HDK ವಿರುದ್ಧ ಪಿತೂರಿ ನಡೆಸಿದವರೇ ಈಗ ಹೆಚ್ಡಿಕೆ ಪೋಟೋ ಹಾಕಿಕೊಂಡು ಊರೂರು ಅಲೆಯುತ್ತಿದ್ದಾರೆ..
ಹಾಲಿ ಶಾಸಕ ಕೆ.ಮಹದೇವ್ ವಿರುದ್ದ ಮಾಜಿ ಶಾಸಕ ಕೆ.ವೆಂಕಟೇಶ್ ಲೇವಡಿ
Team Udayavani, Feb 21, 2023, 9:28 PM IST
ಪಿರಿಯಾಪಟ್ಟಣ: ಮೈಮುಲ್ ಚುನಾವಣಾ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ವಿರುದ್ಧ ಜೆಡಿಎಸ್ ಕಾರ್ಯಕರ್ತರನ್ನೇ ಎತ್ತಿಕಟ್ಟಿ ಗಲಾಟೆ ಮಾಡಿಸಿದ ಅಪ್ಪ ಮಕ್ಕಳು ಈಗ ಕುಮಾರಸ್ವಾಮಿ ಪೋಟೋ ಹಾಕಿಕೊಂಡು ಊರೂರು ಅಲೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಹಾಲಿ ಶಾಸಕ ಕೆ.ಮಹದೇವ್ ವಿರುದ್ದ ಲೇವಡಿ ಮಾಡಿದರು.
ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ.ಮಹದೇವ್ ಹೆಚ್ಡಿಕೆಯಿಂದ ಕಾಡಿಬೇಡಿ ಟಿಕೆಟ್ ಪಡೆದು ಶಾಸಕರಾದರು. ನಂತರದ ದಿನಗಳಲ್ಲಿ ಎದೇ ಮಹದೇವ್ ಹಿಚ್ಡಿಕೆ ವಿರೋಧಿಗಳ ಜೊತೆ ಕೈ ಜೋಡಿಸಿ, ಅವರ ವಿರುದ್ಧವೇ ತಿರುಗಿಬಿದ್ದು, ಹಿಚ್ಡಿಕೆ ಪಿರಿಯಾಪಟ್ಟಣಕ್ಕೆ ತಮ್ಮ ಪಕ್ಷ ಬೆಂಬಲಿತ ಅಧಿಕೃತ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬಂದಾಗ ಈದೇ ಕೆ.ಮಹದೇವ್ ಹಾಗೂ ಆತನ ಮಗ ಪ್ರಸನ್ನ ಜೆಡಿಎಸ್ ಕಾರ್ಯಕರ್ತರನ್ನು ಎತ್ತಿಕಟ್ಟಿ ಹಿಚ್ಡಿಕೆ ವಿರುದ್ಧ ಗಲಾಟೆ ಮಾಡಿಸಿ ಅವಮಾನ ಮಾಡಿದ್ದರು ಆಗಿನ ಸಂದರ್ಭದಲ್ಲಿ ಹಿಚ್ಡಿಕೆ ಮಾತನಾಡುತ್ತ ಈ ಹಿಂದೆ ಟಿಕೆಟ್ಗಾಗಿ ನಮ್ಮ ಮನೆ ಬಾಗಿಲಲ್ಲಿ ನಿಲ್ಲತ್ತಿದ್ದವರು ಇಂದು ನಾನು ಬಂದರೆ ನಮ್ಮ ಕಾರ್ಯಕರ್ತರನ್ನೇ ಎತ್ತಿಕಟ್ಟಿ ಗಲಾಟೆ ಮಾಡಿಸುತ್ತಿದ್ದಾರೆ ಮುಂದೆ ನೋಡೋಣಾ ಎಂದು ಮಾರ್ಮಿಕವಾಗಿ ನುಡಿದಿದ್ದರು. ಈಗ ಚುನಾವಣೆ ಬರುತ್ತಿದ್ದಂತೆ ಇಧೇ ಮಹದೇವ್, ಮಾಜಿ ಪ್ರಧಾನಿ ದೇವೇಗೌಡ್ರು, ಕುಮಾರಸ್ವಾಮಿ ಪೋಟೋ ಹಿಡಿದು ತಾಲ್ಲೂಕು ಸುತ್ತುತ್ತಿದ್ದಾರೆ ಇಂಥವರು ನಮಗೆ ಸಿದ್ದಾಂತ ನೈತಿಕತೆಯ ಬೋಧನೆ ಮಾಡುತ್ತಾರೆ. ಮಹದೇವ್ ಒಬ್ಬ ಕಮಿಷನ್ ಗಿರಾಕಿ ಈತ 10 ಪರ್ಸೆಂಟ್ ಕಮಿಷನ್ ಕೊಡದಿದ್ದರೆ ತಾಲ್ಲೂಕಿನಲ್ಲಿ ಯಾವ ಗುದ್ದಲಿಗೂ ಪೂಜೆ ಇಲ್ಲ ಹಾರೆಗೂ ಪೂಜೆ ಇಲ್ಲ, ಇಂಥವರು ತಾಲ್ಲೂಕಿನ ಅಭಿವೃದ್ದಿ ಬಗ್ಗೆ ನಮಗೆ ಸವಾಲು ಹಾಕುತ್ತಾರೆ ಸರೀ, ಬನ್ನೀ … ನಿಮ್ಮ ಸವಾಲು ಸ್ವೀಕರಿಸಿದ್ದೇವೆ ತಾಲ್ಲೂಕಿನ ಅಭಿವೃದ್ದಿ ಯಾರಾ ಕಾಲದಲ್ಲಿ ನಡೆದಿದೆ ಎಂದು ಬಹಿರಂಗ ಚರ್ಚೆ ಮಾಡೋಣಾ ಎಂದರೆ ಕದ್ದುಮುಚ್ಚಿ ಓಡಾಡುತ್ತಾರೆ. ನಮ್ಮ ಜನ ಗ್ರಾಪಂ ಚುನಾವಣೆಗೂ ಸ್ಪರ್ಧೆ ಮಾಡಲು ಯೋಗ್ಯತೆ ಇಲ್ಲದ ಇಂಥರನ್ನು ಎಂಎಲ್ಎ ಮಾಡಿ ಈಗ ತಪ್ಪು ಆಯ್ಕೆ ಮಾಡಿಬಿಟ್ಟೋ ಎಂದು ನರಳುತ್ತಿದ್ದಾರೆ. ತಾಲೂಕಿನಲ್ಲಿ ಕರಡಿಲಕ್ಕನ ಕೆರೆ, 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿ ತಾಲ್ಲೂಕನ್ನು ಅಭೀವೃದ್ದಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ ತಾಲ್ಲೂಕಿನಲ್ಲಿ ಯಾರ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂಬುದನ್ನು ಮತದಾರರು ತೀರ್ಮಾನ ಮಾಡಲಿ ಎಂದರು.
