ರಾಜಕಾರಣಿಗಳು ಪತ್ರಿಕೆ ಮಾಲೀಕತ್ವ ಪಡೆದ್ರೆ ಕಷ್ಟ; ಮುಖ್ಯಮಂತ್ರಿ ಬೊಮ್ಮಾಯಿ
ಕೆಲವು ಮಾಧ್ಯಮಗಳು ರೋಚಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿವೆ.
Team Udayavani, Jul 7, 2022, 5:54 PM IST
ಮೈಸೂರು:ರಾಜಕಾರಣಿಗಳು ಪತ್ರಿಕೆಗಳ ಮಾಲೀಕತ್ವ ಪಡೆದರೆ ಬಹಳ ಕಷ್ಟವಾಗುತ್ತದೆ. ರಾಜಕಾರಣಿಗಳು ಬಿಸಿನೆಸ್ ಮೆನ್ ಆಗುವುದು ಬಿಸಿನೆಸ್‌ಮೆನ್ ರಾಜಕಾರಣಿಯಾಗುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆಂದೋಲನ ದಿನಪತ್ರಿಕೆಯ 50ನೇ ವರ್ಷದ ಪಯಣದ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಕೆಲವು ರಾಜಕಾರಣಿಗಳು ಪತ್ರಿಕೆ ನಡೆಸುವ ಪ್ರಯತ್ನ ಮಾಡಿದರು. ವೀರೇಂದ್ರ ಪಾಟೀಲ್, ಆರ್.ಗುಂಡೂರಾವ್ ಪತ್ರಿಕೆಗಳನ್ನು ನಡೆಸಲು ಪ್ರಯತ್ನಪಟ್ಟರು. ಆದರೆ, ಯಶಸ್ವಿಯಾಗಲಿಲ್ಲ ಎಂದರು.
ಉದ್ಯಮಿಗಳು ರಾಜಕೀಯಕ್ಕೆ ಬಂದರೆ ಅಪಾಯ ಎಂದು ಹೇಳಲಾಗುತ್ತಿತ್ತು. ಆದರೀಗ ರಾಜಕಾರಣಿಗಳೇ ಉದ್ಯಮಿಗಳಾಗುತ್ತಿದ್ದಾರೆ. ಇದು ಮತ್ತಷ್ಟು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು. ಜಾಗತೀಕರಣ, ಉದಾರೀಕರಣದ ನಡುವೆ ಅಂತಃ ಕರಣ ಕಡಿಮೆಯಾಗಿದೆ. ಅಂತ ಕ ರಣ ಇಟ್ಟುಕೊಂಡು ನಾವು ಮುಂದೆ ಹೋಗುವುದು ಅವಶ್ಯಕತೆ ಇದೆ. ಇವತ್ತಿನ ಸವಾಲುಗಳಿಗೆ, ಇವತ್ತಿನ ಪರಿಸ್ಥಿತಿಗೆ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ಎಲ್ಲವನ್ನು
ಪೂರ್ವಗ್ರಹ ಪೀಡಿತವಾಗಿ ನೋಡಬಾರದು.
ವಸ್ತು ನಿಷ್ಠವಾಗಿಯೂ ನೋಡುವ ಅವಶ್ಯಕತೆ ಇದೆ. ಹೊಸದು ಬಂದಾಗ ಟೀಕೆ ಬೇಡ. ಖಾಸಗೀ ಕರಣ ಬಂದಾಗ ಟೀಕಿಸಿದರು. ಆದ್ದರಿಂದ ವಸ್ತು ನಿಷ್ಠವಾಗಿ ನೋಡುವ ಅವಶ್ಯಕತೆ ಇದೆ ಎಂದರು. ಪತ್ರಿಕೋದ್ಯಮದಲ್ಲಿ ತಾಂತ್ರಿಕವಾಗಿ ಭಾರೀ ಬದಲಾವಣೆಯಾಗಿದೆ. ರಾಜಶೇಖರ ಕೋಟಿ ಅವರು ಕೇವಲ ಪತ್ರಕರ್ತರು ಮಾತ್ರ ಆಗಿರಲಿಲ್ಲ. ಜನಪರ ಧ್ವನಿಯಾಗಿದ್ದರು. ಜನ ಕಲ್ಯಾಣದ ಬಗ್ಗೆ ನಿರಂತರ ಚಿಂತನೆ ಮಾಡುತ್ತಿದ್ದರು. ಚಳವಳಿ ಜೊತೆಗೆ ಕೋಟಿ ಜೋಡಿಸಿಕೊಂಡಿದ್ದರು ಎಂದರು.
ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಕೆಲವು ಮಾಧ್ಯಮಗಳು ರೋಚಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿವೆ. ಗಂಡ-ಹೆಂಡತಿ ಜಗಳವನ್ನೇ ಇಡೀ ದಿನ ಬಿತ್ತರಿಸುತ್ತಿವೆ. ಮೌಢ್ಯವನ್ನು ಬಿತ್ತುತ್ತಿವೆ. ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವಿಷಾದಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೇ ಪುಂಖಾನು ಪುಂಕವಾಗಿ ವರದಿ ಮಾಡಲಾಯಿತು. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂದೆಲ್ಲಾ ಹೇಳಿದರು. ಆದರೆ, ನಾನು 12 ಬಾರಿ ಚಾಮರಾಜ ನಗರಕ್ಕೆ ಭೇಟಿ ನೀಡಿದರೂ 5 ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದೆ ಎಂದರು.
ರಾಜಶೇಖರ ಕೋಟಿಯವರು ಎಂದೂ ಕೂಡ ರಾಜಿ ಮಾಡಿಕೊಳ್ಳಲಿಲ್ಲ. ತುಳಿತಕ್ಕೆ, ಶೋಷಣೆಗೆ ಒಳಗಾದವರ ಧ್ವನಿಯಾಗಿದ್ದರು. ಅವರು ಸ್ನೇಹ ಜೀವಿಯಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿ ದರು. ಚಲನಚಿತ್ರ ನಟ ಶಿವರಾಜಕುಮಾರ್ ಮಾತನಾಡಿ, ಸಿನಿಮಾ ರಂಗಕ್ಕೂ, ಪತ್ರಿಕಾ ರಂಗಕ್ಕೂ ಹೆಚ್ಚಿನ ಒಡನಾಟವಿದೆ ಎಂದರು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ನಿರ್ಮಲ ಕೋಟಿ, ರಶ್ಮಿ ಕೋಟಿ , ರವಿ ಕೋಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.