ಕೇಂದ್ರದ ಕೆಲವು ಧೋರಣೆಗಳಿಂದ ಪ್ರಾದೇಶಿಕತೆಗೆ ಧಕ್ಕೆ
Team Udayavani, Mar 28, 2021, 3:37 PM IST
ಮೈಸೂರು: ಕೇಂದ್ರ ಸರ್ಕಾರ ಕೆಲವು ಧೋರಣೆಗಳುಪ್ರಾದೇಶಿಕತೆಗೆ ಧಕ್ಕೆಯಾಗುತ್ತಿದ್ದು, ಇದರಿಂದ ಒಕ್ಕೂಟವ್ಯವಸ್ಥೆ ಸಡಿಲವಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವಜೆ.ಸಿ.ಮಾಧುಸ್ವಾಮಿ ತಮ್ಮದೇ ಪಕ್ಷದ ವಿರುದ್ಧ ಬೇಸರವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಿಳಾಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ನಗರ ಘಟಕದಿಂದ ಬಿ.ಎಸ್.ಸಿದ್ದಲಿಂಗಶೆಟ್ಟರದತ್ತಿ, ಸಿದ್ದಮ್ಮಣ್ಣಿ ಸಿದ್ದಲಿಂಗಶೆಟ್ಟರ ದತ್ತಿ,ಸಿದ್ದನಂಜಪ್ಪ ದತ್ತಿ, ಶಾಂತಾದೇವಿ ಸಿದ್ದನಂಜಪ್ಪದತ್ತಿಯಿಂದ ರಾಷ್ಟ್ರೀಯ ಐಕ್ಯತೆ ಮತ್ತುಪ್ರಾದೇಶಿಕ ಸ್ವಾತಂತ್ರ್ಯ ವಿಷಯದ ಬಗ್ಗೆ ಶನಿವಾರ ನಡೆದರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರುಮಾತನಾಡಿದರು.
ಕೇಂದ್ರ ಸರ್ಕಾರದ ಕೇಂದ್ರೀಕರಣ ಧೋರಣೆಯಿಂದದೇಶದಲ್ಲಿ ಪ್ರಾದೇಶಿಕತೆ ಕಾವು ಹೆಚ್ಚಾಗುತ್ತಿದೆ. ರಾಜ್ಯದಪಟ್ಟಿಯಲ್ಲಿರುವ ಇಲಾಖೆಗಳು ನಿಧಾನವಾಗಿ ಕೇಂದ್ರದವಶವಾಗುತ್ತಿದ್ದು, ಎಲ್ಲವೂ ವಿಕೇಂದ್ರೀಕರಣ ಆಗುವಬದಲು ಕೇಂದ್ರೀಕರಣವಾಗುತ್ತಿದೆ. ಸರ್ವಾಧಿಕಾರಿಧೋರಣೆಯಿಂದ ಎಂದಿಗೂ ಪ್ರಾದೇಶಿಕ ಸ್ವಾತಂತ್ರ್ಯಕ್ಕೆಒಳಿತಾಗುವುದಿಲ್ಲ. ಅಲ್ಲದೆ, ಕೇಂದ್ರ ಸರ್ಕಾರದ ಸಾಕಷ್ಟುಯೋಜನೆಗಳು ಉತ್ತಮ ಪರಿಸ್ಥಿತಿಯಲ್ಲಿರುವವರಿಗೆಮತ್ತಷ್ಟು ಸೌಲಭ್ಯಗಳನ್ನು ನೀಡುವಂತಿದೆ ಎಂದುಹೇಳಿದರು.ಸ್ವಾತಂತ್ರ್ಯ ಬಂದಾಗ 16 ರಾಜ್ಯಗಳಿದ್ದವು. ಆದರೆ, ಈಗ29 ರಾಜ್ಯಗಳಿವೆ. ಎಲ್ಲ ರಾಜ್ಯಗಳಲ್ಲಿಯೂ ಅಭಿವೃದ್ಧಿಒಂದೆರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವಕಾರಣ ಮಿಕ್ಕ ಜಿಲ್ಲೆಗಳು ಬೇರೆ ರಾಜ್ಯ ಕೇಳುತ್ತಿವೆ. ಉತ್ತರಕರ್ನಾಟಕ ವಿಚಾರದಲ್ಲಿಯೂ ಇದೇ ಆಗಿದೆ, ತೆಲಂಗಾಣರಾಜ್ಯ ಸೃಷ್ಟಿಯಾಗಲೂ ಇದೇ ಕಾರಣ ಎಂದು ಹೇಳಿದರು.