ಕಾರ್ಯಕರ್ತರು ಮೈಮರೆತ ಕಾರಣ ನಾನು ಸೋತೆ:
ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾವಿರಾರು ಕೋಟಿ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಮೈಮರೆತ ಕಾರಣ ನಾನು ಸೋಲನ್ನನುಬವಿಸಬೇಕಾಯಿತು. ಈ ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಿದೆ ಹಾಗಾಗಿ ಪಕ್ಷ ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಭರವಸೆಗಳ ಮಾಹಿತಿಯನ್ನು ನಮ್ಮ ಕಾರ್ಯಕರ್ತರು ಮನೆಮನೆಗೆ ತಲುಪಿಸಿ ಜನತೆಗೆ ಗ್ಯಾರೆಂಟಿ ಕಾರ್ಡ್ ನೀಡಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ ಸುಳ್ಳಿನ ಭರವಸೆ ನೀಡುತ್ತಿರುವ ಮೋದಿ ಸರ್ಕಾರ ಬಡವರ, ರೈತರ ವಿರೋಧಿಯಾಗಿದೆ. ಮೋದಿ ಕೊಟ್ಟಂತಹ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲಾ ಅದು ಒಂದು ಕುಟುಂಬದ ಪಕ್ಷವಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 1ಇ ಕೆ.ಜಿ ಅಕ್ಕಿ, 200 ಯೂನಿಟ್‌ವರೆಗೆ ಉಚಿತ ಕರೆಂಟ್ ಹಾಗೂ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ನೀಡಲು ನಿರ್ಧರಿಸಿದೆ. ಸದ್ಯದಲ್ಲೇ ಇದರ ಗ್ಯಾರಂಟಿ ಕಾರ್ಡನ್ನು ಪ್ರತಿ ಮನೆಗಳಿಗೆ ವಿತರಿಸಲು ಪಕ್ಷ ತೀರ್ಮಾನ ಮಾಡಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಟಿ.ಈರಯ್ಯ ಮಾತನಾಡಿ ಶಾಸಕ ಮಹದೇವ್ ಕುಟುಂಬ ರಾಜಕಾರಣ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಕಾರ್ಯಕರ್ತರನ್ನು ಕ್ಯಾರೇ ಎನ್ನುತ್ತಿಲ್ಲ, ಇದರಿಂದ ಎಲ್ಲರೂ ಜೆಡಿಎಸ್ ಪಕ್ಷವನ್ನು ತೊರೆಯುತ್ತಿದ್ದಾರೆ. ಪಂಚವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನವಗ್ರಾಮ ಯೋಜನೆಯ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಗೋಲ್ಮಾಲ್ ಮಾಡಿ ಸರ್ಕಾರಕ್ಕೆ ಮತ್ತು ಗಿರಿಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ವಕೀಲ ಬಿ.ವಿ.ಜವರೇಗೌಡ, ಬೆಕ್ಕರೆ ನಂಜುಂಡಸ್ವಾಮಿ, ಸೀಗೂರು ವಿಜಯಕುಮಾರ್ ಸಿ.ತಮ್ಮಣಯ್ಯ, ಆರ್.ಎಸ್.ಮಹದೇವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ನಿತಿನ್‌ವೆಂಕಟೇಶ್, ಅನಿಲ್‌ಕುಮಾರ್, ಬ್ಲಾಕ್ ಮೃಗಾಲಯ ಮಾಜಿ ನಿರ್ದೆಶಕ ಕರೀಗೌಡ, ಮುಖಂಡರಾದ ವೆಂಕಟೇಶ್, ಧನರಾಜ್, ಹುಣಸೆಕುಪ್ಪೆ ಪ್ರಕಾಶ್, ಪಿ.ಮಹದೇವ್, ನಂಜುಂಡಸ್ವಾಮಿ, ಮೋಹನ್ ಮಾಸ್ಟರ್, ಲಕ್ಷ್ಮಣೇಗೌಡ, ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ: ಹಾಜರಾತಿ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಣೆ: ಕಾಲೇಜು ವಿರುದ್ಧ ಧರಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.