ಕರ್ನಾಟಕದ್ದು ಹಿತ್ತಾಳೆ ಸಾಧನೆ: ಸಿಪಿಕೆ ವಿಷಾದ
Team Udayavani, May 8, 2017, 12:53 PM IST
ಮೈಸೂರು: ಕನ್ನಡನಾಡು ಅಸ್ತಿತ್ವಕ್ಕೆ ಬಂದು ಅನೇಕ ವರ್ಷಗಳಾದರೂ ಕರ್ನಾಟಕ ನಿಗದಿತ ರೀತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ವಿಷಾದಿಸಿದರು. ಭಾರತ ಕನ್ನಡ ಪರಿಷತ್ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಉದ್ಘಾಟನೆ, ಪರಿಷತ್ತಿನ ಲಾಂಛನ ಮತ್ತು ಚೆಂಗುಲಾಬಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರೂಪುಗೊಂಡು 65 ವರ್ಷ ಕಳೆದರೂ ಕನ್ನಡದ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಇನ್ನೂ ಪ್ರಸ್ತುತ ಸಂದರ್ಭದಲ್ಲಿ ಕನ್ನಡ ನಾಡು ಅಸ್ತಿತ್ವಕ್ಕೆ ಬಂದಿದೆ ಎಂದು ವಜ್ರಮಹೋತ್ಸವ ಆಚರಿಸಬೇಕಿತ್ತು. ಆದರೆ, ದುರಂತವೆಂದರೆ ಚಿನ್ನ, ಬೆಳ್ಳಿ ಮಹೋತ್ಸವವಿರಲಿ ಹಿತ್ತಾಳೆ ಆಚರಣೆಯು ಆಗಿಲ್ಲ. ಹೀಗಾಗಿ ನಮ್ಮದು ಒಂದು ರೀತಿಯ ಹಿತ್ತಾಳೆ ಸಾಧನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದೆಡೆ ಜಗತ್ತು ವಿಕಾಸದತ್ತ ಸಾಗಿದರೆ, ಮತ್ತೂಂದೆಡೆ ಜಾಗತೀಕರಣ ಎಂಬುದು ಎಲ್ಲೆಡೆ ಆವರಿಸಿದೆ. ವಿಶ್ವದ ಪರಂಪರೆ ಹೋಲಿಸಿದರೆ, ಭಾರತಕ್ಕೆ ಅಖಂಡ ಚರಿತ್ರೆಯಿದ್ದು, ನಮ್ಮ ರಾಷ್ಟ್ರದ ಪರಂಪರೆ ಬಹಳ ಗಟ್ಟಿಯಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಭಾಷೆಯ ಅಸ್ತಿತ್ವವವೇ ಪ್ರಶ್ನಾರ್ಹವಾಗಿರುವ ಪರಿಣಾಮ ಕನ್ನಡ ಎಂಬುದು ಕಂಗ್ಲಿಷ್ ಆಗಿರುವುದರಿಂದ ಎಲ್ಲವೂ ಕಂಗ್ಲಿಷ್ ಮಯವಾಗಿದೆ. ಈ ಹಿನ್ನೆಲೆ ಪ್ರತಿಯೊಬ್ಬರು ಭಾಷೆಯಲ್ಲಿ ಕೊಂಡು-ಕೊಳ್ಳುವಿಕೆ ಮಾಡಿದಾಗ ಮಾತ್ರ ಜಾಗತೀಕರಣದ ನಡುವೆ ಭಾರತ ಮತ್ತು ಕನ್ನಡವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಹಿರಿಯ ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಚಂಪಾಶಿವಣ್ಣ, ರಾಜಾÂಧ್ಯಕ್ಷ ರಾಘವೇಂದ್ರಕುಮಾರ್, ಹಿರಿಯ ಪೋಷಕಿ ಎ.ಹೇಮಗಂಗಾ, ಕೆ.ಕೆ. ಬಾಲಕೃಷ್ಣ ವರ್ಮಾ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.