ಜಯಲಕ್ಷ್ಮಮ್ಮಣ್ಣಿ ಅರಮನೆ ಕುಸಿದು ಬೀಳ್ಳೋ ಸ್ಥಿತಿ
Team Udayavani, Apr 26, 2019, 1:53 PM IST
ಮೈಸೂರು: ನಗರದ ಪ್ರವಾಸಿ ತಾಣಗಳಲ್ಲಿ ಒಂದಾದ ಹಾಗೂ ಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಹೆಗ್ಗುರುತಾದ ಜಯಲಕ್ಷ್ಮಮ್ಮಣ್ಣಿ ಅರಮನೆ ಕುಸಿಯುವ ಹಂತ ತಲುಪಿದೆ.
ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದ 2 ಎಕರೆ ವ್ಯಾಪ್ತಿಯಲ್ಲಿ ವಿಶಾಲವಾಗಿ ನಿಂತಿರುವ ಈ ಜಯಲಕ್ಷ್ಮಮ್ಮಣ್ಣಿ ಅರಮನೆ 114 ವರ್ಷಗಳ ತನ್ನದೇ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಆದರೆ, ಕಳೆದೊಂದು ದಶಕದಿಂದ ಸಮರ್ಪಕ ನಿರ್ವಹಣೆ ಹಾಗೂ ಕಾಳಜಿಗೆ ಒಳಪಡದೇ ಅರಮನೆಯ ಒಂದೊಂದು ಭಾಗದ ಚಾವಣಿ ಕುಸಿದು ಬೀಳುವ ಹಂತ ತಲುಪಿದೆ.
ಅರಮನೆ ವಿಶೇಷ: ಅರಮನೆಯಲ್ಲಿ 123 ಕೊಠಡಿ, 129 ಬಾಗಿಲು, 398 ಕಿಟಕಿ, 330 ಗಾರೆ ಕಂಬ ಹಾಗೂ 96 ಮರದ ಕಂಬಗಳಿವೆ. ಜೊತೆಗೆ ಅರಮನೆಗೆ ಉಪಯೋಗಿಸಿರುವ ಮರದ ಸಾಮಗ್ರಿ ಸಂಪೂರ್ಣ ತೇಗದ ಮರವಾಗಿದ್ದು, ಇಂದಿಗೂ ತನ್ನ ಸತ್ವ ಉಳಿಸಿಕೊಂಡಿರುವುದು ಗಮನಾರ್ಹ. ಜೊತೆಗೆ ಎರಡು ಖಜಾನೆ ಕೊಠಡಿ, ಮರದ ಹಾಸಿನಿಂದ ಮಾಡಿರುವ ನೃತ್ಯ ಮಂಟಪ ಎಲ್ಲರ ಗಮನ ಸೆಳೆಯುತ್ತಿದೆ. 1901-1905ರಲ್ಲಿ ನಿರ್ಮಾಣ ವಾಗಿರುವ ಈ ಅರಮನೆ ಇಂಡೋ ಸಾರ್ಸನಿಕ್, ಇಸ್ಲಾಮಿಕ್ ಹಾಗೂ ಗ್ರೀಕ್ ಶೈಲಿ ಒಳಗೊಂಡಂತೆ 3 ಶೈಲಿಯಲ್ಲಿದೆ. ಈ ಕಟ್ಟಡಕ್ಕೆ ಸಂಪೂರ್ಣವಾಗಿ ಸುಣ್ಣದ ಗಾರೆ ಬಳಕೆ ಮಾಡಿದ್ದು, 3 ಭಾಗಗಳನ್ನು ಈ ಅರಮನೆ ಹೊಂದಿದೆ. ಜತೆಗೆ ಮೇಲಂತಸ್ಥನ್ನು ನಿರ್ಮಾಣ ಮಾಡಿದ್ದು, 3 ಭಾಗ ಬೆಸೆಯಲು ಗಾಜಿನ ಮೇಲ್ಸೇತುವೆಯೂ ಇದೆ.
ಮೊದಲ ವಿದ್ಯುತ್ ಚಾಲಿತ ಲಿಫ್ಟ್: ಮೈಸೂರಿಗೆ ಮೊದಲ ವಿದ್ಯುತ್ ಚಾಲಿತ ಲಿಫ್ಟ್ನ್ನು ಈ ಅರಮನೆಯಲ್ಲಿ ಕಾಣಬಹುದಾಗಿದೆ. ಅರಮನೆ ನಿರ್ಮಿಸುವಾಗ ಇದನ್ನು ಅಳವಡಿಸಲಾಗಿದೆ. ಇದು ಇಂದಿಗೂ ಸುಸಜ್ಜಿತವಾಗಿದ್ದರೂ ಕೆಲವು ತಾಂತ್ರಿಕ ಅಡಚಣೆಗಳಿಂದ ತನ್ನ ಕೆಲಸ ನಿಲ್ಲಿಸಿದೆ ಎಂದು ಜಾನಪದ ವಸ್ತುಸಂಗ್ರಹಾಲಯದ ಕ್ಯೂರೇಟರ್ ಡಾ. ನಾಗರಾಜು ಹೇಳುತ್ತಾರೆ.
ಶೀಘ್ರವೇ ವಿಶ್ವವಿದ್ಯಾಲಯ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷ್ಯ ಮನೋಭಾವ ತೊರೆದು ಅಪರೂಪದ ಶೈಲಿಯಲ್ಲಿರುವ ಈ ಅರಮನೆಯನ್ನು ಉಳಿಸಬೇಕಿದೆ. ಇಲ್ಲವಾದರೆ ಇಂತಹದೊಂದು ಭವ್ಯವಾದ ಕಟ್ಟಡ ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ಕಷ್ಟದ ಕೆಲಸ. ಇನ್ನಾದರೂ ಸಂಬಂಧಪಟ್ಟವರು ತಮ್ಮ ಸ್ವಪ್ರತಿಷ್ಠೆ ಬದಿಗಿಟ್ಟು, ಮೈಸೂರಿನ ಪರಂಪರೆ ಉಳಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.