ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾದ ಇಸಾಕ್ ಗ್ರಂಥಾಲಯದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು
Team Udayavani, Apr 10, 2021, 1:08 PM IST
ಮೈಸೂರು: ರಾಜೀವ್ ನಗರದ ಸೈಯದ್ ಇಸಾಕ್ ನೆರೆಹೊರೆಯವರಿಗೆ ಕನ್ನಡ ಭಾಷೆ ಜೊತೆಗೆ ಜ್ಞಾನದ ದಾಹವನ್ನು ತಣಿಸುವ ಸಲುವಾಗಿ ಸ್ವಂತ ಪರಿಶ್ರಮದಲ್ಲಿ ಕಟ್ಟಿದ್ದ ಗ್ರಂಥಾಲಯ ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾಗಿದೆ. ಶುಕ್ರವಾರ ಮುಂಜಾನೆ ನಡೆದಿರುವ ಈ ಘಟನೆಯಲ್ಲಿ ಗ್ರಂಥಾಲಯದಲ್ಲಿದ್ದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಭಸ್ಮವಾಗಿವೆ.
ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಸೈಯದ್ ಕನ್ನಡ ಪ್ರೇಮಿಯಾಗಿದ್ದು, ತನಗೆ ಅಕ್ಷರ ಜ್ಞಾನವಿಲ್ಲದಿದ್ದರೂ, ಇತರರು ಓದಬೇಕು ಹಾಗೂ ಮೈಸೂರಿನಲ್ಲಿ ಕನ್ನಡ ಬಳಕೆ ಕಡಿಮೆ ಇರುವ ಪ್ರದೇಶಗಳಾದ ರಾಜೀವನಗರ ಸುತ್ತಮುತ್ತಕನ್ನಡ ಅರಳಬೇಕೆಂದು 2011ರಿಂದ ಸಣ್ಣ ಗುಡಿಸಲಿನಲ್ಲಿ ಗ್ರಂಥಾಲಯ ಆರಂಭಿಸಿದ್ದರು.
ಇವರ ಆಸಕ್ತಿ ನೋಡಿ ಹಲವಾರು ದಾನಿಗಳು ಸಾವಿರಾರು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದರು. ಇವರ ಗ್ರಂಥಾಲಯ ಸೇವೆ ಮೆಚ್ಚಿ ಹಲವು ಸಂಸ್ಥೆಗಳು ಪ್ರಶಸ್ತಿ ನೀಡಿದ್ದವು. ಭಗವದ್ಗೀತೆ, ಕುರಾನ್ ಮತ್ತು ಬೈಬಲ್‌ನ ಕನ್ನಡ ಅವತರಣಿಕೆ ಪುಸ್ತಕ ಸೇರಿದಂತೆ ಧರ್ಮಗ್ರಂಥಗಳು ಗ್ರಂಥಾಲಯದಲ್ಲಿ ಹೆಚ್ಚಾಗಿದ್ದವು. ಇದರ ಜೊತೆ ಕುವೆಂಪು ಸೇರಿದಂತೆ ಕನ್ನಡದ ಕಥೆ, ಕಾದಂಬರಿ ಪುಸ್ತಕಗಳ ಸಂಗ್ರಹ ಗ್ರಂಥಾಲಯದಲ್ಲಿದ್ದವು.
ಶುಕ್ರವಾರ ಮುಂಜಾನೆ 3.45ರ ಹೊತ್ತಿಗೆ ಗ್ರಂಥಾಲಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಸೈಯದ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೆ ಅವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಶೇ.9 ರಷ್ಟು ಪುಸ್ತಕಗಳು ಸುಟ್ಟು ಹೋಗಿದ್ದವು. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಬ್ರರಿಯಲ್ಲಿ 15 ಸಾವಿರ ಪುಸ್ತಕ ಇಟ್ಟಿದ್ದೆ :
ಗ್ರಂಥಾಲಯದಲ್ಲಿ 15 ಸಾವಿರದಷ್ಟು ಪುಸ್ತಕ ಇಟ್ಟಿದ್ದೆ. ಜತೆಗೆ ಕನ್ನಡ ಪತ್ರಿಕೆಗಳನ್ನು ತರಸುತ್ತಿದ್ದೆ,ದಿನಕ್ಕೆ 150ಕ್ಕೂ ಹೆಚ್ಚು ಮಂದಿ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿದ್ದರು. ಗ್ರಂಥಾಲಯ ತಾತ್ಕಲಿಕವಾಗಿ ಗುಡಿಸಲಿನಲ್ಲಿದ್ದ ಕಾರಣ ಅಲ್ಲೇ ಮಲಗುತ್ತಿದ್ದೆ.ಗ್ರಂಥಾಲಯಕ್ಕೊಂದು ಸೂರು ದೊರೆತು. ಶಾಶ್ವತ ಆದ ಕಾರಣ ಮನೆಯಲ್ಲೇ ಮಲಗುತ್ತಿರುವುದನ್ನು ಗಮನಿಸಿದ ಕನ್ನಡ ವಿರೋಧಿ ಹಾಗೂ ಕೀಡಿಗೇಡಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ದಹಿಸಿದ್ದಾರೆ ಎಂದು ಸೈಯದ್ ಆರೋಪಿಸಿದ್ದಾರೆ. ಗ್ರಂಥಾಲಯಕ್ಕೆ ವಿಚಾರಕ್ಕೆ ನನ್ನ ಮೇಲೆ 4 ಬಾರಿ ದಾಳಿ ನಡೆದಿತ್ತು ಎಂದು ಗಂಥಾಲಯ ನಿರ್ಮಾತೃ ಸೈಯದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.