ಅಸಮಾನತೆ, ಜಾತಿ ವಿರುದ್ಧ ನಿಷ್ಠುರ ನುಡಿ
Team Udayavani, Jan 22, 2020, 3:00 AM IST
ಮೈಸೂರು: ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ, ಜಾತಿ ಪದ್ಧತಿಯನ್ನು ಅಂಬಿಗರ ಚೌಡಯ್ಯ ಅತ್ಯುಗ್ರವಾಗಿ ಹಾಗೂ ನೇರವಾಗಿ ಖಂಡಿಸುತ್ತಿದ್ದರು ಎಂದು ಚಿಂತಕ ಬಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ವತಿಯಿಂದ ಮಂಗಳವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಪುರುಷ: ಹನ್ನೇರಡನೆ ಶತಮಾನದಲ್ಲಿ ಜಾತಿ ಪದ್ಧತಿ, ವರ್ಗ ವ್ಯವಸ್ಥೆ, ಮೇಲು-ಕೀಳು ಹಾಗೂ ಮೂಢನಂಬಿಕೆಯ ಸೇರಿದಂತೆ ಕಂದಾಚಾರಗಳ ವಿರುದ್ಧ ಹೋರಾಡಿದರು. ಸಮಾಜದ ಅಂಕು ಡೊಂಕುಗಳನ್ನು ತಮ್ಮ ವಚನಗಳ ಮೂಲಕ ನಿಷ್ಠುರವಾಗಿ ಖಂಡಿಸುತ್ತಿದ್ದ ಅವರ, ಸಮಾಜಕ್ಕೆ ಸತ್ಯ ಮಾರ್ಗವನ್ನು ಪರಿಚಯಿಸಿದ ಮಹಾಪುರುಷ ಅಂಬಿಗರ ಚೌಡಯ್ಯ ಎಂದು ಸ್ಮರಿಸಿದರು.
ಅನುಭವ ಮಂಟಪ: ಅಂಬಿಗರ ಚೌಡಯ್ಯ ನೆರ ನುಡಿ ಹಾಗೂ ಒರಟು ಸ್ವಭಾವದ ವ್ಯಕ್ತಿಯಾಗಿದ್ದರು. ಅವರು, ಕಂಡದ್ದನ್ನು ಕಂಡ ಹಾಗೇ ಟೀಕಿಸುತ್ತಿದ್ದ ನೇರ ಪ್ರೌವೃತ್ತಿ ಹೊಂದಿದ್ದರು. ಬಸವಣ್ಣನವರು ನಿರ್ಮಿಸಿದ್ದ ಅನುಭವಮಂಟಪ ಅವರಿಗೆ ಉತ್ತಮ ವೇದಿಕೆಯಾಗಿತ್ತು. ಎಲ್ಲಾ ವರ್ಗದ ವಚನಕಾರರು ಈ ಅನುಭವಮಂಟಪದಲ್ಲಿ ಸೇರಿ ತಮ್ಮ ವಿಚಾರಧಾರೆಗಳನ್ನು ಪ್ರಸ್ತಾಪ ಮಾಡುತ್ತಿದ್ದರು. ಇಲ್ಲಿ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತಿತ್ತು ಎಂದು ಹೇಳಿದರು.
ವಚನ ಎಂದರೆ ಪ್ರತಿಜ್ಞೆ: ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುವಂತೆ ಕರೆ ನೀಡಿ, ರಾಜ್ಯದಲ್ಲಿ ಬದಲಾವಣೆ ಎಂಬ ಯುಗ ಆರಂಭವಾಯಿತು. ಅಂದು ಜಾತಿ ವ್ಯವಸ್ಥೆ ಮೇಲು-ಕೀಳು ಭಾವನೆ ಸರಿಪಡಿಸುವ ಕೆಲಸವನ್ನು ಮಾಡಿದರು. ಸಮಾಜದಲ್ಲಿ ಅತ್ಯಧಿಕ ಮೌಲ್ಯತೆ ತಾಂಡವವಾಡುತ್ತಿತ್ತು. ಜಾತಿವ್ಯವಸ್ಥೆ ಪ್ರಬಲವಾಗಿತ್ತು, ವಚನ ಎಂದರೆ ಪ್ರತಿಜ್ಞೆ ಮಾತು ಕೊಡುವುದು ಎಂಬ ಅರ್ಥ ಬರುತ್ತದೆ ಎಂದು ವಚನಕಾರರು ಅದನ್ನೇ ಮಾಡಿದರು. ಸಂಸ್ಕೃತಭಾಷೆ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕನ್ನಡದಲ್ಲಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಉಪವಿಭಾಗಾಧಿಕಾರಿ ವೆಂಕಟರಾಜು, ಪಾಲಿಕೆ ಸದಸ್ಯರಾದ ಸತೀಶ್, ರಂಗಸ್ವಾಮಿ, ಮುಜರಾಯಿ ಇಲಾಖೆಯ ತಹಸೀಲ್ದಾರ್ ಯತಿರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ಸಮುದಾಯದ ಮುಖಂಡ ಶ್ರೀನಿವಾಸ್, ನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.