Karnataka BJP: ನನಗೆ ಪಕ್ಷ ಮುಖ್ಯ, ಎಲ್ಲಾ ಟೀಕೆ ಸಹಿಸಿಕೊಳ್ಳುತ್ತೇನೆ….: ವಿಜಯೇಂದ್ರ

ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ..

Team Udayavani, Jan 30, 2025, 1:37 PM IST

Karnataka BJP: The party is important to me, I will tolerate all criticism….: BY Vijayendra

ಮೈಸೂರು: ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ತಮ್ಮ ವಿರುದ್ದ ಟೀಕೆ ಮಾಡಿರುವ ಸಂಸದ ಡಾ| ಕೆ.ಸುಧಾಕರ್‌ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಪಕ್ಷ ಮುಖ್ಯ, ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, “ನನಗೆ ಸುಧಾಕರ್ ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೆಸೇಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿತ್ತು. ಹೀಗಾಗಿ ಭೇಟಿ ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕರೆ ಮಾಡಿಲ್ಲ. ಅಂತಹ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಟೀಕೆ ಮಾಡಿದ್ದಾರೆಂದು ಗೊತ್ತಿಲ್ಲ ಎಂದರು.

ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಡಿಯೂರಪ್ಪನವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ. ಸುಧಾಕರ್ ಬಾಯಲ್ಲಿ ಯುದ್ಧದ ಮಾತು ಯಾಕೆ ಬಂತೆಂದು ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನೇಮಕ ವಿಚಾರವಾಗಿ ಮಾತನಾಡಿದ ಅವರು, ನೇಮಕದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ನನ್ನ ಯಾವ ಪಾತ್ರವೂ ಬರುವುದಿಲ್ಲ. ಅಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಏಕಂದರೆ ಅದರ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಉಸ್ತುವಾರಿಗಳು ಹೈಕಮಾಂಡ್ ಗೆ ಹೆಸರು ಕಳುಹಿಸಿದ್ದಾರೆ. ಹೈಕಮಾಂಡ್ ಒಂದು ತೀರ್ಮಾನ ಮಾಡಿದ್ದಾರೆ. ಇದರಲ್ಲಿ ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆಯಿದೆ. ಹೀಗಾಗಿ ಈ ರೀತಿ ಮಾತನಾಡಿದ್ದಾರೆ. ಇದರಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುವುದೆನ್ನಲ್ಲ ನಾನು ಹೇಳುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಈಗಾಗಿ ಎಲ್ಲಾ ಟೀಕೆಗಳಿಂದ ಪಾಠ ಕಲಿತಿದ್ದೇನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಎಲ್ಲಾ ಹಂತಕ್ಕೂ ಚುನಾವಣೆ ನಡೆಯುತ್ತಿದೆ. ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಎಲ್ಲದಕ್ಕೂ ನಮ್ಮಲ್ಲಿ ಆಂತರಿಕ ಚುನಾವಣೆಗಳು ಇದೆ. ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಾಗಿದೆ. ಏನಾಗುತ್ತದೆ ಎಂದು ನೋಡೊಣಾ ಎಂದರು.

ಕಾಂಗ್ರೆಸ್ ನವರು ಆಯ್ಯೋಗರು

ಕುಂಭಮೇಳವನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನವರೆಲ್ಲಾ ಅಯ್ಯೋಗರು. 144 ವರ್ಷದ ನಂತರ ನಡೆಯುತ್ತಿರುವ ಕುಂಭಮೇಳವನ್ನು ಬಾಯಿಗೆ ಬಂದಂತೆ ಇವರು ಟೀಕೆ ಮಾಡುತ್ತಿದ್ದಾರೆ. ಹಿಂದುಗಳ ಭಾವನೆಗೆ ಧಕ್ಕೆ ತರುವುದೇ ಕಾಂಗ್ರೆಸ್ ನವರ ಉದ್ದೇಶ. ನಿನ್ನೆಯ ಕಾಲ್ತುಳಿತ ಘಟನೆ ನಡೆಯಬಾರದಿತ್ತು. ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ಪ್ರಧಾನಮಂತ್ರಿ ಬಣ್ಣದ ಬಗ್ಗೆ ಸಂತೋಷ್ ಲಾಡ್ ಟೀಕೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, ಸಂತೋಷ್ ಲಾಡ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಪ್ರಧಾನಿಯವರನ್ನು ಟೀಕೆ ಮಾಡಲು ಯಾವನ್ ರೀ ಅವನು ಸಂತೋಷ್ ಲಾಡ್, ಯಾರ್ ರೀ ಅವನು. ಬಾಯಿಗೆ ಬಂದಂತೆ ಮಾತನಾಡಿದರೆ ನಡೆಯುತ್ತದೆ ಅಂದುಕೊಂಡಿದ್ದಾನೆ. ಇವನು ಮಾತನಾಡಿದ ತಕ್ಷಣ ಪ್ರಧಾನಮಂತ್ರಿಗಳ ಘನತೆ ಕಡಿಮೆಯಾಗುವುದಿಲ್ಲ. ಹಾದಿ ಬೀದಿಯಲ್ಲಿ ಇಂತಹವರು ಮಾತನಾಡುವುದರಿಂದ ಪ್ರಧಾನಿ ಘನತೆಗೆ ಚ್ಯುತಿ ಬರುವುದಿಲ್ಲ ಎಂದರು.

ಟಾಪ್ ನ್ಯೂಸ್

Yellapur: ಕಾರು – ಲಾರಿ ನಡುವೆ ಭೀಕರ ಅಪಘಾತ… ತಾಯಿ, ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Yellapur: ಕಾರು – ಲಾರಿ ಭೀಕರ ಅಪಘಾತ… ತಾಯಿ ಸೇರಿ ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು

Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

20-push-up

Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yellapur: ಕಾರು – ಲಾರಿ ನಡುವೆ ಭೀಕರ ಅಪಘಾತ… ತಾಯಿ, ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Yellapur: ಕಾರು – ಲಾರಿ ಭೀಕರ ಅಪಘಾತ… ತಾಯಿ ಸೇರಿ ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

MUDA Case: ಮುಡಾ ಕೇಸ್‌ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌ ನೀಡಿದ ಲೋಕಾಯುಕ್ತ

MUDA Case: ಮುಡಾ ಕೇಸ್‌ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌ ನೀಡಿದ ಲೋಕಾಯುಕ್ತ

Hubballi: ಬಡ್ಡಿ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ…

Hubballi: ಬಡ್ಡಿ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yellapur: ಕಾರು – ಲಾರಿ ನಡುವೆ ಭೀಕರ ಅಪಘಾತ… ತಾಯಿ, ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Yellapur: ಕಾರು – ಲಾರಿ ಭೀಕರ ಅಪಘಾತ… ತಾಯಿ ಸೇರಿ ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು

Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು

Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ

Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.