ಸ್ಥಳದಲ್ಲೇ 102 ಮಂದಿಗೆ ಪಿಂಚಣಿ ಆದೇಶ ಪತ್ರ ವಿತರಣೆ
Team Udayavani, Oct 9, 2021, 12:55 PM IST
ಹುಣಸೂರು: ತಾಲೂಕಿನ ಹನಗೋಡಿನಲ್ಲಿ ನಡೆದ ಪಿಂಚಣಿ ಮತ್ತು ಕಂದಾಯ ಅದಾಲತ್‌ನಲ್ಲಿ ಸ್ಥಳದಲ್ಲಿಯೇ 102 ಮಂದಿಗೆ ವಿವಿಧ ಯೋಜನೆಯಡಿ ಪಿಂಚಣಿ ಆದೇಶ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ವಿತರಿಸಿದರು.
ಹನಗೋಡಿನ ನಾಡಕಛೇರಿ ಆವರಣದಲ್ಲಿ ಶುಕ್ರವಾರ ನಡೆದ ಅದಾಲತ್‌ಗೆ ಒಟ್ಟು 179ಮಂದಿ ವಿವಿಧ ಪಿಂಚಣಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದರು. ದಾಖಲೆ ಪರಿಶೀಲಿಸಿ ಸ್ಥಳದಲ್ಲೇ 102 ಮಂದಿಗೆ ಆದೇಶ ಪತ್ರ ವಿತರಿಸಲಾಯಿತು. ನಂತರ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ಸರಕಾರದ ಸೂಚನೆ ಮೇರೆಗೆ ಒಂದೇ ಸೂರಿನಡಿ ವಿವಿಧ ಸಲತ್ತುಗಳನ್ನು ನೀಡಲು ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ವೃದ್ದಾಪ್ಯ ಹಾಗೂ ಅಂಗವಿಕಲರ ವೇತನ ಮಂಜೂರಾತಿ ಮಾಡುವ ವೇಳೆ ವೈದ್ಯಕೀಯ ದೃಡೀಕರಣ ಪತ್ರ ನೀಡಲೇಬೇಕು. ಅಲ್ಲದೆ ವಿಧವಾ ವೇತನ ಪಡೆಯಲು ಮಕ್ಕಳು ಸೇರಿದಂತೆ ಎಲ್ಲಾ ಸವಲತ್ತು ಹೊಂದಿರುವವರಿಗೆ ಪಿಂಚಣಿ ನೀಡುವಾಗುವುದಿಲ್ಲಾ, ಗ್ರಾಮಲೆಕ್ಕಿಗರು ನೀಡುವ ಧೃಡಿಕರಣ ಪತ್ರವೇ ಅಂತಿಮವಾಗಿರುವುರಿಂದ ಅರ್ಜಿದಾರರು ನಾಡಕಛೇರಿಗೆ ಅರ್ಜಿ ಸಲ್ಲಿಸಿದರೆ ಉಳಿದ ದಾಖತಿಗಳನ್ನು ಒದಗಿಸಿಕೊಂಡು ಪಿಂಚಣಿ ಆದೇಶ ಪತ್ರವಿತರಿಸಬೇಕೆಂಬ ಸರಕಾರದ ಸೂಚನೆ ಇದ್ದು ಕಂದಾಯ ಇಲಾಖೆ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕೆಂದು ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಲಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮುದಗನೂರು ಸುಭಾಷ್ ಮಾತನಾಡಿ ಈ ಬಾರಿ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕೃಷಿಗಾಗಿ ಮಾಡಿರುವ ಸಾಲಕ್ಕೆ ಧೃತಿಗೆಡಬೇಡಿ. ಅತ್ಮಹತ್ಯೆ ದಾರಿ ಹಿಡಿಯಬೇಡಿ. ಅತ್ಮಹತ್ಯೆಯಿಂದ ನಿಮ್ಮ ಕುಟುಂಬದವರು ಬೀದಿ ಪಾಲಾಗುತ್ತಾರೆ. ಬಿತ್ತಿದ ಬೆಳೆ ಕೈ ಸೇರದೆ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲು ಕೃಷಿ-ಕಂದಾಯ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ಸಲ್ಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹನಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಜಾನ್, ತಾ.ಪಂ.ಮಾಜಿ ಸದಸ್ಯ ಗಣಪತಿ ಮಾತನಾಡಿದರು. ಹನಗೋಡು ನಾಡಕಚೇರಿಯ ಉಪತಹಸಿಲ್ದಾರ್ ಚಲುವರಾಜ್, ಆರ್.ಐ.ಪ್ರಶಾಂತ್‌ರಾಜೇ ಅರಸ್, ಗ್ರಾಮ ಲೆಕ್ಕಿಗರಾದ ಮಹದೇವ್ , ಸುಮಂತ್, ಶಿವಕುಮಾರ್, ಮೂರ್ತಿ, ಸೀಮಾಭಾನು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು ಹಾಗೂ ವಿವಿಧ ಪಿಂಚಿಣಿ ಫಲಾನುಭವಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.