ಕೇಂದ್ರ ಸರ್ಕಾರ ಮನೆಯ ಹಿರಿಯ ಸದಸ್ಯನಂತೆವರ್ತಿಸಬೇಕು. ಆದರೆ, ಲಭ್ಯ ಸಂಪನ್ಮೂಲ ಹಂಚಿಕೆಮಾಡುವಲ್ಲಿ ವಿಫಲವಾಗಿದೆ. ಇದೆಲ್ಲ ದೆಹಲಿಯಪ್ರಭುಗಳಿಗೆ ಅರ್ಥವಾಗುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೂ ಶಕ್ತಿತುಂಬುವಲ್ಲಿ ಕೂಡ ಸೋತಿದೆ ಎಂದು ವಿಷಾದವ್ಯಕ್ತಪಡಿಸಿದರು. ಎಂಎಲ್‌ಸಿ ಎನ್.ರವಿಕುಮಾರ್,ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು.
ಕೇಂದ್ರಕ್ಕೂ ನೀಟ್‌ಗೂ ಏನು ಸಂಬಂಧ?
ಕೇಂದ್ರ ಸರ್ಕಾರಕ್ಕೂ ನೀಟ್‌ಗೂ ಏನು ಸಂಬಂಧ. ಇದು ನಮ್ಮ ರಾಜ್ಯಕ್ಕೆ ಏಕೆ ಬೇಕು. ನಾವುಗಳುಬಂಡವಾಳ ಹಾಕಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಉತ್ತರ ಭಾರತದವರಿಗೆ ಕೆಂಪು ಹಾಸಿಗೆ ಹಾಕಿ ಏಕೆ ಎಂಬಿಬಿಎಸ್‌ಸೀಟ್ ಕೊಡಬೇಕು. ಇದರಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೇ? ಈ ವಿಷಯದ ಕುರಿತುಸಂಸತ್‌ನಲ್ಲಿ ಧ್ವನಿಯೆತ್ತಬೇಕು ಎಂದು ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯಗೆ ಸಚಿವ ಮಾಧುಸ್ವಾಮಿಹೇಳಿದರು.
ಶನಿವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ನೀಟ್ ಪರೀಕ್ಷೆ ವಿರುದ್ಧತಮಿಳನಾಡು ಸರ್ಕಾರ ಕೋರ್ಟ್ ಮೊರೆ ಹೋಗಿ ಕೊಂಚಮಟ್ಟಿಗಾದ್ದರೂ ಗೆದ್ದಿದೆ. ಇದರ ಫಲವಾಗಿ75:25 ಅನುಪಾತದಲ್ಲಿ ಸೀಟು ಹಂಚಿಕೆಯಾಗಿದ್ದು, ಇದರಲ್ಲಿ ಶೇ.25 ಸೀಟ್ ಅಲ್ಲಿಯ ತಮಿಳರಿಗೆದೊರೆಯುವಂತಾಗಿದೆ. ನಮ್ಮಲ್ಲಿ ಹೀಗೆ ಹೋರಾಟ ಮಾಡಲಾಗಲಿಲ್ಲ. ಇದರ ಪರಿಣಾಮವನ್ನುಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸೂಪರ್‌ಸ್ಪೆಷಾಲಿಟಿ ಹಾಸ್ಪಿಟಲ್‌ನ ವೈದ್ಯರು ಸಾಯುವ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.