ಉನ್ನತ ಶಿಕ್ಷಣ ಪ್ರಮಾಣ ಹೆಚ್ಚಿಸಿ: ಧ್ರುವನಾರಾಯಣ
Team Udayavani, Sep 18, 2017, 12:58 PM IST
ತಿ.ನರಸೀಪುರ: ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಶೈಕ್ಷಣಿಕ ಪ್ರಗತಿಯೇ ಮಾನದಂಡವಾಗಿರುವುದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.
ಪಟ್ಟಣದ ಹೊರವಲಯದ ಮೈಸೂರು ಮುಖ್ಯ ರಸ್ತೆಯ ಶ್ರೀನಿವಾಸ ಕನ್ವೇಷನ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ಉತ್ತಮ ಸೇವಾ ಪ್ರಶಸ್ತಿಯನ್ನು ಶಿಕ್ಷಕರಿಗೆ ಪ್ರದಾನ ಮಾಡಿ ಮಾತನಾಡಿದರು. ಜಾಗತೀಕ ಹಾಗೂ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಾವಿರುವುದರಿಂದ ಪ್ರತಿಯೊಬ್ಬ ಶಿಕ್ಷಕರು ಶೈಕ್ಷಣಿಕ ಮಟ್ಟವನ್ನೂ ನೂರಕ್ಕೆ ನೂರರಷ್ಟು ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಶಿಕ್ಷಕರಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಸ್ವಾತಂತ್ರ್ಯ ಪೂರ್ವದ ದೇಶದಲ್ಲಿನ ಶೇ.12 ರಷ್ಟಿದ್ದ ಸಾಕ್ಷರತಾ ಪ್ರಮಾಣ ಸ್ವಾತಂತ್ರ್ಯ ನಂತರ ಶೇ.75 ರಷ್ಟು ಏರಿಕೆಯಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, ಪ್ರೌಢ ಶಿಕ್ಷಣದ ಪ್ರಮಾಣ ಶೇ.50.04 ರಷ್ಟಿದೆ. ಆದರೆ ಉನ್ನತ ಶಿಕ್ಷಣದ ಪ್ರಮಾಣ ಶೇ.4 ಗಡಿಯನ್ನಯ ದಾಟಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾಗಿ ಉನ್ನತ ಶಿಕ್ಷಣದ ಎಲ್ಲರಿಗೂ ಲಭ್ಯವಾಗಬೇಕೆಂದು ನುಡಿದರು.
ದೇಶದ ರಕ್ಷಣಾ ವ್ಯವಸ್ಥೆಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಶಿಕ್ಷಣಕ್ಕೂ ನೀಡಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಶೈಕ್ಷಣಿಕ ಯೋಜನೆಗಳಿಗೆ 34,000 ಕೋಟಿ ರೂಗಳ ಹಣವನ್ನು ಮಾತ್ರ ನೀಡಲಾಗುತ್ತಿದೆ. ಸುಬ್ರಮಣ್ಯ ಆಯೋಗದ ವರದಿ ಅನ್ವಯ ಶೇ.6 ರಷ್ಟು ಅನುದಾನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿಯೇ ಕಲಿಯುವಾಗ ನೆಚ್ಚಿನ ಗುರುಗಳೊಬ್ಬರು ತಮಗೆ ಧ್ರುವನಾರಾಯಣ ಎಂಬುದಾಗಿ ನಾಮಕರಣ ಮಾಡಿದ್ದರಿಂದ ಇಲ್ಲಿಯವರೆವಿಗೂ ಅವರನ್ನು ಮರೆಯಲು ಸಾಧ್ಯವಾಗಿಲ್ಲ ಎಂದು ಸ್ಮರಿಸಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ವಸತಿ ಯೋಜನೆ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ಶಿಕ್ಷಣ ಪದ್ಧತಿಯಲ್ಲಿ ದಂಡಿಸುವ ಶಿಕ್ಷಕರನ್ನು ವಿಲನ್‌ಗಳಂತೆ ಬಿಂಬಿಸುವ ಮಾಧ್ಯಮಗಳಿಂದಾಗಿಯೇ ಇಂದಿನ ಶಿಕ್ಷಣದಲ್ಲಿ ನೈಜ್ಯತೆ ಮತ್ತು ಗುಣಮಟ್ಟ ಕ್ಷೀಣಿಸಲಾರಂಭಿಸಿದೆ. ವಿದ್ಯಾರ್ಥಿಯೊಬ್ಬನ ಉತ್ತಮ ಭವಿಷ್ಯವನ್ನು ರೂಪಿಸಲು ಆತ ತಪ್ಪು ಮಾಡಿದಾಗ ದಂಡಣೆ ನೀಡುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿದರು. ನಿರ್ಗಮಿತ ಉಪ ನಿರ್ದೇಶಕ ಎಚ್.ಆರ್.ಬಸಪ್ಪ, ಬಿಆರ್‌ಸಿ ಕೃಷ್ಣಪ್ಪ ಹಾಗೂ ವಿಜಾnನ ಕಟ್ಟಡ ದಾನಿ ಹೃದ್ರೋಗ ತಜ್ಞ ಡಾ.ನಂಜಯ್ಯ ಅವರನ್ನು ಸನ್ಮಾನಿಸಲಾಯಿತು. 2-3ದಶಕಗಳ ಕಾಲ ಶಿಕ್ಷಕರಾಗಿ ಸೇವೆಯಲ್ಲಿಸಿ ನಿವೃತ್ತಿಯಾದ ತಾಲೂಕಿನ 35ಕ್ಕೂ ಹೆಚ್ಚಾ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊàಡುಗೆ ನೀಡಲಾಯಿತು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಮಂಗಳಮ್ಮ, ಮಂಜುನಾಥನ್, ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಪುರಸಭೆ ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಉಪಾಧ್ಯಕ್ಷೆ ರತ್ನಮ್ಮ, ಬನ್ನೂರು ಪುರಸಭೆ ಅಧ್ಯಕ್ಷೆ ಎನ್.ಮಂಜುಳಾ, ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ತಾಪಂ ಸದಸ್ಯರಾದ ಕೆ.ಎಸ್.ಗಣೇಶ, ಬಿ.ಸಾಜಿದ್ ಮಹಮ್ಮದ್, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಉಪನ್ಯಾಸಕ ವೀರಭದ್ರಸ್ವಾಮಿ, ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮ್ಜದ್ ಖಾನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.