ಮೂಲಸೌಕರ್ಯ, ಮಹಿಳಾ ಬ್ಯಾಂಕ್ ಗುರಿ
Team Udayavani, May 4, 2018, 12:26 PM IST
ಮೈಸೂರು: ದೇವರಾಜ ಅರಸರ ಗರಡಿಯಲ್ಲೇ ರಾಜಕೀಯ ಆರಂಭಿಸಿದ ಅಡಗೂರು ಎಚ್.ವಿಶ್ವನಾಥ್, ಬದಲಾದ ಪರಿಸ್ಥಿತಿಯಲ್ಲಿ ಅರಸರ ಕರ್ಮಭೂಮಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತಮ್ಮ ಸ್ಪರ್ಧೆ ಕುರಿತು “ಉದಯವಾಣಿ’ ಜೊತೆಗೆ ಉದ್ದೇಶಿತ ಯೋಜನೆಗಳನ್ನು ಹಂಚಿಕೊಂಡರು.
* ಹುಣಸೂರು ಕ್ಷೇತ್ರದ ಅಭಿವೃದ್ಧಿಗೆ ನಿಮ್ಮದೇ ಆದ ಕಾರ್ಯಕ್ರಮಗಳೇನು?
ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಸಮರ್ಪಕ ಕುಡಿಯುವ ನೀರು ಒದಗಿಸುವುದು, ರಸ್ತೆ-ಚರಂಡಿಗಳ ಅಭಿವೃದ್ಧಿ, ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು, ಅಕ್ಷರ-ಆರೋಗ್ಯ ನನ್ನ ಮೊದಲ ಆದ್ಯತೆ. ಜತೆಗೆ ಬೇರೆ-ಬೇರೆ ಇಲಾಖೆಗಳ ಸಹಭಾಗಿತ್ವದಲ್ಲಿ ಸ್ತ್ರೀಶಕ್ತಿ, ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆ ಉನ್ನತೀಕರಿಸಲು ಮಹಿಳಾ ಬ್ಯಾಂಕ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು.
* ತಾಲೂಕಿನ ರೈತ ಸಮುದಾಯದ ಹಿತಕಾಯಲು ನಿಮ್ಮ ಯೋಜನೆಗಳೇನು?
ಪ್ರಮುಖವಾಗಿ ಕೆರೆ-ಕಟ್ಟೆಗಳನ್ನು ತುಂಬಿಸುವುದು, ಕಾಲುವೆಗಳ ದುರಸ್ತಿ, ರಸಗೊಬ್ಬರ, ಕೀಟನಾಶಕಗಳನ್ನು ಸಕಾಲಕ್ಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಹುಣಸೂರು ಉಪ ವಿಭಾಗದ ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಒತ್ತು ನೀಡುತ್ತೇನೆ. ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಕ್ರಮ ಮಾಡಿ, ಸಣ್ಣ ಹಿಡುವಳಿದಾರರಿಗೆ ಭೂಮಿಯ ಹಕ್ಕು ಕೊಡಿಸಲಾಗುವುದು. ಆದಿವಾಸಿಗಳಿಗಾಗಿ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು.
* ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆಗಾರರಿಗೆ ನಿಮ್ಮ ಭರವಸೆ ಏನು?
ತಂಬಾಕು ಖರೀದಿಗೆ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಬರುವಂತಾಗಬೇಕು. ಆಗ ಸ್ಪರ್ಧೆಯ ಜತೆಗೆ ರಫ್ತು ಹೆಚ್ಚಾಗಿ ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಲಿದೆ. ಸಂಸದನಾಗಿದ್ದಾಗ ಇದಕ್ಕಾಗಿಯೇ ಪ್ರತಿ ಮೂರು ತಿಂಗಳಿಗೊಮ್ಮೆ ತಂಬಾಕು ಮಂಡಳಿ ಜೊತೆಗೆ ಸಭೆ ಮಾಡುತ್ತಿದ್ದೆ. ಈಗ ಆ ವ್ಯವಸ್ಥೆ ಇಲ್ಲ. ಜತೆಗೆ ಮಾರಿಷಸ್‌ನ ತಂಬಾಕು ಖರೀದಿ ಕಂಪನಿಗಳು ಬಾರದಿರುವುದರಿಂದ ದರ ಕಡಿಮೆಯಾಗಿದೆ. ಪ್ರತಿಷ್ಠಿತ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಲು ಒತ್ತು ನೀಡಲಾಗುವುದು.
