆಗೂ ಹೆಣ ನೀಡುವುದಿಲ್ಲ ಎಂಬ ಆಸ್ಪತ್ರೆ ಆಡಳಿತ ಮಂಡಳಿಯ ಅಮಾನವೀಯ ನಡೆ ಮೃತ ವ್ಯಕ್ತಿಯಪತ್ನಿಯ ಅರಣ್ಯರೋದನ ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿತ್ತು.
ಕಳೆದ 14 ದಿನಗಳ ಹಿಂದೆ ನಗರದ ಖಾಸಗಿಆಸ್ಪತ್ರೆಯೊಂದಕ್ಕೆ ಮೈಸೂರು ತಾಲೂಕಿನ ಆಲನಹಳ್ಳಿಗ್ರಾಮದ ನಿವಾಸಿ ಬಸವರಾಜು ಎಂಬಾತ ಸೋಂಕಿಗೆತುತ್ತಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೆಗುರುವಾರ ಮೃತಪಟ್ಟಿದ್ದರು.
ಇದಕ್ಕೂ ಮುನ್ನ ಆಕೆಯಪತ್ನಿ ತನ್ನ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನುಮಾರಿ, ಅದರಿಂದ ಬಂದ90 ಸಾವಿರ ರೂ. ಹಣವನ್ನುಪತಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ನೀಡಿದ್ದರು. ಆದರೂಪತಿ ಉಳಿಯಲಿಲ್ಲ. ಇತ್ತ ಶವ ನೀಡಿ ಎಂದು ಆಕೆಮತ್ತು ಆಕೆಯ ಕುಟುಂಬ ಆಸ್ಪತ್ರೆಯ ಆಡಳಿತಮಂಡಳಿಯವರಿಗೆ ಪರಿಪರಿಯಾಗಿ ಬೇಡಿಕೊಂಡರೂ3 ಲಕ್ಷ ರೂ. ನೀಡಿ, ಬಳಿಕ ಶವ ತೆಗೆದುಕೊಂಡು ಹೋಗಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದೆ.
ಆಸ್ಪತ್ರೆಯ ಉದ್ಧಟತನ: ಬಸವರಾಜುನನ್ನು ಉಳಿಸಿಕೊಳ್ಳುವ ಸಲುವಾಗಿ ಆತನ ಪತ್ನಿ ತನ್ನ ಕಿವಿಯ ಓಲೆ, ಮಾಂಗಲ್ಯ ಸರವನ್ನು ಮಾರಿದ್ದರು. ಇತ್ತ ಯಾವ ಹಣವೂ ಇಲ್ಲದೆ ಪರಿತಪಿಸುವಷ್ಟರಲ್ಲೇ ಪತಿ ಮೃತಪಟ್ಟಿರುವ ಸುದ್ದಿ ಕೇಳುತ್ತಿದ್ದಂತೆ ಆಕೆ ಮತ್ತು ಅವರ ಕುಟುಂಬ ಆಸ್ಪತ್ರೆಯ ಮುಂದೆ ಗೋಳಿಟ್ಟು ಶವ ನೀಡಿ ಎಂದು ಆಸ್ಪತ್ರೆಗೆ ಅಂಗಲಾಚಿದೆ. ಆದರೆ,ಹಣ ನೀಡದೆ ನಾವು ಶವ ನೀಡುವುದಿಲ್ಲ ಎಂದು ಒಂದು ದಿನ ಪೂರ್ತಿ ಶವವನ್ನು ನೀಡದೆ ಮನುಷ್ಯತ್ವಮರೆತು ಆಸ್ಪತ್ರೆ ಉದ್ಧಟತನ ತೋರಿದೆ.
ಟಾಸ್ಕ್ಫೋರ್ಸ್ ಸದಸ್ಯರ ಮಧ್ಯ ಪ್ರವೇಶ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರಾದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಜಂಗಲ್ ಲಾಡ್ಜ್ ಅಧ್ಯಕ್ಷ ಅಪ್ಪಣ್ಣ ಆಸ್ಪತ್ರೆ ಆಡಳಿತ ಮಂಡಳಿಗೆ ಯಾವ ಹಣವನ್ನು ನೀಡುವುದಿಲ್ಲ. ಒಂದು ವೇಳೆ ಹಣಕ್ಕೆ ಬೇಡಿಕೆ ಇಟ್ಟರೆ ಈಗಲೇ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ಮೇರೆಗೆ ಶುಕ್ರವಾರ ಮಧ್ಯಾಹ್ನ ಶವವನ್ನು ಪಾಲಿಕೆಯವರಿಗೆ ಹಸ್ತಾಂತರ ಮಾಡಿದ್ದಾರೆ.
ಹೆಣ ಮುಂದಿಟ್ಟುಕೊಂಡುಹಣಕ್ಕಾಗಿ ಬೇಡಿಕೆ ಇಡುವಂತಿಲ್ಲ ಎಂದು ಕಳೆದ ವರ್ಷವೇ ಸರ್ಕಾರ ಆದೇಶ ಹೊರಡಿಸಿದ್ದರೂ ಖಾಸಗಿ ಆಸ್ಪತ್ರೆಗಳಂತೂ ಎಚ್ಚೆತ್ತುಕೊಂಡಿಲ್ಲ. ಹಣವಿಲ್ಲದ ಬಡವರು ಆಸ್ಪತ್ರೆ ಮುಂದೆ ಹಣ ನೀಡಲಾಗದೆ ಗೋಳಾಡಿದರೆ, ಹಣ ಉಳ್ಳವರು ಕೇಳಿದಷ್ಟು ಹಣ ನೀಡಿ ಶವಕೊಂಡೊಯ್ಯುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.