ಸಿಬಿಸಿಎಸ್ ಪದ್ಧತಿಯಲ್ಲಿ ಕನ್ನಡ ಕಡೆಗಣನೆ
Team Udayavani, Jul 3, 2018, 12:50 PM IST
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೊಳಿಸುತ್ತಿರುವ ಆಯ್ಕೆ ಆಧಾರಿತ ಗುಣಾಂಕ ಪದ್ಧತಿ(ಸಿಬಿಸಿಎಸ್)ಯಲ್ಲಿ ಕನ್ನಡ ಭಾಷೆ ಕಡೆಗಣಿಸಿರುವುದನ್ನು ಖಂಡಿಸಿ ಹಾಗೂ ಹೊಸ ಪದ್ಧತಿಯಲ್ಲಿನ ಲೋಪ ಸರಿಪಡಿಸುವಂತೆ ಆಗ್ರಹಿಸಿ ಮೈಸೂರು ವಿವಿ ಪದವಿ ಕನ್ನಡ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಮೈಸೂರು ವಿವಿಯ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಸಂಘದ ಸದಸ್ಯರು, ಹಿರಿಯ ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಚಿಂತಕರು ಮೈಸೂರು ವಿವಿಯು ಪ್ರಸಕ್ತ ಸಾಲಿನಿಂದ ಜಾರಿಗೊಳಿಸುತ್ತಿರುವ ಸಿಬಿಸಿಎಸ್ ಪದ್ಧತಿಯಲ್ಲಿ ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ, ವಿವಿಧ ಘೋಷಣೆಗಳನ್ನು ಕೂಗಿದರು.
ಆತಂಕ: ವಿಶ್ವವಿದ್ಯಾಲಯದ ಪದವಿ ವ್ಯಾಸಂಗದ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಭಾಷೆಯ ವ್ಯಾಸಂಗ ಕಡ್ಡಾಯವಾಗಿದೆ. ಆದರೆ ನೂತನ ಸಿಬಿಸಿಎಸ್ ಪದ್ಧತಿಯಿಂದ ಕೇವಲ ಎರಡು ಸೆಮಿಸ್ಟರ್‌ಗಳಲ್ಲಿ ಮಾತ್ರ ಕನ್ನಡ ಅಧ್ಯಯನ ಮಾಡಲು ಸಾಧ್ಯವಾಗಲಿದ್ದು, ನಂತರ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಸೇರಿಸಲಾಗಿದೆ. ಇಂತಹ ಹಲವು ಲೋಪಗಳು ಸಿಬಿಸಿಎಸ್ ಪದ್ಧತಿಯಲ್ಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕನ್ನಡ ಅಧ್ಯಯನವನ್ನೇ ತೆಗೆದು ಹಾಕುವ ಆತಂಕ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಆಕ್ರೋಶ: ವಿವಿಯ ಪದ್ಧತಿಯಲ್ಲಿ ಆಯಾ ವಿಷಯಗಳಿಗೆ ಅನುಗುಣವಾಗಿ ಕನ್ನಡ ಭಾಷೆ ಪಠ್ಯಕ್ರಮ ರಚಿಸಬೇಕು ಹಾಗೂ ಬೋಧನೆ ಮಾಡಬೇಕಿದೆ. ಪದವಿ ಅಧ್ಯಯನದಲ್ಲಿ ಗಣಿತ, ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರ ಶಾಸ್ತ್ರಗಳ ವಿಷಯದ ಜತೆಗೆ ಕನ್ನಡ ಪಠ್ಯವನ್ನು ಅಳವಡಿಸುವುದರಿಂದ ಕನ್ನಡ ಉಳಿಯಲಿದೆ. ಆದರೆ ಯುಜಿಸಿ ಪದವಿ ಪಠ್ಯದಲ್ಲಿ ತಮಿಳು, ತೆಲುಗು ಸೇರಿದಂತೆ ಇನ್ನಿತರ ಭಾಷೆಗೆ ನೀಡಿರುವ ಸ್ಥಾನಮಾನವನ್ನು ಕನ್ನಡಕ್ಕೆ ನೀಡಿಲ್ಲ, ಇದಕ್ಕೆ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯ ಧೋರಣೆಯೇ ಕಾರಣ.
ಇಂತಹ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಕರ್ನಾಟಕ ಯಾವುದೇ ವಿವಿಗಳಲ್ಲಿ ಓದುವ ವಿದ್ಯಾರ್ಥಿಗಳು ಕನ್ನಡ ವ್ಯಾಸಂಗ ಮಾಡದೆಯೇ ತಮ್ಮ ಪದವಿ ಮುಗಿಸಬಹುದಾದ ದುಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಮಳಲಿ ವಸಂತಕುಮಾರ್, ಜನಪದ ತಜ್ಞ ಪ್ರೊ.ಹಿ.ಶಿ. ರಾಮಚಂದ್ರಗೌಡ, ಚಿಂತಕರಾದ ಪ್ರೊ.ಜಿ.ಎಚ್.ನಾಯಕ್, ಚ. ಸರ್ವಮಂಗಳಾ, ಹೋರಾಟಗಾರರ ಪ.ಮಲ್ಲೇಶ್, ಲೇಖಕ ಬನ್ನೂರು ಕೆ.ರಾಜು, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಪ್ರೊ.ಜಿ.ಬಿ.ವೀರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಪದವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಎಚ್.ಆರ್.ತಿಮ್ಮೇಗೌಡ, ಸಂಚಾಲಕ ಡಾ.ಮ.ರಾಮಕೃಷ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಬೋಧನಾ ಅವಧಿ ಕಡಿತ: ಒಂದೆಡೆ ಕನ್ನಡ ಭಾಷೆಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ತೋರಿರುವ ಜತೆಗೆ ಕನ್ನಡಕ್ಕೆ ನೀಡುತ್ತಿದ್ದ ಬೋಧನಾ ಅವಧಿ 4 ಗಂಟೆ ಬದಲು 3 ಗಂಟೆಗೆ ಕಡಿತಗೊಳಿಸಲಾಗಿದೆ. ಕನ್ನಡವನ್ನು ಕೇವಲ ಭಾಷೆಯನ್ನಾಗಿ ಕಲಿಸುವುದು ಮಾತ್ರವಲ್ಲದೆ, ಬದುಕಿನ ಮೌಲ್ಯವನ್ನಾಗಿ ಅಥೆಸುವ, ಮನದಟ್ಟು ಮಾಡಿಸಿ ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆ ಇದಾಗಿದೆ.
ಇದಕ್ಕಾಗಿ 3 ಗಂಟೆ ಅವಧಿ ನೀಡಿರುವುದು ಅತ್ಯಂತ ಕಡಿಮೆಯಾಗಿದ್ದು, ಹೀಗಾಗಿ ಈ ಹಿಂದಿನಂತೆ 4 ಗಂಟೆಗಳ ಬೋಧನಾ ಅವಧಿ ನೀಡಬೇಕೆಂದು ಪ್ರಾಧ್ಯಾಪಕರು ಒತ್ತಾಯಿಸಿದರು. ಇದೇ ವೇಳೆ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅವರನ್ನು ಭೇಟಿಯಾದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.