* ತೋಟಗಾರಿಕೆ ಬೆಳೆಗಳಿಗೂ ಸೂಕ್ತ ಮಾರುಕಟ್ಟೆ ಇಲ್ಲದೇ ಬೆಳೆಗಾರರಿಗೆ ನಷ್ಟವಾಗುತ್ತಿದೆಯಲ್ಲ?
ವಿರಾಜಪೇಟೆ ಗಡಿಗೆ ಹೊಂದಿಕೊಂಡಂತೆ ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಲಿದೆ. ಇದರಿಂದ ತಾಲೂಕಿನಲ್ಲಿ ಹೈನುಗಾರಿಕೆ, ತೋಟಗಾರಿಕೆ, ಪುಷ್ಪ ಕೃಷಿಯಲ್ಲಿ ತೊಡಗಿರುವ ಸಣ್ಣ ಸಣ್ಣ ರೈತರನ್ನು ಗುರುತಿಸಿ, ಹೂ, ಹಣ್ಣು, ತರಕಾರಿ, ಹಾಲು, ಮಾಂಸ ರಫ್ತಿಗೆ ಉತ್ತೇಜನ ನೀಡಲಾಗುವುದು. ಇದರಿಂದ ರೈತರಿಗೆ ಸೂಕ್ತ ಮಾರುಕಟ್ಟೆ ಜತೆಗೆ ಉತ್ತಮ ದರ ದೊರೆಯಲಿದೆ.
* ತಾಲೂಕಿನ ಜೀವನಾಡಿ ಲಕ್ಷ್ಮಣತೀರ್ಥ ಕಲುಷಿತಗೊಂಡು ಜನ ಬಳಕೆಗೆ ಸಿಗದಂತಾಗಿದೆಯಲ್ಲ?
ಹೌದು, ಲಕ್ಷ್ಮಣತೀರ್ಥ ನದಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಲಕ್ಷ್ಮಣತೀರ್ಥ ನದಿ ಪುನಶ್ಚೇತನ ಸಂಬಂಧ ನೀರಾವರಿ ಕ್ಷೇತ್ರದ ತಜ್ಞರ ಸಲಹೆ ಪಡೆದು ಕಾರ್ಯಕ್ರಮ ರೂಪಿಸಲಾಗುವುದು.
* ಬೆಳೆಯುತ್ತಿರುವ ಹುಣಸೂರು ನಗರದ ಅಭಿವೃದ್ಧಿಗೆ ಯಾವ ಕಾರ್ಯಕ್ರಮ ಚಿಂತನೆ ಮಾಡಿದ್ದೀರಿ?
ಹುಣಸೂರು ನಗರ ಕಿಷ್ಕಿಂಧೆಯಾಗಿದೆ. ಇದಕ್ಕಾಗಿ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ ನ್ಯೂ ಟೌನ್‌ಶಿಪ್ ರಚಿಸಲಾಗುವುದು. ಜತೆಗೆ ನಗರದ ಎಲ್ಲಾ ಬಡಾವಣೆಗಳಿಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು.
* ಹುಣಸೂರು ನಗರದಲ್ಲಿ ದ್ವೇಷಮಯ ವಾತಾವರಣವಿದೆಯಲ್ಲ?
-ಹುಣಸೂರು ನಗರ, ತಾಲೂಕಿನ ಎಲ್ಲಾ ಜಾತಿ- ಜನಾಂಗಗಳನ್ನು ಒಟ್ಟಾಗಿ ಕರೆದೊಯ್ಯುವ ಮೂಲಕ ಶಾಂತಿ-ಸೌಹಾರ್ದತೆ, ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸಲಾಗುವುದು. ಅಮಾಯಕ ಯುವಕರ ಮೇಲೆ ಹಾಕಲಾಗಿರುವ ಕೇಸ್‌ಗಳು ವಾಪಸ್ ಆಗಬೇಕು. ಯುವ ಜನರಿಗೆ ಉದ್ಯೋಗ ಒದಗಿಸುವ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುವುದು.
ಜೆಡಿಎಸ್‌ನ ಚುನಾವಣಾ ಪ್ರಣಾಳಿಕೆ ಅಂತಿಮಗೊಂಡಿದೆ. ಒಂದೆರಡು ದಿನಗಳಲ್ಲಿ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.
-ಎಚ್.ವಿಶ್ವನಾಥ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.