ಜನೌಷಧ ನಂಬಿ ಬಂದರೆ ಜೀವ ಉಳಿಯದು!

ಕೋಟೆಯಲ್ಲಿ ಇದ್ದೂ ಇಲ್ಲದಂತಿರುವ ಜನೌಷಧಿ ಕೇಂದ್ರ ; ರೋಗಿಗಳಿಗೆ ಬೇಕಾದ ಔಷಧ

Team Udayavani, Sep 2, 2021, 3:47 PM IST

jan-aushadhi-kendra

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ರಿಯಾಯಿತಿ ದರದಲ್ಲಿ ಮಾತ್ರೆ, ಟಾನಿಕ್‌ ಪೂರೈಸಲು ಜನೌಷಧಿ (ಜನರಿಕ್‌ ಮಳಿಗೆ) ಕೇಂದ್ರವನ್ನು
ತೆರೆಯಲಾಗಿದ್ದು, ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಮಳಿಗೆ ಬಾಗಿಲು ಕೂಡ ತೆರೆಯುವುದಿಲ್ಲ. ಜನರಿಗೆ ಅಗತ್ಯವಿರುವ ಔಷಧಗಳು ಕೂಡ ಸಿಗುತ್ತಿಲ್ಲ. ಕೆಲವೇ ಕೆಲವು ಮಾತ್ರೆಗಳ ದಾಸ್ತಾನು ಇರುವುದರಿಂದ ಜನರಿಗೆ ಅಷ್ಟೇನು ಉಪಯೋಗ ಆಗುತ್ತಿಲ್ಲ. ಜನೌಷಧಿ ಕೇಂದ್ರದ ಆಶಯವೇ ಈಡೇರುತ್ತಿಲ್ಲ.

ನಿಯಮಾನುಸಾರು ಜನೌಷಧ ಮಳಿಗೆಯಲ್ಲಿ 1,500 ಔಷಧಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಈ ಮಳಿಗೆಯಲ್ಲಿ ಅರ್ಧದಷ್ಟು ಔಷಧಗಳು ಕೂಡ ಸಿಗುವುದಿಲ್ಲ. ರಿಯಾಯಿತಿ ದರದಲ್ಲಿ ಔಷಧ ಸಿಗುತ್ತದೆ ಎಂದು ನಂಬಿ ಬಂದರೆ ಬರಿಗೈನಲ್ಲಿ ನಿರಾಸೆಯಿಂದ ಹೋಗಬೇಕಾದ ಪರಿಸ್ಥಿತಿ ಇದೆ. ಮಳಿಗೆ ಆರಂಭಿಸಿ ಮೂರ್‍ನಾಲ್ಕು ವರ್ಷಗಳು ಕಳೆದಿದ್ದರೂ ಇಂದಿಗೂನಾಮಫ‌ಲಕಅಳವಡಿಸಿಲ್ಲ.ಔಷಧ ಕೇಂದ್ರಇದೆಎಂಬುದೇ ಜನ ಸಾಮಾನ್ಯರಿಗೆ ತಿಳಿಯುತ್ತಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಈ ನಡುವೆ ಬೆರಳೆಣಿಕೆ ಯಷ್ಟು ಔಷಧಗಳು ಮಾತ್ರ ಲಭ್ಯವಿದ್ದು, ಜನರಿಗೆ ತುರ್ತು ಬೇಕಾದ ಮಾತ್ರೆಗಳೇ ಸಿಗುತ್ತಿಲ್ಲ.

ತಾಲೂಕಿನಲ್ಲಿ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೂಲಿ ಕಾರ್ಮಿಕರೇ ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿದ್ದು, ದುಬಾರಿ ಹಣ ಕೊಟ್ಟು ಮೆಡಿಕಲ್‌ ಸ್ಟೋರ್‌ಗಳಲ್ಲಿ ಔಷಧ ಖರೀದಿಸು ವಷ್ಟಆರ್ಥಿಕವಾಗಿ ಶಕ್ತರಲ್ಲ. ಜನೌಷಧಕೇಂದ್ರ ತೆರೆದಾಗಖುಷಿಪಟ್ಟಿದ್ದ ಜನರು ಇದೀಗ ತಮಗೆ ಬೇಕಾದ ಔಷಧ ಲಭಿಸದಕಾರಣ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ:‘ಹ್ಯಾಪಿಲಿ ಮ್ಯಾರೀಡ್‌’ ಸ್ಟೋರಿ: ಪೃಥ್ವಿ ಅಂಬಾರ್‌-ಮಾನ್ವಿತಾ ಕಾಮತ್‌ ಜೋಡಿಯ ಹೊಸ ಚಿತ್ರ

