ಶಿವಮೊಗ್ಗದಲ್ಲೂ ಜೆಡಿಎಸ್ ಮೇಲೆ ಒಲವಿದೆ
Team Udayavani, Nov 9, 2018, 12:19 PM IST
ಹುಣಸೂರು: ಸಮಯಾವಕಾಶ ಹೆಚ್ಚು ಸಿಕ್ಕಿದ್ದರೆ ಶಿವಮೊಗ್ಗ ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪನವರೇ ಗೆಲ್ಲುತ್ತಿದ್ದರು. ಆದರೂ ಬಿಜೆಪಿ ಪರವಾಗಿದ್ದ 3.5 ಲಕ್ಷದಷ್ಟಿದ್ದ ಮತದಾರರನ್ನು 50 ಸಾವಿರಕ್ಕಿಳಿಸಿ, ಅಲ್ಲಿಯ ಜನರೂ ಜೆಡಿಎಸ್ ಪರವಾಗಿದ್ದಾರೆಂಬುದನ್ನು ಸಾಬೀತು ಪಡಿಸಿದ್ದೇವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇನ್ನು ಮುಂದೆ ಸಮ್ಮಿಶ್ರ ಸರ್ಕಾರದ ಪರ್ವ ಆರಂಭಗೊಳ್ಳಲಿದೆ. ಈಗ ನಡೆದ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಸಾಧನೆ ಹಾಗೂ ಕುಮಾರಸ್ವಾಮಿಯವರ ನಾಯಕತ್ವವನ್ನು ಜನ ಮೆಚ್ಚಿದ್ದಾರೆ. ಆದ್ದರಿಂದಲೇ ಸಮ್ಮಿಶ್ರ ಅಭ್ಯರ್ಥಿಗಳಿಗೆ ಅಭೂತಪೂರ್ವ ಬೆಂಬಲ ನೀಡಿದ್ದು, ಇನ್ನು ಮುಂದೆ ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮಧುಬಂಗಾರಪ್ಪಗೆ ಹತ್ತು ದಿನ ಸಮಯಾವಕಾಶ ಸಿಕ್ಕಿದ್ದರೆ ಖಂಡಿತಾ ಗೆಲುವು ನಮ್ಮದಾಗುತ್ತಿತ್ತು. ಯಡಿಯೂರಪ್ಪರನ್ನು ಒಂದೇ ಕ್ಷೇತ್ರಕ್ಕೆ ಸೀಮಿತವಾಗುವ ರೀತಿಯಲ್ಲಿ ಹೊರ ಹೋಗದಂತೆ ಕಟ್ಟಿ ಹಾಕಲಾಗಿತ್ತು. ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡಿದ್ದರಿಂದ ಬಿಜೆಪಿಯ. 3.5 ಲಕ್ಷ ಇದ್ದ ಲೀಡ್ ಮೊತ್ತವನ್ನು 50 ಸಾವಿರಕ್ಕಿಳಿಸಲಾಗಿದೆ. ಅವರಿಗೆ ಇದೊಂದು ಪ್ರಯಾಸದ ಗೆಲುವಷ್ಟೆ ಆಗಿದೆ. ಇದರಿಂದ ಸಮ್ಮಿಶ್ರ ಸರಕಾರವೇ ಲೇಸೆಂದು ಜನಾಭಿಪ್ರಾಯ ಸಿಕ್ಕಿದೆ ಎಂದರು.
ಆಪರೇಷನ್ ಕಮಲಕ್ಕೆ ತಿರುಗೇಟು: ಇನ್ನು ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಡೆಸಿದ ಆಪರೇಷನ್ ಕಮಲಕ್ಕೆ ಅಭ್ಯರ್ಥಿಯೇ ತಿರುಗೇಟು ನೀಡಿದ್ದು, ಬಿಜೆಪಿಗೊಂದು ಪಾಠ ಕಲಿಸಿದಂತಾಗಿದೆ. ಇವರೆಲ್ಲ ಆಟಾಟೋಪಕ್ಕೆ ಕಡಿವಾಣ ಹಾಕಿದಂತಾಗಿದೆ. ಮಂಡ್ಯ ಹಾಗೂ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಉತ್ತಮ ಮತಗಳಿಸಿರುವ ಬಗ್ಗೆ ಪ್ರಶ್ನಿಸಿದಾಗ ಇಲ್ಲಿ ಕಾಂಗ್ರೆಸ್‌ನವರು ಬೇಜಾರಾಗಿ ಬಿಜೆಪಿಗೆ ಮತ ಹಾಕಿರಬಹುದಷ್ಟೆ ಹೊರತು ಯಾವುದೇ ಪ್ರೀತಿಯಿಂದಲ್ಲವೆಂದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಎಚ್.ವೈ.ಮಹದೇವ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.