ಜನೌಷಧ ಕೇಂದ್ರದ ಮುಂದೆ ಬೆಳಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇನೆ. ಮಧ್ಯಾಹ್ನ ಕಳೆದರೂ ಬಾಗಿಲು ತೆರೆದಿಲ್ಲ. ಈ ದಿನ ರಜಾ ಎಂಬ ಮಾಹಿತಿ ಕೂಡ ಇರುವುದಿಲ್ಲ. ಸಮಯ ಪಾಲನೆಯೂ ಇರುವುದಿಲ್ಲ. ಬೇಕಾದ ಔಷಧಗಳು ಸಿಗುವುದಿಲ್ಲ. ಹೀಗೆ ಬೇಕಾಬಿಟ್ಟಿ ಸೇವೆ
ನೀಡುವುದಾದರೆ ಜನೌಷಧಕೇಂದ್ರವನ್ನಾದರೂ ಏಕೆ ತೆರೆಯಬೇಕಿತ್ತು ಎಂದು ಸ್ಥಳೀಯರಾದ ಉಮೇಶ್‌ ಜೀವಕ ಮತ್ತಿತರರು ಪ್ರಶ್ನಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಜನರಿಗೆ ಉತ್ತಮ ಸೇವೆ ಸಿಗುಂತೆ ಜನೌಷಧ ಮಳಿಗೆ
ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜನೌಷಧ ಕೇಂದ್ರದ
ಆಶಯ ಈಡೇರಲಿ
ಜನರಿಗೆ ರಿಯಾಯಿತಿ ದರಲ್ಲಿ ಮಾತ್ರೆಗಳು, ಟಾನಿಕ್‌ಗಳು ತಲುಪಿಸುವ ಆಶಯದೊಂದಿಗೆಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಜನೌಷಧಕೇಂದ್ರ ತೆರೆಯಲಾಗಿದೆ. ಆದರೆ, ಇಲ್ಲಿ ಸೇವೆಯೇ ಅಸಮರ್ಪಕವಾಗಿದೆ. ಹೀಗಾಗಿ ಜನರು ಮಳಿಗೆಯ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ಈ ಧೋರಣೆ ಯನ್ನು ಬದಲಿಸಿ ಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕಿದೆ. ಇಲ್ಲಿ ತೆರೆದಿರುವ ಮಳಿಗೆಗೆ ಮೊದಲ ನಾಮಫ‌ಲಕ ಅಳವಡಿಸಬೇಕು. ಸಕಾಲದಲ್ಲಿ ಬಾಗಿಲು ತೆರೆಯಬೇಕು. ಮಾರಾಟಗಾರರ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಈ ಭಾಗದ ಜನರಿಗೆ ತುರ್ತು ಬೇಕಿರುವ ಔಷಧ ಗಳು ಸಿಗುವಂತಾಗಬೇಕು.ಕಾಲ ಕಾಲಕ್ಕೆ ಪರಿಶೀಲನೆ ನಡೆಸಿ ಎಲ್ಲ ರೀತಿಯ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಜನರು ಮೆಡಿಕಲ್‌ ಸ್ಟೋರ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಬೇಕಿದೆ.

ಎಚ್‌.ಡಿ.ಕೋಟೆ ತಾಲೂಕಿಗೆ ಜನ ಔಷಧಕೇಂದ್ರ ಮಂಜೂರಾಗಿರುವುದು ವರದಾನ. ಮಳಿಗೆಯಲ್ಲಿ 1,400ಕ್ಕೂ ಅಧಿಕ ಔಷಧಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇಲ್ಲಿಕೇವಲ 400 ಔಷಧಗಳು ಮಾತ್ರ ಲಭ್ಯ ಇವೆ ಎಂಬ ಆರೋಪಗಳುಕೇಳಿ ಬಂದಿವೆ. ಈ ಕುರಿತು ಔಷಧ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರೂ ಉಪಯೋಗವಾಗಿಲ್ಲ.
-ಡಾ| ರವಿಕುಮಾರ್‌, ತಾಲೂಕು ಆರೋಗ್ಯಾಧಿಕಾರಿ

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.